ಬಿಗ್ ಅಪ್ಡೇಟ್: ‘ಬಾಹುಬಲಿ 3’ ಬರೋದು ಪಕ್ಕಾ; ರಿವೀಲ್ ಮಾಡಿದ ಪ್ರಭಾಸ್-ರಾನಾ ಜೋಡಿ

'ಬಾಹುಬಲಿ' ಚಿತ್ರಗಳ ಮೂರನೇ ಭಾಗದ ಕುರಿತಾದ ಅಭಿಮಾನಿಗಳ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ಅವರು ಸ್ವತಃ 'ಬಾಹುಬಲಿ 3' ಖಚಿತಪಡಿಸಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಪರಂಪರೆ ಮುಂದುವರಿಯುತ್ತದೆ’ ಎಂಬ ಸಂದೇಶ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಬಿಗ್ ಅಪ್ಡೇಟ್: ‘ಬಾಹುಬಲಿ 3’ ಬರೋದು ಪಕ್ಕಾ; ರಿವೀಲ್ ಮಾಡಿದ ಪ್ರಭಾಸ್-ರಾನಾ ಜೋಡಿ
ಪ್ರಭಾಸ್-ರಾಜಮೌಳಿ

Updated on: Jun 26, 2026 | 8:00 AM

ಮುಖ್ಯಾಂಶಗಳು

  • ‘ಬಾಹುಬಲಿ 3’ ಖಚಿಪಡಿಸಿದ ಪ್ರಭಾಸ್, ರಾಣಾ, ಅನುಷ್ಕಾ
  • ವೈರಲ್ ವಿಡಿಯೋದಲ್ಲಿ ಸಿಕ್ತು ಹೊಸ ಸಂದೇಶ
  • ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ: ಮುಂದೇನು?

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರಗಳು ಹೊಸ ದಾಖಲೆ ಬರೆದಿದ್ದವು. ಈ ಸಿನಿಮಾಗೆ ಮೂರನೇ ಭಾಗ ಬರಲಿದೆಯೇ ಎಂಬ ಪ್ರಶ್ನೆ ಮೊದಲಿನಿಂದಲೂ ಅಭಿಮಾನಿಗಳಿಗೆ ಕಾಡುತ್ತಾ ಇತ್ತು. ಇದಕ್ಕೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದೆ. ಇಷ್ಟು ದಿನ ಕೇವಲ ವದಂತಿಯಾಗಿದ್ದ ಈ ವಿಷಯವನ್ನು ಚಿತ್ರದ ಮುಖ್ಯ ತಾರಾಗಣದವರಾದ ಪ್ರಭಾಸ್, ರಾನಾ ದಗ್ಗುಬಾಟಿ ಹಾಗೂ ಅನುಷ್ಕಾ ಶೆಟ್ಟಿ ಈಗ ಖಚಿತಪಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಮೂವರೂ ಒಟ್ಟಿಗೆ ಕುಳಿತು ಮಾತನಾಡಿರುವ ವಿಶೇಷ ವಿಡಿಯೋವೊಂದು ಬಿಡುಗಡೆಯಾಗಿದ್ದು, ಭಾರಿ ವೈರಲ್ ಆಗುತ್ತಿದೆ. ‘ಬಾಹುಬಲಿ’ ಸಿನಿಮಾ ಬಗ್ಗೆ ಮಾತನಾಡಲು ಇವರು ಒಂದೆಡೆ ಸೇರಿದ್ದರು. ಚಿತ್ರದ ದೃಶ್ಯಗಳ ಕುರಿತು, ಸಿನಿಮಾ ಶೂಟ್ ಸೆಟ್​​ನ ಸಿಹಿ ಅನುಭವವನ್ನು ಇವರು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದು ದೊಡ್ಡ ಅಪ್​​ಡೇಟ್ ಕೂಡ ಸಿಕ್ಕಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ರಾನಾ ದಗ್ಗುಬಾಟಿ ಅವರು ಮಾತನಾಡುತ್ತಾ, ‘ಇದನ್ನು ನಿಮ್ಮ ಹತ್ತಿರ ಹೇಳಬೇಕೋ ಬೇಡವೋ ಗೊತ್ತಿಲ್ಲ. ಈಗ ಇಲ್ಲಿ ರಾಜಮೌಳಿ ಅವರಾಗಲಿ ಅಥವಾ ನಿರ್ಮಾಪಕರಾಗಲಿ ಇಲ್ಲ. ಅದಕ್ಕೆ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಜಗತ್ತು ಇನ್ನೂ ಅದಕ್ಕೆ ಸಿದ್ಧವಾಗಿಲ್ಲದೇ ಇರಬಹುದು. ಆದರೆ ‘ಬಾಹುಬಲಿ…’ ಬರಲಿದೆ’ ಎಂದು ಅರ್ಧಕ್ಕೆ ನಿಲ್ಲಿಸಿದ್ದಾರೆ. ತಕ್ಷಣವೇ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ‘ಬಾಹುಬಲಿ 3’ ಎಂದು ಧ್ವನಿಗೂಡಿಸಿ ನಗುತ್ತಾರೆ. ವಿಡಿಯೋದ ಕೊನೆಯಲ್ಲಿ ‘ಆ್ಯಂಡ್ ದಿ ಲೆಗಸಿ ಕಂಟಿನ್ಯೂಸ್ ಅಂದರೆ ಪರಂಪರೆ ಮುಂದುವರಿಯುತ್ತದೆ ಎಂಬ ಬರಹ ಮೂಡಿಬಂದಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ರಾಜಮೌಳಿ ನಿರ್ದೇಶನದ ‘ಬಾಹುಬಲಿ: ದಿ ಬಿಗಿನ್ನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದವು. ಕಥೆ ಮುಗಿದಿದ್ದರೂ ಮೂರನೇ ಭಾಗ ಬರಬಹುದು ಎಂಬ ನಿರೀಕ್ಷೆ ಇತ್ತು. ಈಗ ಸ್ವತಃ ಭಲ್ಲಾಳದೇವ (ರಾನಾ), ಬಾಹುಬಲಿ (ಪ್ರಭಾಸ್) ಮತ್ತು ದೇವಸೇನಾ (ಅನುಷ್ಕಾ) ಈ ವಿಷಯವನ್ನು ಖಚಿತಪಡಿಸಿರುವುದರಿಂದ ಚಿತ್ರರಂಗದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದೆ. ಆದರೆ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us