‘ಪುಷ್ಪ 2’ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಪ್​ಡೇಟ್​; ಮತ್ತೆ ಆ ಯಶಸ್ವಿ ದಿನಾಂಕದ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​?

ಈಗಾಗಲೇ ವರ್ಷದ ಮೊದಲ ತಿಂಗಳು ಕಳೆದಿದೆ. ‘ಪುಷ್ಪ 2’ ಚಿತ್ರದ ಸಾಕಷ್ಟು ಕೆಲಸಗಳು ಬಾಕಿ ಇವೆ. ಅಷ್ಟರೊಳಗೆ ರಿಲೀಸ್​ ಡೇಟ್​ ಕುರಿತು ಸುದ್ದಿ ಹರಿದಾಡುತ್ತಿದೆ.

‘ಪುಷ್ಪ 2’ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಪ್​ಡೇಟ್​; ಮತ್ತೆ ಆ ಯಶಸ್ವಿ ದಿನಾಂಕದ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​?
‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 02, 2022 | 9:43 AM

‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್​ (Allu Arjun) ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಿದೆ. ಅವರು ಊಹಿಸದ ರೀತಿಯಲ್ಲಿ ಈ ಸಿನಿಮಾ ಕಲೆಕ್ಷನ್​ ಮಾಡಿದೆ. ಅದರಲ್ಲೂ ಬಾಲಿವುಡ್​ ಒಂದರಲ್ಲೇ ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಿಂದ ಚಿತ್ರತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ‘ಪುಷ್ಪ 2’ (Pushpa 2) ಚಿತ್ರವನ್ನೂ ಹೆಚ್ಚು ಕಾಳಜಿ ವಹಿಸಿ ಶೂಟ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈಗ ಈ ಚಿತ್ರದ ರಿಲೀಸ್​ ಡೇಟ್​ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬರುತ್ತಿದೆ. ‘ಪುಷ್ಪ ಪಾರ್ಟ್​ 1’ ಚಿತ್ರ 2021ರ ಡಿ.17ಕ್ಕೆ ಬಿಡುಗಡೆ ಆಗಿ ಯಶಸ್ವಿ ಆಯಿತು. ಈಗ ಮತ್ತೆ ಡಿ.17ರ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಅಂದರೆ, 2022ರ ಡಿಸೆಂಬರ್​ 17ರಂದು ಎರಡನೇ ಪಾರ್ಟ್​ ರಿಲೀಸ್​ ಮಾಡಲು ಪ್ಲ್ಯಾನ್​ ರೂಪಿಸಿದೆ ಎಂಬ ಗುಸುಗುಸು ಕೇಳಿಬಂದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ‘ಪುಷ್ಪ’ (Pushpa Movie) ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿತ್ತು. ಆದರೆ, ಸಾಕಷ್ಟು ಅಡೆತಡೆಗಳನ್ನು ಚಿತ್ರ ಎದುರಿಸಿತ್ತು. ಇದರಲ್ಲಿ ಮುಖ್ಯವಾಗಿ ಚಿತ್ರತಂಡಕ್ಕೆ ಕೊವಿಡ್​ನಿಂದ ತೊಂದರೆ ಆಗಿತ್ತು. ಇದಲ್ಲದೆ, ಕೆಲವರಿಗೆ ಡೆಂಘೆ ಕಾಣಿಸಿಕೊಂಡಿದ್ದರಿಂದ ಸಿನಿಮಾ ಶೂಟಿಂಗ್​ ವಿಳಂಬವಾಗಿತ್ತು. ಕಾಡಿನಲ್ಲಿ ಶೂಟ್​ ಮಾಡುವುದು ಕೂಡ ಒಂದು ಚಾಲೆಂಜ್​ ಆಗಿತ್ತು. ಹೀಗಾಗಿ, ಚಿತ್ರತಂಡ ‘ಪುಷ್ಪ’ಕ್ಕಾಗಿ ಸಾಕಷ್ಟು ಶ್ರಮವಹಿಸಿದೆ. ಇದರ ಪರಿಣಾಮವಾಗಿಯೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ. ಈಗ ಪಾರ್ಟ್​ 2 ಮೇಲೆ ಎಲ್ಲರ ಕಣ್ಣಿದೆ.

ಈಗಾಗಲೇ ಜನವರಿ ತಿಂಗಳು ಕಳೆದಿದೆ. ಸಿನಿಮಾವನ್ನು 2022ರ ಡಿಸೆಂಬರ್​ನಲ್ಲೇ ತೆರೆಗೆ ತರಲು ಪ್ಲ್ಯಾನ್​ ರೂಪಿಸಿದ್ದು ಹೌದಾದಲ್ಲಿ ಸಿನಿಮಾ ತಂಡಕ್ಕೆ ಉಳಿದಿದ್ದು ಕೇವಲ 10 ತಿಂಗಳು ಮಾತ್ರ. ಆ ಹತ್ತು ತಿಂಗಳಲ್ಲಿ ಶೂಟಿಂಗ್​ ಪೂರ್ಣಗೊಳ್ಳಬೇಕು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಮುಗಿಯಬೇಕು. ಇದರ ಜತೆಗೆ ಪ್ರಚಾರದ ಕಾರ್ಯ ಕೂಡ ನಡೆಯಬೇಕು. ಇದು ಚಿತ್ರತಂಡದ ಪಾಲಿಗೆ ನಿಜಕ್ಕೂ ಚಾಲೆಂಜಿಂಗ್​. ಇದನ್ನು ಚಿತ್ರತಂಡ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ಪುಷ್ಪ 2’ ಸಿನಿಮಾ ಜತೆಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡು, ನಟಿಸಲು ಅಲ್ಲು ಅರ್ಜುನ್​ ಪ್ಲ್ಯಾನ್​ ರೂಪಿಸಿದ್ದರು. ಆದರೆ, ಡಿಸೆಂಬರ್​ 17ಕ್ಕೆ ಪಾರ್ಟ್​ 2 ತರಬೇಕು ಎನ್ನುವ ಇಚ್ಛೆಯನ್ನು ಅಲ್ಲು ಅರ್ಜುನ್​ ಮುಂದೆ ಇಟ್ಟಿದ್ದಾರೆ ನಿರ್ದೇಶಕ ಸುಕುಮಾರ್​. ಈ ಕಾರಣಕ್ಕೆ ಇದೊಂದೇ ಪ್ರಾಜೆಕ್ಟ್ ​ಮೇಲೆ ಗಮನ ಹರಿಸಲು ಅಲ್ಲು ಅರ್ಜುನ್​ ನಿರ್ಧರಿಸಿದ್ದಾರೆ.

ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಸಾಕಷ್ಟು ಬ್ಯುಸಿ ಇದ್ದಾರೆ. ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೂಡ ಈ ಸಿನಿಮಾದ ಶೂಟಿಂಗ್​ ಬೇಗ ಮುಗಿಸಲು ಕೆಲ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎನ್ನುವ ಮಾತಿದೆ. ಆ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:

ಹಿಂದಿ ಡಬ್ಬಿಂಗ್​​ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್​’ ಗಳಿಸಿದ್ದೆಷ್ಟು?

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ