‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ

ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಹಾಡುಗಳ ಅನಧಿಕೃತ ರಿಮಿಕ್ಸ್ ಮತ್ತು ಎಐ ಬಳಸಿ ಧ್ವನಿ ನಕಲು ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ನೈತಿಕತೆಯನ್ನು ಉಲ್ಲಂಘಿಸುವ ಈ ಕೃತ್ಯಗಳಿಂದ ಸಂಗೀತಗಾರರಿಗೆ ಆರ್ಥಿಕ ಹಾನಿಯಾಗುವುದಲ್ಲದೆ, ಉದ್ಯೋಗ ನಷ್ಟವಾಗುವ ಸಾಧ್ಯತೆಯೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇದಕ್ಕೆ ಕಡಿವಾಣ ಹಾಕದಿದ್ದರೆ ಕೆಲಸ ಹೋಗುತ್ತದೆ’; ಎಆರ್ ರೆಹಮಾನ್ ಆತಂಕ
ರೆಹಮಾನ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 25, 2024 | 2:29 PM

ಮ್ಯೂಸಿಕ್ ಕಂಪೋಸರ್ ಎಆರ್ ರೆಹಮಾನ್ ಅವರು ಚಿತ್ರರಂಗದಲ್ಲಿ ಇದ್ದು 30 ವರ್ಷಗಳು ಕಳೆದಿವೆ. ಅವರು ಕಂಪೋಸ್ ಮಾಡಿರುವ ಸಾಂಗ್​ಗಳು ಸಾಕಷ್ಟಿವೆ. ಅವರ ಹಾಡುಗಳನ್ನು ಕೆಲವರು ಒಪ್ಪಿಗೆ ಇಲ್ಲದೆ ರಿಮಿಕ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ರೆಹಮಾನ್ ಅವರಿಗೆ ಬೇಸರ ಇದೆ. ಈ ವಿಚಾರವಾಗಿ ಎಆರ್​ ರೆಹಮಾನ್ ಅವರು ಮಾತನಾಡಿದ್ದಾರೆ. ಇದನ್ನು ಅವರು ಖಂಡಿದ್ದಾರೆ.

‘ನಾನು ಯಾವಾಗಲೂ ಎಥಿಕ್ಸ್​ನ ಫಾಲೋ ಮಾಡುತ್ತೇನೆ. ಮರುಕಲ್ಪನೆ ಹೆಸರಲ್ಲಿ ನೀವು ಸಿನಿಮಾದ ಹಾಡನ್ನು ತೆಗೆದುಕೊಂಡು ಅದನ್ನು ಆರು ವರ್ಷಗಳ ನಂತರ ಮತ್ತೊಂದು ಸಿನಿಮಾದಲ್ಲಿ ಬಳಸಲು ಸಾಧ್ಯವಿಲ್ಲ. ಯಾವುದೇ ಒಪ್ಪಿಗೆ ಇಲ್ಲದೆ ನೀವು ಹಾಡನ್ನು ರಿಮಿಕ್ಸ್ ಮಾಡಲು ಸಾಧ್ಯವಿಲ್ಲ. ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಬೇಕಿದ್ದರೆ ಪೋಸ್ಟ್ ಮಾಡಬಹುದು. ಆದರೆ, ಮುಖ್ಯವಾಹಿನಿಗಳಲ್ಲಿ ನೀವು ಪೋಸ್ಟ್ ಮಾಡಬಾರದು’ ಎಂಬ ಅಭಿಪ್ರಾಯವನ್ನು ರೆಹಮಾನ್ ಹೊರಹಾಕಿದ್ದಾರೆ. ‘ಹಮ್ಮಾ ಹಮ್ಮಾ’ ಸೇರಿ ರೆಹಮಾನ್ ಅವರ ಅನೇಕ ಸಾಂಗ್​​ಗಳನ್ನು ಹಿಂದಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವುಗಳನ್ನು ಒಪ್ಪಿಗೆ ಪಡೆದೇ ಮಾಡಲಾಗಿದೆ. ಒಪ್ಪಿಗೆ ಪಡೆಯದೆಯೂ ಅನೇಕ ಹಾಡುಗಳ ಬಳಕೆ ಆಗಿದೆ.

ಎಐ ಬಳಕೆ ಮಾಡಿಕೊಂಡು ಬೇರೆಯವರ ಧ್ವನಿಯನ್ನು ಸುಲಭದಲ್ಲಿ ಕಾಪಿ ಮಾಡಬಹುದು. ಯಾರದ್ದೋ ಧ್ವನಿಯನ್ನು ಇನ್ಯಾರಿಗೋ ಜೋಡಿಸಬಹುದು. ಇದರ ಫಲಿತಾಂಶ ಕೂಡ ಕರಾರುವಕ್ಕಾಗಿಯೇ ಇರುತ್ತದೆ. ಈ ಬಗ್ಗೆ ರೆಹಮಾನ್​ಗೆ ಆತಂಕ ಇದೆ. ‘ಎಐ ಎಂಬುದು ದೊಡ್ಡ ದೆವ್ವ. ಕೆಲವರು ಎಐ ಮೂಲಕ ಖ್ಯಾತ ನಾಮರ ಧ್ವನಿಯನ್ನು ಕಾಪಿ ಮಾಡುತ್ತಿದ್ದಾರೆ. ಇದರಿಂದ ಗಾಯಕರಿಗೆ ಯಾವುದೇ ಹಣ ಸಿಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು. ಜನರು ಕೆಲಸ ಕಳೆದುಕೊಳ್ಳಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್

‘ಎಐ ಮಾಸ್ಟರಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು. ಆದರೆ, ಒಂದು ಟ್ಯೂನ್ ಹುಟ್ಟಲು ಹೃದಯ ಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಫೇಮಸ್ ಗಾಯಕರ ಹಾಡನ್ನು ಇನ್​ಸ್ಟಾಗ್ರಾಮ್​ನಲ್ಲಿ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಇದು ಸರಿ ಅಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:29 pm, Fri, 25 October 24

ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಹಾಸನಾಂಬೆಯ ದರ್ಶನಕ್ಕೆ ಬೆಳಗ್ಗೆ 4 ಗಂಟೆಯಿಂದ ಸರತಿ ಸಾಲಲ್ಲಿ ಭಕ್ತರ ದಂಡು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
KSRTC ಬಸ್​ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್
ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್