AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Allu Arjun: ಇದರಲ್ಲಿ ರಿಯಲ್ ಅಲ್ಲು ಅರ್ಜುನ್ ಯಾರು? ನಿಮಗೆ ಪತ್ತೆ ಹೆಚ್ಚಲು ಸಾಧ್ಯವೇ?

ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಅವರ ಈ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ‘ಅಲಾವೈಂಕುಠಪುರಮುಲೋ’ ಪೋಸ್ ರೀತಿಯಲ್ಲಿ ಅಲ್ಲು ಅರ್ಜುನ್ ಅವರ ಲುಕ್ ಇದೇ ಅನ್ನೋದು ವಿಶೇಷ.

Allu Arjun: ಇದರಲ್ಲಿ ರಿಯಲ್ ಅಲ್ಲು ಅರ್ಜುನ್ ಯಾರು? ನಿಮಗೆ ಪತ್ತೆ ಹೆಚ್ಚಲು ಸಾಧ್ಯವೇ?
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
| Edited By: |

Updated on:Mar 29, 2024 | 9:25 AM

Share

ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಸದ್ಯ ‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರಿಗೆ ಒಂದು ಹೆಮ್ಮೆಯ ಕ್ಷಣ ಒದಗಿ ಬಂದಿದೆ. ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂಗೆ ತೆರಳಿ ತಮ್ಮದೇ ಪ್ರತಿಮೆಯನ್ನು ಅವರು ಅನಾವರಣ ಮಾಡಿದ್ದಾರೆ. ಈ ರೀತಿಯ ಅವಕಾಶ ಸಿಗೋದು ತುಂಬಾನೇ ಅಪರೂಪ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರೂ ಸೇಮ್​ ಟು ಸೇಮ್ ಕಾಣುತ್ತಿದ್ದಾರೆ. ಹೀಗಾಗಿ ನಿಜವಾದ ಅಲ್ಲು ಅರ್ಜುನ್ ಯಾರು ಅನ್ನೋದು ಅನೇಕರಿಗೆ ಕನ್​ಫ್ಯೂಸ್ ಆಗಿದೆ.

ಈ ಫೋಟೋದಲ್ಲಿ ನಿಮ್ಮ ಎಡಭಾಗದಲ್ಲಿ ಇರೋದು ನಿಜವಾದ ಅಲ್ಲು ಅರ್ಜುನ್. ಬಲಭಾಗದಲ್ಲಿ ಇರೋದು ಮೇಣದ ಪ್ರತಿಮೆ. ಅಲ್ಲು ಅರ್ಜುನ್ ಅವರು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೇಣದ ಪ್ರತಿಮೆಗೆ ಗ್ರೇ ಬಣ್ಣದ ಪ್ಯಾಂಟ್ ಹಾಕಲಾಗಿದೆ. ಇಡೀ ಫೋಟೋದಲ್ಲಿ ಕಾಣೋದು ಇದೊಂದೇ ವ್ಯತ್ಯಾಸ. ಉಳಿದ ಎಲ್ಲವೂ ಬಹುತೇಕ ಒಂದೇ ರೀತಿ ಇದೆ ಅನ್ನೋದು ವಿಶೇಷ. ಇದನ್ನೂ ಓದಿ: ದುಬೈನಲ್ಲಿ ತಮ್ಮದೇ ಮೇಣದ ಪ್ರತಿಮೆ ಅನಾವರಣ ಮಾಡಿದ ‘ಪುಷ್ಪ 2’ ನಟ ಅಲ್ಲು ಅರ್ಜುನ್​

ಮೇಣದ ಪ್ರತಿಮೆ ಉದ್ಘಾಟನೆ ಬಗ್ಗೆ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ. ‘ನನಗೆ ಇದು ತುಂಬಾನೇ ವಿಶೇಷ ದಿನ. 2003ರಲ್ಲಿ ಇದೇ ದಿನ ಗಂಗೋತ್ರಿ ಸಿನಿಮಾ ರಿಲೀಸ್ ಆಗಿತ್ತು. ಈಗ ನಾನು ದುಬೈನ ಟುಸ್ಸಾಡ್ಸ್​ ಮ್ಯೂಸಿಯಂನಲ್ಲಿ ನನ್ನ ಪ್ರತಿಮೆ ಉದ್ಘಾಟನೆ ಮಾಡುತ್ತಿದ್ದೇನೆ. ಇದು ಮರೆಯಲಾರದ 21 ವರ್ಷಷಗಳ ಪ್ರಯಾಣ. ಈ ಪ್ರಯಾಣದಲ್ಲಿ ನನ್ನ ಜೊತೆ ಇದ್ದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ಉತ್ಕಟ ಪ್ರೀತಿ ಮತ್ತು ಬೆಂಬಲ ತೋರಿದ ನನ್ನ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳು. ಮುಂಬರುವ ವರ್ಷಗಳಲ್ಲಿ ನಿಮ್ಮೆಲ್ಲರನ್ನೂ ಇನ್ನಷ್ಟು ಹೆಮ್ಮೆ ಪಡುವಂತೆ ಮಾಡುವೆ’ ಎಂದು ಅವರು ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ಕುರಿತ ಟ್ವೀಟ್

ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಅವರ ಈ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ‘ಅಲಾವೈಂಕುಠಪುರಮುಲೋ’ ಪೋಸ್ ರೀತಿಯಲ್ಲಿ ಅಲ್ಲು ಅರ್ಜುನ್ ಅವರ ಲುಕ್ ಇದೇ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:57 am, Fri, 29 March 24