AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕಠಿಣ ಕೆಲಸದ ಶೈಲಿಯನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ 'ವಾರಣಾಸಿ' ಚಿತ್ರೀಕರಣದ ಅನುಭವಗಳ ಮೂಲಕ ವಿವರಿಸಿದ್ದಾರೆ. ಒಂದು ನಿರ್ದಿಷ್ಟ ಶಾಟ್‌ಗಾಗಿ ಇಡೀ ದಿನ ಶೂಟಿಂಗ್ ನಡೆಸಿ, 100 ಟೇಕ್‌ಗಳನ್ನು ತೆಗೆದುಕೊಂಡ ಪ್ರಸಂಗವನ್ನು ಅವರು ಬಹಿರಂಗಪಡಿಸಿದ್ದಾರೆ. ಮಹೇಶ್ ಬಾಬು ಕೂಡ ಭಾಗಿಯಾಗಿದ್ದ ಈ ಘಟನೆ, ರಾಜಮೌಳಿ ಅವರ ಪರಿಪೂರ್ಣತೆ ಮತ್ತು ಚಿತ್ರದ ಮೇಲಿನ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ.

‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ
ರಾಜಮೌಳಿ-ಮಹೇಶ್ ಬಾಬು
ರಾಜೇಶ್ ದುಗ್ಗುಮನೆ
|

Updated on: Jun 25, 2026 | 12:33 PM

Share

ಮುಖ್ಯಾಂಶಗಳು

  • ರಾಜಮೌಳಿ ಪರಿಪೂರ್ಣತೆಯ ಕಥೆ, ಒಂದು ಶಾಟ್‌ಗೆ 100 ಟೇಕ್‌ಗಳು
  • ಎಸ್.ಎಸ್. ರಾಜಮೌಳಿ ಕೆಲಸದ ಶೈಲಿಗೆ ಎಲ್ಲರೂ ಶಾಕ್
  • ವಾರಣಾಸಿ ಚಿತ್ರದಲ್ಲಿ ಪೃಥ್ವಿರಾಜ್-ಮಹೇಶ್ ಬಾಬು

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕೆಲಸದ ಶೈಲಿ ಎಷ್ಟೊಂದು ಕಠಿಣವಾಗಿರುತ್ತದೆ ಎಂಬುದನ್ನು ಅವರ ಜೊತೆ ಕೆಲಸ ಮಾಡಿದವರು ಹೇಳುತ್ತಲೇ ಇರುತ್ತಾರೆ. ಪ್ರಭಾಸ್, ಜೂನಿಯರ್ ಎನ್​​ಟಿಆರ್ ಸೇರಿದಂತೆ ಅನೇಕರು ಈ ವಿಷಯ ರಿವೀಲ್ ಮಾಡಿದ್ದರು. ಈಗ ಇದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ರಾಜಮೌಳಿ ನಿರ್ದೇಶನದ ಮುಂಬರುವ ‘ವಾರಣಾಸಿ’ಯಲ್ಲಿ ಮಹೇಶ್ ಬಾಬು ಹೀರೋ ಆದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸೆಟ್​ನಲ್ಲಿ ನಡೆದ ಒಂದು ಆಸಕ್ತಿದಾಯಕ ವಿಷಯವನ್ನು ಪೃಥ್ವಿರಾಜ್ ಹಂಚಿಕೊಂಡಿದ್ದಾರೆ.

ಒಂದೇ ಶಾಟ್‌ಗಾಗಿ ಇಡೀ ದಿನ ಶೂಟಿಂಗ್

ಚಿತ್ರದ ಒಂದು ನಿರ್ದಿಷ್ಟ ದೃಶ್ಯದ ಚಿತ್ರೀಕರಣದ ವೇಳೆ ತಮಗೆ ಎದುರಾದ ಅನುಭವವನ್ನು ಪೃಥ್ವಿರಾಜ್ ಬಿಚ್ಚಿಟ್ಟಿದ್ದಾರೆ. ‘ನಾನು ಸುಳ್ಳು ಹೇಳುತ್ತಿಲ್ಲ. ಚಿತ್ರದ ಒಂದು ನಿರ್ದಿಷ್ಟ ಶಾಟ್‌ಗಾಗಿ ನಾನು ಮತ್ತು ಮಹೇಶ್ ಬಾಬು ಬೆಳಗ್ಗೆಯೇ ಶೂಟಿಂಗ್ ಆರಂಭಿಸಿದ್ದೆವು. ಅದು ಬಹುಶಃ 94 ಅಥವಾ 97ನೇ ಟೇಕ್ ಇರಬಹುದು. ರಾಜಮೌಳಿ ಅವರಿಗೆ ಆ ಶಾಟ್ ಸರಿಯಾಗಿ ಮೂಡಿಬರದ ಕಾರಣ ನಮಗೆ ಮಧ್ಯಾಹ್ನ ಊಟದ ಬ್ರೇಕ್ ಸಿಕ್ಕಿತು. ನಾವು ಕೇವಲ ಎರಡು ತುತ್ತು ಅನ್ನ ತಿಂದಿದ್ದೆವೋ ಇಲ್ಲವೋ ಅಷ್ಟರಲ್ಲಿ ರಾಜಮೌಳಿ ಮತ್ತೆ ನಮ್ಮನ್ನು ಸೆಟ್‌ಗೆ ಕರೆದರು. ಆ ಒಂದು ಶಾಟ್‌ಗಾಗಿ ಶೂಟಿಂಗ್ ಸಂಜೆ 7 ಗಂಟೆಯವರೆಗೂ ಮುಂದುವರಿಯಿತು’ ಎಂದು ಪೃಥ್ವಿರಾಜ್ ಹೇಳಿದ್ದಾರೆ.

ಮರುದಿನವೂ ಅದೇ ದೃಶ್ಯದ ಚಿತ್ರೀಕರಣ

ಅಷ್ಟೊಂದು ಟೇಕ್‌ಗಳನ್ನು ತೆಗೆದುಕೊಂಡ ನಂತರವೂ ರಾಜಮೌಳಿ ಅವರಿಗೆ ಆ ದೃಶ್ಯ ತೃಪ್ತಿ ನೀಡಲಿಲ್ಲವಂತೆ. ಹೀಗಾಗಿ, ಮೊದಲು ಪ್ಯಾಕಪ್​ ಎಂದರು. ಮರುದಿನವೂ ಸೆಟ್‌ಗೆ ಬಂದು ಅದೇ ದೃಶ್ಯವನ್ನು ಮತ್ತೆ ಶೂಟ್ ಮಾಡುವಂತೆ ಇಬ್ಬರು ನಟರಿಗೆ ನಿರ್ದೇಶಕರು ಸೂಚಿಸಿದ್ದರು. ರಾಜಮೌಳಿ ಅವರ ಈ ಕಠಿಣ ಪರಿಶ್ರಮವನ್ನು ಕಂಡು ಬೆರಗಾಗಿರುವ ಪೃಥ್ವಿರಾಜ್ ಅವರು ತಾವು ನೋಡಿರುವ ಅತ್ಯಂತ ಕಠಿಣ ಪರಿಶ್ರಮಿ ನಿರ್ದೇಶಕ ಎಂದರೆ ಅದು ರಾಜಮೌಳಿ ಮಾತ್ರ ಎಂದು ಕೊಂಡಾಡಿದ್ದಾರೆ.

ಬೆಳಗ್ಗೆ 5 ಗಂಟೆಗೆ ಸೆಟ್‌ನಲ್ಲಿರುತ್ತಾರೆ ರಾಜಮೌಳಿ

ರಾಜಮೌಳಿ ಅವರ ಕೆಲಸದ ಸಮಯದ ಬಗ್ಗೆಯೂ ಪೃಥ್ವಿರಾಜ್ ಮಾತನಾಡಿದ್ದಾರೆ. ‘ನಮಗೆ ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಇದ್ದರೆ ರಾಜಮೌಳಿ ಅದಕ್ಕೂ ಮುನ್ನವೇ ಸೆಟ್‌ಗೆ ಬಂದಿರುತ್ತಾರೆ. ಅವರು ಬೆಳಿಗ್ಗೆ 5.15ಕ್ಕೆಲ್ಲಾ ಬಂದು ತಮ್ಮ ಅಸಿಸ್ಟೆಂಟ್‌ಗಳ ಜೊತೆ ರಿಹರ್ಸಲ್ ಮಾಡಿರುತ್ತಾರೆ. ಕ್ಯಾಮೆರಾ ಸೆಟಪ್ ಮತ್ತು ಪ್ಲಾನಿಂಗ್ ಮುಗಿಸಿರುತ್ತಾರೆ. ಶೂಟಿಂಗ್ ಮುಗಿಸಿ ಕೊನೆಯಲ್ಲಿ ಸೆಟ್‌ನಿಂದ ಹೊರಡುವ ವ್ಯಕ್ತಿಯೂ ಅವರೇ ಆಗಿರುತ್ತಾರೆ. ಅವರ ಸಿನಿಮಾದಲ್ಲಿ ಲಂಚ್ ಬ್ರೇಕ್ ಕೇವಲ 20 ನಿಮಿಷ ಇರುತ್ತದೆ’ ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ

‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ‘ಮಂದಾಕಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ‘ಕುಂಭ’ ಎಂಬ ವಿಲನ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಶೂಟಿಂಗ್ ಜಗತ್ತಿನ ವಿವಿಧ ಸುಂದರ ತಾಣಗಳಲ್ಲಿ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us