ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಎಂಟ ವಾರ ಕಳೆಯುತ್ತಿದೆ. ದಿನದಿಂದ ದಿನಕ್ಕೆ ಆಟದ ವೈಖರಿ ಬದಲಾಗುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ತೀವ್ರವಾಗುತ್ತಿದೆ.

ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​
ಪ್ರಶಾಂತ್​ ಸಂಬರಗಿ-ಶುಭಾ ಪೂಂಜಾ
Edited By:

Updated on: Apr 25, 2021 | 4:04 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಪ್ರಶಾಂತ್​ ಸಂಬರಗಿ ಅವರಿಂದ ಆಗಾಗ ತಕರಾರು ನಡೆಯುತ್ತಲೇ ಇರುತ್ತವೆ. ಎಲ್ಲ ಸ್ಪರ್ಧಿಗಳ ಜೊತೆಗೂ ಅವರು ಕಿರಿಕ್​ ಮಾಡಿಕೊಂಡಿದ್ದಾರೆ. ಒಮ್ಮೆ ಬಂದು ಬೆಂಬಲ ನೀಡುವ ಅವರು ಮರುದಿನವೇ ಉಲ್ಟಾ ಹೊಡೆಯುತ್ತಾರೆ. ಇನ್ನು, ಅವರ ಸುಳ್ಳು ಹೇಳುವ ಸ್ವಭಾವವಂತೂ ಹೆಚ್ಚು ಟೀಕೆಗೆ ಒಳಗಾಗುತ್ತದೆ. ಪ್ರತಿ ವಾರ ಅವರು ಒಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಈಗ ಶುಭಾ ಪೂಂಜಾ ಮೇಲೆ ಪ್ರಶಾಂತ್​ ಸಂಬರಗಿ ಕಣ್ಣಿಟ್ಟಿದ್ದಾರೆ.

ಏ.24ರ ಸಂಚಿಕೆಯಲ್ಲಿ ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್​ ಅವರು ಮಾತನಾಡುತ್ತಿದ್ದರು. ಆಗ ಅವರಿಬ್ಬರ ನಡುವೆ ಶುಭಾ ಪೂಂಜಾ ಬಗ್ಗೆ ವಿಷಯ ಪ್ರಸ್ತಾಪ ಆಗಿದೆ. ‘ಇಷ್ಟು ವಾರಗಳ ಕಾಲ ಶುಭಾ ಪೂಂಜಾ ಅವರನ್ನು ನಾವು ಯಾಕೆ ಕಳಪೆ ಎಂದು ಪರಿಗಣಿಸಿಲ್ಲ? ಈ ಬಗ್ಗೆ ನಾವು ಆಲೋಚನೆಯನ್ನೇ ಮಾಡಿಲ್ಲವಲ್ಲ’ ಎಂದು ಪ್ರಶಾಂತ್​ ಸಂಬರಗಿ ಪ್ರಶ್ನೆ ಎತ್ತಿದ್ದಾರೆ.

‘ಶುಭಾ ಪೂಂಜಾ ಏನು ಕೊಡುಗೆ ಕೊಟ್ಟಿದ್ದಾಳೆ? ಕೆಲಸ ಕದಿತಾಳೆ. ಏನೂ ಕೆಲಸ ಮಾಡಲ್ಲ. ಅಡುಗೆ ಮಾಡಲ್ಲ, ಟೀ ಮಾಡಿಕೊಡಲ್ಲ. ಆದರೂ ಕೂಡ ನಾವು ಅವಳನ್ನು ಕಳಪೆಗೆ ಯಾಕೆ ಪರಿಗಣಿಸಿಲ್ಲ. ಅವಳ ಹೆಸರನ್ನು ಯಾರೂ ಹೇಳುವುದಿಲ್ಲ’ ಎಂದು ಪ್ರಶಾಂತ್​ ಸಂಬರಗಿ ಅವರು ತಲೆ ಕೆರೆದುಕೊಂಡಿದ್ದಾರೆ. ಹಾಗಾಗಿ ಈ ಬಾರಿ ಅವರು ಕಳಪೆಗೆ ಶುಭಾ ಪೂಂಜಾ ಹೆಸರನ್ನೇ ಸೂಚಿಸುವ ಸಾಧ್ಯತೆ ಹೆಚ್ಚಿದೆ.

‘ಇರುವ ವಿರೋಧಿಗಳು ನಾನು ನೀನು ಮಾತ್ರ. ಉಳಿದವರೆಲ್ಲ ಟೆಕ್ನಿಕ್​ ಮಾಡಿಕೊಂಡು ಹೋಗುತ್ತಿದ್ದಾರೆ. ಯಾರ ಕೈಯಲ್ಲೂ ಏನೂ ಮಾಡೋಕೆ ಆಗಲ್ಲ. ಇರುವಷ್ಟು ದಿನ ಒಳ್ಳೆಯತನದ ನಾಟಕೀಯ ಮುಖವಾಡ ಹಾಕಿಕೊಂಡು ಇದಾರೆ. ಎಲ್ಲರ ಮನಸ್ಸು ಹೊಲಸೆದ್ದು ಕರಪ್ಟ್​ ಆಗಿದೆ’ ಎಂದು ಚಕ್ರವರ್ತಿ ಚಂದ್ರಚೂಡ್​ ಹೇಳಿದ್ದಾರೆ.

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಎಂಟ ವಾರ ಕಳೆಯುತ್ತಿದೆ. ದಿನದಿಂದ ದಿನಕ್ಕೆ ಆಟದ ವೈಖರಿ ಬದಲಾಗುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ತೀವ್ರವಾಗುತ್ತಿದೆ. ಎಲ್ಲರೂ ತಮ್ಮದೇ ತಂತ್ರಗಾರಿಕೆ ಮೂಲಕ ದೊಡ್ಮನೆಯಲ್ಲಿ ಉಳಿದುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ

ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ

 

(Bigg Boss Kannada: Prashanth Sambargi says Shubha Poonja is worst performer in BBK8)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us