ಪ್ರೆಗ್ನೆಂಟ್ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ನಟಿಯರು ಇವರೇ ನೋಡಿ..

ಅನುಷ್ಕಾ ಶರ್ಮಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಜೋರಾಗಿದೆ. ಅನುಷ್ಕಾ ರೀತಿಯಲ್ಲೇ ಅನೇಕ ನಟಿಯರು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೆಗ್ನೆಂಟ್ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ನಟಿಯರು ಇವರೇ ನೋಡಿ..
ಪ್ರೆಗ್ನೆಂಟ್ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ನಟಿಯರು ಇವರೇ ನೋಡಿ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 11, 2023 | 11:12 AM

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ (Virat Kohli) ದಂಪತಿಗೆ ವಮಿಕಾ ಹೆಸರಿನ ಮಗಳಿದ್ದಾಳೆ. ಮಗಳ ಮುಖವನ್ನು ಈ ದಂಪತಿ ರಿವೀಲ್ ಮಾಡಿಲ್ಲ. ಈ ಮಧ್ಯೆ ಅನುಷ್ಕಾ ಮತ್ತೊಂದು ಮಗುವಿಗೆ ಜನ್ಮ ನೀಡಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತೀಚೆಗೆ ಅನುಷ್ಕಾ ಶರ್ಮಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪ್ರತಿ ಬಾರಿ ಟೀಂ ಇಂಡಿಯಾ ಮ್ಯಾಚ್ ಇದ್ದಾಗ ಅನುಷ್ಕಾ ಶರ್ಮಾ ಪಂದ್ಯ ವೀಕ್ಷಿಸಲು ಬರುತ್ತಿದ್ದರು. ಆದರೆ, ಈ ಬಾರಿ ಅಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. ಈ ಕಾರಣದಿಂದ ಅವರು ಪ್ರೆಗ್ನೆಂಟ್ ಎನ್ನುವ ಸುದ್ದಿ ಜೋರಾಗಿದೆ. ಅನುಷ್ಕಾ ರೀತಿಯಲ್ಲೇ ಅನೇಕ ನಟಿಯರು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಆಲಿಯಾ ಭಟ್

ಆಲಿಯಾ ಹಾಗೂ ರಣಬೀರ್ ಕಪೂರ್ ಪ್ರೀತಿಸಿ ಮದುವೆ ಆದವರು. ಮದುವೆಗೂ ಮೊದಲೇ ಆಲಿಯಾ ಭಟ್ ಪ್ರೆಗ್ನೆಂಟ್ ಆಗಿದ್ದರು. ಇವರು ಪ್ರೆಗ್ನೆನ್ಸಿ ವಿಚಾರವನ್ನು 12 ವಾರಗಳ ಕಾಲ ಮುಚ್ಚಿಟ್ಟಿದ್ದರು. ಮದುವೆ ಆದ ಕೆಲವೇ ತಿಂಗಳಲ್ಲಿ ಆಲಿಯಾ ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಘೋಷಣೆ ಮಾಡಲಾಯಿತು. ಆಲಿಯಾ ಪ್ರೆಗ್ನೆಂಟ್ ಸುದ್ದಿ ಕೇಳಿ ಅನೇಕರಿಗೆ ಶಾಕ್ ಆಗಿತ್ತು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರು. ಅವರು ಮಗು ಜನಿಸುವವರೆಗೂ ಈ ವಿಚಾರವನ್ನು ಮುಚ್ಚಿಟ್ಟಿದ್ದರು.

ಶಿಲ್ಪಾ ಸಕ್ಲಾನಿ

ಕಿರುತೆರೆ ನಟಿ ಶಿಲ್ಪಾ ಸಕ್ಲಾನಿ ಕೂಡ ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಮುಚ್ಚಿಟ್ಟಿದ್ದರು. ಅವರು ಅಪೂರ್ವ ಅಗ್ನಿಹೋತ್ರಿ ಅವರನ್ನು ಮದುವೆ ಆಗಿದ್ದಾರೆ. ಇವರು 2004ರಲ್ಲಿ ಮದುವೆ ಆದರು. 18 ವರ್ಷದ ಬಳಿಕ ದಂಪತಿ ಮಗುವನ್ನು ಪಡೆದರು. ಮಗು ಜನಿಸಿ ಒಂದು ತಿಂಗಳ ಬಳಿಕ ಅವರು ಈ ವಿಚಾರ ರಿವೀಲ್ ಮಾಡಿದರು.

ಶ್ರೀಯಾ ಶರಣ್

‘ಕಬ್ಜ’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡವರು ಶ್ರೀಯಾ ಶರಣ್. ಇವರು ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ಆಂಡ್ರೇ ಕೊಸ್ಚೆವ್ ಅವರನ್ನು 2018ರಲ್ಲಿ ಮದುವೆ ಆದರು. ಮಗು ಜನಿಸಿ ಒಂದು ವರ್ಷದ ಬಳಿಕ ಅವರು ಮಾಹಿತಿ ರಿವೀಲ್ ಮಾಡಿದರು.

ನೇಹಾ ಧೂಪಿಯಾ

ಅಂಗದ್ ಬೇಡಿ ಜೊತೆ ನೇಹಾ ಧೂಪಿಯಾ ವಿವಾಹ ಆದರು. ಈ ಮೂಲಕ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಅವರು ಮಗು ಜನಿಸಿದ ಆರು ತಿಂಗಳವರೆಗೂ ವಿಚಾರವನ್ನು ಮುಚ್ಚಿಟ್ಟಿದ್ದರು. ಆ ಬಳಿಕ ನೇಹಾ  ಮಾಹಿತಿ ಹಂಚಿಕೊಂಡರು. ಮಗು ಜನಿಸಿದೆ ಎನ್ನುವ ವಿಚಾರ ಗೊತ್ತಾದರೆ ಆಫರ್ ಕಡಿಮೆ ಆಗಬಹುದು ಎನ್ನುವ ಭಯ ಅವರನ್ನು ಕಾಡುತ್ತಾ ಇತ್ತು.

ರಾಣಿ ಮುಖರ್ಜಿ

ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ರಾಣಿ ಮುಖರ್ಜಿ. ಅವರು ಯಶ್ ರಾಜ್ ಫಿಲ್ಮ್ಸ್ ಮುಖ್ಯಸ್ಥ ಆದಿತ್ಯ ಚೋಪ್ರಾ ಅವರನ್ನು 2014ರಲ್ಲಿ ಮದುವೆ ಆದರು. ಅವರು ಮದುವೆ ಆದ ವಿಚಾರವನ್ನು ಪಬ್ಲಿಕ್​ನಲ್ಲಿ ಹೇಳಿಕೊಂಡಿರಲಿಲ್ಲ. ಮಗು ಜನಿಸಿದ ವಿಚಾರದಲ್ಲೂ ಅವರು ಇದೇ ತರಹ ಮಾಡಿದ್ದರು.

ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸೋಕೆ ರೆಡಿ ಆದ ನಯನತಾರಾ    

ನಯನತಾರಾ

‘ಜವಾನ್’ ಸಿನಿಮಾದಲ್ಲಿ ನಟಿಸುವ ಮೂಲಕ ನಯನತಾರಾ ಬಾಲಿವುಡ್ ಮಂದಿಗೆ ಹತ್ತಿರವಾಗಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್​ ಅವರನ್ನು ಮದುವೆ ಆದ ಆರೇ ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಮಗು ಹೊಂದುತ್ತಿರುವ ವಿಚಾರದಲ್ಲಿ ಗುಟ್ಟು ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ