ವಿಜಯ್ ದೇವರಕೊಂಡ ಜೊತೆ ನಟಿಸೋವಾಗ ಅನನ್ಯಾಗೆ ಹಿತವೆನಿಸಿಲ್ಲ ಏಕೆ?
ಲೈಗರ್ ಚಿತ್ರದಲ್ಲಿ ಅನನ್ಯಾ ಪಾಂಡೆ ಅವರ ಪಾತ್ರಕ್ಕೆ ಸೂಕ್ತವಲ್ಲ ಎಂಬುದನ್ನು ಚಂಕಿ ಪಾಂಡೆ ಅವರು ಒಪ್ಪಿಕೊಂಡಿದ್ದಾರೆ. ಚಿತ್ರದ ವೈಫಲ್ಯದ ಬಳಿಕ ಈ ಅಂಶ ಬಹಿರಂಗಗೊಂಡಿದೆ. ಅನನ್ಯಾ ಅವರಿಗೆ ಚಿತ್ರದಲ್ಲಿ ನಟಿಸುವ ಬಗ್ಗೆ ಆರಂಭದಲ್ಲಿಯೇ ಅನುಮಾನವಿತ್ತು. ಆದರೆ ಚಂಕಿ ಪಾಂಡೆ ಅವರು ಚಿತ್ರದಲ್ಲಿ ನಟಿಸಲು ಒತ್ತಾಯಿಸಿದ್ದರು. ಈ ಚಿತ್ರ ಅವರ ವೃತ್ತಿಜೀವನದಲ್ಲಿ ಒಂದು ತಿರುವು ಮೂಡಿಸಬಹುದು ಎಂದು ಅವರು ಭಾವಿಸಿದ್ದರು.

ನಟಿ ಅನನ್ಯಾ ಪಾಂಡೆ ಅವರು ಸ್ಟಾರ್ ನಟಿಯ ಮಗಳು. ಆದರೆ, ಅವರಿಗೆ ಅಂದುಕೊಂಡಂತ ಗೆಲುವು ಮಾತ್ರ ಸಿಗುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಚಂಕಿ ಪಾಂಡೆ ಮಗಳು ಎನ್ನುವ ಹಣೆಪಟ್ಟಿ ಕಾರಣದಿಂದ ಅವರು ಟೀಕೆಗೆ ಒಳಗಾಗಿದ್ದೂ ಇದೆ. ಅವರಿಗೆ ನಟನೆ ಬರೋದಿಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಅವರು ‘ಲೈಗರ್’ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಅನ್ಕಂಫರ್ಟ್ ಫೀಲ್ ಕೊಟ್ಟಿತ್ತಂತೆ. ಈ ಬಗ್ಗ ಚಂಕಿ ಪಾಂಡೆ ಮಾತನಾಡಿದ್ದಾರೆ.
‘ಲೈಗರ್’ ಚಿತ್ರದ ಬಗ್ಗೆ ಅನನ್ಯಾ ಪಾಂಡೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪುರಿ ಜಗನ್ನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದ ಮೂಲಕ ವೃತ್ತಿ ಬದುಕು ಬದಲಾಗಬಹುದು ಎಂದು ಅವರು ಅಂದುಕೊಂಡಿದ್ದರು. ಈಗ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಫ್ಲಾಪ್ ಎನಿಸಿಕೊಂಡಿತು. ಈ ಸಿನಿಮಾ ಮಾಡುವಾಗ ಅವರಿಗೆ ಒಂದು ಭಯ ಇತ್ತಂತೆ.
ಅನನ್ಯಾ ಪಾಂಡೆ ಅವರದ್ದು ಇನ್ನೂ ಬೇಬಿ ಫೇಸ್. ಅವರು ಪ್ರಬುದ್ಧವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ, ‘ಲೈಗರ್’ ಚಿತ್ರಕ್ಕೆ ತಾವು ಸೂಕ್ತ ಹೌದೋ ಅಥವಾ ಇಲ್ಲವೋ ಎನ್ನುವ ಭಯ ಕಾಡಿತ್ತು. ಇದು ಅವರ ಮೊದಲ ದೊಡ್ಡ ಕಮರ್ಷಿಯಲ್ ಸಿನಿಮಾ ಆಗಿತ್ತು.
‘ನೀನು ಈ ಸಿನಿಮಾನ ಮಾಡಲೇಬೇಕು ಎಂದು ಹೇಳಿದೆ. ಆದರೆ, ಅವಳು ಆರಂಭದಲ್ಲಿ ಮಾಡೋದಿಲ್ಲ ಎಂದಳು. ನಾನು ಈ ಚಿತ್ರ ಮಾಡಲು ತುಂಬಾನೇ ಯಂಗ್ ಎಂದು ಹೇಳುತ್ತಿದ್ದಳು’ ಎಂದಿದ್ದಾರೆ ಚಂಕಿ ಪಾಂಡೆ. ಆದರೆ ಸಿನಿಮಾ ಸೋತ ಬಳಿಕ, ಅನನ್ಯಾಗೆ ಈ ಪಾತ್ರ ಸೂಕ್ತವಲ್ಲ ಎನಿಸುತ್ತು ಎಂದು ಒಪ್ಪಿಕೊಂಡರು.
ಇದನ್ನೂ ಓದಿ: ಅನನ್ಯಾ ಪಾಂಡೆ ಧರಿಸಿರುವ ಈ ಕೆಂಪು ಉಡುಗೆಯ ಬೆಲೆ ಎಷ್ಟು ಗೊತ್ತೆ?
‘ಅದು ಕಮರ್ಷಿಯಲ್ ಆಗಿ ದೊಡ್ಡ ಸಿನಿಮಾ. ಆದರೆ, ಅವಳು ಏನು ಅಂದುಕೊಂಡಿದ್ದಳೋ ಅದು ಸತ್ಯ. ಆ ಘಟನೆ ಬಳಿಕ ನಾನು ಅವಳಿಗೆ ಒತ್ತಡ ಹಾಕುವುದನ್ನೇ ನಿಲ್ಲಿಸಿದೆ. ನನ್ನದು ತಪ್ಪಿರಬಹುದು. ನಾನು ಓಲ್ಡ್ಸ್ಕೂಲ್ ತರಹದವನು. ನನಗೆ ಏನು ಗೊತ್ತಿಲ್ಲ’ ಎಂದಿದ್ದಾರೆ ಚಂಕಿ ಪಾಂಡೆ.
‘ಲೈಗರ್’ ಚಿತ್ರ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ವಿಜಯ್ ದೇವರಕೊಂಡ ಅವರು ಸಾಕಷ್ಟು ಸಮಸ್ಯೆ ಎದುರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:30 pm, Fri, 7 February 25