AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್​ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ

Pawan Kalyan: ನಟ ಪವನ್ ಕಲ್ಯಾಣ್​ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಆದರೆ ಪವನ್​ರ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದಿರುವ ವೇಣುಸ್ವಾಮಿ, ಪವನ್​ ಮತ್ತೆ ಮದುವೆ ಆಗಲಿದ್ದಾರೆ ಎಂದಿದ್ದಾರೆ.

ಪವನ್ ಕಲ್ಯಾಣ್​ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ
ಪವನ್ ಕಲ್ಯಾಣ್
ಮಂಜುನಾಥ ಸಿ.
|

Updated on: Jan 05, 2024 | 8:57 PM

Share

ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ (Astrologer) ಎನಿಸಿಕೊಂಡಿರುವ ವೇಣು ಸ್ವಾಮಿ, ತೆಲುಗಿನ ಜನಪ್ರಿಯ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಕುರಿತು ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪವನ್ ಕಲ್ಯಾಣ್​ರ ಖಾಸಗಿ ಜೀವನ, ರಾಜಕೀಯ ಜೀವನದ ಬಗ್ಗೆ ವೇಣು ಸ್ವಾಮಿ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಮುಂದೆ ಏನು ಮಾಡಿದರೆ ಅವರ ಜಿವನದಲ್ಲಿ ಏಳ್ಗೆ ಇರುತ್ತದೆ ಎಂಬ ಬಗ್ಗೆಯೂ ಭವಿಷ್ಯ ಹೇಳಿದ್ದಾರೆ.

ಪವನ್ ಕಲ್ಯಾಣ್ ರ ರಾಜಕೀಯ ವಿರೋಧಿಗಳು ಅವರ ಮೂರು ಮದುವೆ ವಿಷಯವನ್ನು ಸದಾ ಪವನ್​ರ ವಿರುದ್ಧ ಅಸ್ತ್ರವಾಗಿ ಬಳಸುತ್ತಿರುತ್ತಾರೆ. ಪವನ್​ಗೆ ಈಗಾಗಲೇ ಮೂರು ಮದುವೆಗಳಾಗಿವೆ, ಮೂರನೇ ಪತ್ನಿಗೂ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗಲು ತಯಾರಾಗಿದ್ದಾರೆ ಎಂದು ಕೆಲವು ದಿನಗಳ ಹಿಂದಷ್ಟೆ ವೈಸಿಪಿ ಪಕ್ಷದ ಮುಖಂಡರೊಬ್ಬರು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ‘ಈ ವರ್ಷದ ಜೂನ್ ವರೆಗೆ ಆ ರೀತಿಯ ಘಟನೆಗಳು ನಡೆಯುವುದಿಲ್ಲ ಆದರೆ ಜೂನ್ ತಿಂಗಳ ನಂತರ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿಗೆ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಅವರ ಖಾಸಗಿ ಜೀವನದಲ್ಲಿ ಬಹಳಷ್ಟು ಏರು-ಪೇರುಗಳು ಜೂನ್ ತಿಂಗಳ ಬಳಿಕ ನಡೆಯಲಿವೆ ಎಂದಿರುವ ವೇಣು ಸ್ವಾಮಿ, ಪವನ್​ ಹಠಾತ್ತನೆ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿ. ಅವರ ಎಲ್ಲ ನಿರ್ಣಯಗಳು ಹೃದಯದಿಂದ ಬಂದಿರುತ್ತವೆ, ಯೋಚನೆ ಮಾಡುವುದಿಲ್ಲ ಹಾಗಾಗಿ ಹಲವು ತಪ್ಪುಗಳನ್ನು ಅವರು ಜೀವನದಲ್ಲಿ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಆಸ್ತಿ ಎಷ್ಟು? ಇರುವ ಸಾಲವೆಷ್ಟು?

ಪವನ್ ಕಲ್ಯಾಣ್ ರಾಜಕೀಯ ಜೀವನದ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ‘ಪವನ್ ಕಲ್ಯಾಣ್​ಗೆ ರಾಜಕೀಯದಲ್ಲಿ ಯೋಗವಿಲ್ಲ. ಅವರು ರಾಜಕೀಯದಿಂದ ಆದಷ್ಟು ಶೀಘ್ರವೇ ದೂರವಾದರೆ ಒಳ್ಳೆಯದು. ಆದರೆ ಅವರಿಗೆ ಸಿನಿಮಾ ರಂಗದಲ್ಲಿ ಎದುರಾಳಿಯೇ ಇಲ್ಲ. ಈ ವಿಚಾರದಲ್ಲಿ ರಜನೀಕಾಂತ್ ಹಾಗೂ ಪವನ್​ರದ್ದು ಒಂದೇ ರೀತಿಯ ಗ್ರಹಗತಿ. ಇಬ್ಬರಿಗೂ ರಾಜಕೀಯದಲ್ಲಿ ಏಳ್ಗೆಯಿಲ್ಲ ಆದರೆ ಸಿನಿಮಾದಲ್ಲಿ ಎದುರೇ ಇಲ್ಲ’ ಎಂದಿದ್ದಾರೆ ವೇಣು ಸ್ವಾಮಿ.

ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ, ರಶ್ಮಿಕಾ ಮಂದಣ್ಣ ಸಹ ಇವರ ಬಳಿ ವಿಶೇಷ ಪೂಜೆ ಮಾಡಿಸಿಕೊಂಡಿದ್ದರು. ಆ ಬಳಿಕ ಅವರ ವೃತ್ತಿ ಜೀವನದಲ್ಲಿ ಭಾರಿ ಜಿಗಿತ ಉಂಟಾಯ್ತು. ಹಲವು ಸ್ಟಾರ್ ನಟರ ಸಿನಿಮಾಗಳಿಗೆ ಮುಹೂರ್ತ ನೆರವೇರಿಸಿದ್ದಾರೆ. ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಪೂಜೆ ಮಾಡಿದವರು ಇವರೇ. ಸೆಲೆಬ್ರಿಟಿಗಳ ಭವಿಷ್ಯ ಹೇಳುವ ವೇಣು ಸ್ವಾಮಿ, ಸಮಂತಾ-ನಾಗಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಾರೆಂದು ಮೊದಲೇ ನುಡಿದಿದ್ದರು. ಇದೀಗ ರಶ್ಮಿಕಾ-ವಿಜಯ್ ಮದುವೆಯಾದರೆ ಅವರೂ ಸಹ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್