AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಪ್ರಶಾಂತ್ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ ಬಿಗ್ ಬಾಸ್

Prashanth Sambargi: ಅರವಿಂದ್​ಗೆ ಬಿಗ್​ ಬಾಸ್​ ತೋರಿಸಿರುವ ರಹಸ್ಯ ವಿಡಿಯೋ ಮೂಲಕ ಪ್ರಶಾಂತ್​ ಸಂಬರಗಿಯ ಸುಳ್ಳು ಹೇಳುವ ಚಾಳಿಗೆ ಬಲವಾದ ಪುರಾವೆ ಸಿಕ್ಕಂತಾಗಿದೆ. ಇದರಿಂದ ಅವರಿಗೆ ವೀಕ್ಷಕರ ವೋಟ್​ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.

Bigg Boss Kannada: ಪ್ರಶಾಂತ್ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ ಬಿಗ್ ಬಾಸ್
ಪ್ರಶಾಂತ್ ಸಂಬರಗಿ
ಮದನ್​ ಕುಮಾರ್​
|

Updated on: Apr 20, 2021 | 9:57 PM

Share

ಬಿಗ್​ ಬಾಸ್​ ಮನೆಯಲ್ಲಿ ದಿನ ಕಳೆದಂತೆಲ್ಲ ಎಲ್ಲರ ಬಣ್ಣ ಬಯಲಾಗುತ್ತಿದೆ. ಈಗ 8ನೇ ವಾರದಲ್ಲಿ ಆಟ ಮುಂದುವರಿದಿದೆ. ಯಾವ ಸ್ಪರ್ಧಿಯ ಗುಣ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಅದರಲ್ಲೂ ಪ್ರಶಾಂತ್​ ಸಂಬರಗಿ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ ಎಂಬ ಸತ್ಯ ಕ್ಷಣಕ್ಷಣಕ್ಕೂ ಬಯಲಾಗುತ್ತಿದೆ. ಎಲ್ಲರನ್ನೂ ಯಾಮಾರಿಸಲು ಪ್ರಶಾಂತ್​ ಸಂಬರಗಿ ಹೇಳಿದ ಒಂದು ಸುಳ್ಳನ್ನು ಈಗ ಬಿಗ್​ ಬಾಸ್​ ಬಯಲು ಮಾಡಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಗರ್ಲ್ಸ್​ ಹಾಸ್ಟೆಲ್​ ವರ್ಸಸ್​ ಬಾಯ್ಸ್​ ಹಾಸ್ಟೆಲ್​ ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಯಾರು ವಿನ್ನರ್​ ಎಂಬುದನ್ನು ನಿಧಿ ಸುಬ್ಬಯ್ಯ ಮತ್ತು ಪ್ರಶಾಂತ್​ ಸಂಬರಗಿ ಸೇರಿ ನಿರ್ಣಯ ಮಾಡಬೇಕಿತ್ತು. ಅವರಿಬ್ಬರೂ ಹಾಸ್ಟೆಲ್​ ವಾರ್ಡನ್​ಗಳಾಗಿದ್ದರು. ಅಂತಿಮವಾಗಿ ದಿವ್ಯಾ ಸುರೇಶ್​ ವಿನ್ನರ್​ ಎಂದು ಘೋಷಣೆ ಮಾಡಿದರು. ಈ ಬಗ್ಗೆ ಬಾಯ್ಸ್​ ಹಾಸ್ಟೆಲ್​ ಸದಸ್ಯರು ತಕರಾರು ತೆಗೆದರು. ಹುಡುಗರ ಪರವಾಗಿ ನಿಲ್ಲಬೇಕಿದ್ದ ಪ್ರಶಾಂತ್​ ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಕೇಳಿಬಂತು. ಅದರಿಂದ ತಪ್ಪಿಸಿಕೊಳ್ಳಲು ಪ್ರಶಾಂತ್​ ಒಂದು ಸುಳ್ಳು ಹೇಳಿದರು.

‘ಹುಡುಗರ ಹೆಸರು ಹೇಳಲು ನಿಧಿ ಬಿಡಲಿಲ್ಲ. ಅವರು ನನ್ನ ಬಾಯಿ ಮುಚ್ಚಿಸಿದರು. ವಾದ ಮಾಡಲು ಅವಕಾಶ ನೀಡಲಿಲ್ಲ. ನಿಧಿ ಫೋರ್ಸ್​ ಮಾಡಿದರು. ದಿವ್ಯಾ ಸುರೇಶ್​ ಅತ್ಯುತ್ತಮ ಎಂದು ಒತ್ತಾಯ ಹೇರಿದರು’ ಎಂದ ಪ್ರಶಾಂತ್​ ಅವರು ಹುಡುಗರ ಎದುರು ಹೇಳಿದರು. ಆದರೆ ಅಲ್ಲಿ ನಿಧಿ ಜೊತೆ ನಡೆದ ಮಾತುಕತೆಯೇ ಬೇರೆ ಇತ್ತು! ಅದನ್ನು ಬಿಗ್​ ಬಾಸ್​ ಮನೆಯ ಕ್ಯಾಮರಾಗಳು ನಿಖರವಾಗಿ ಸೆರೆ ಹಿಡಿದಿವೆ.

ಕ್ಯಾಮರಾಗಳಲ್ಲಿ ಸೆರೆ ಆಗಿರುವ ಆ ವಿಡಿಯೋವನ್ನು ಈ ವಾರದ ಕ್ಯಾಪ್ಟನ್​ ಆಗಿರುವ ಅರವಿಂದ್​ ಕೆ.ಪಿ. ಅವರಿಗೆ ಬಿಗ್​ ಬಾಸ್​ ರಹಸ್ಯವಾಗಿ ತೋರಿಸಿದ್ದಾರೆ. ಕನ್ಫೆಷನ್​ ರೂಮ್​ಗೆ ಕರೆದು ಅರವಿಂದ್​ಗೆ ಮಾತ್ರ ಆ ವಿಡಿಯೋವನ್ನು ತೋರಿಸಲಾಗಿದೆ. ಅದರಿಂದ ಅರವಿಂದ್​ಗೆ ಎಲ್ಲಾ ಸತ್ಯ ತಿಳಿದಂತಾಗಿದೆ. ಪ್ರಶಾಂತ್​ ಸಂಬರಗಿ ಮಹಾ ಸುಳ್ಳುಗಾರ ಎಂಬುದನ್ನು ಬಿಗ್​ ಬಾಸ್​ ವಿಡಿಯೋ ಸಮೇತ ಸಾಬೀತು ಮಾಡಿದ್ದಾರೆ. ಆ ಮೂಲಕ ವೀಕ್ಷಕರಿಗೂ ಎಲ್ಲ ಸತ್ಯ ಗೊತ್ತಾದಂತಾಗಿದೆ.

ಈ ಹಿಂದೆ ಕೂಡ ಪ್ರಶಾಂತ್​ ಈ ರೀತಿಯ ಸುಳ್ಳುಗಳನ್ನು ಹೇಳಿದ್ದುಂಟು. ಮೊದಲು ತುಪ್ಪ ಖಾಲಿ ಮಾಡಿ, ಆಮೇಲೆ ನಾನು ತುಪ್ಪವನ್ನೇ ತಿಂದಿಲ್ಲ ಎಂದು ಎಲ್ಲರ ಮುಂದೆ ಸುಳ್ಳು ಹೇಳಿದ್ದರು. ಅವರ ಆಪ್ತ ಸ್ನೇಹಿತರಾಗಿರುವ ಚಕ್ರವರ್ತಿ ಚಂದ್ರಚೂಡ್​ ಕೂಡ ಅನೇಕ ಬಾರಿ ಸಂಬರಗಿಯ ಸುಳ್ಳು ಹೇಳುವ ಗುಣದ ಬಗ್ಗೆ ಮಾತನಾಡಿದ್ದುಂಟು. ಈಗ ಅರವಿಂದ್​ಗೆ ಬಿಗ್​ ಬಾಸ್​ ತೋರಿಸಿರುವ ವಿಡಿಯೋ ಮೂಲಕ ಪ್ರಶಾಂತ್​ ಸಂಬರಗಿಯ ಈ ಚಾಳಿಗೆ ಬಲವಾದ ಪುರಾವೆ ಸಿಕ್ಕಂತಾಗಿದೆ. ಇದರಿಂದ ಅವರಿಗೆ ವೀಕ್ಷಕರ ವೋಟ್​ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More