ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

ಮಂಜು ಮತ್ತು ದಿವ್ಯಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಎಂಬುದು ನಿಜವಾದರೂ ಟಾಸ್ಕ್​ ವಿಚಾರದಲ್ಲಿ ಪಕ್ಕಾ ಪ್ರಾಕ್ಟಿಕಲ್​ ಆಗಿದ್ದಾರೆ. ಹಾಗಿದ್ದರೂ ಕೂಡ ಅವರ ನಡುವಿನ ಆಪ್ತತೆಯೇ ಯಾಕೋ ಹೆಚ್ಚು ಹೈಲೈಟ್​ ಆಗುತ್ತಿದೆ.

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ
ಮಂಜು ಪಾವಗಡ - ದಿವ್ಯಾ ಸುರೇಶ್​
Edited By:

Updated on: Apr 05, 2021 | 4:05 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಹೆಚ್ಚು ಆಪ್ತರಾಗಿದ್ದಾರೆ. ಅವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂಬ ಅನುಮಾನ ಎಲ್ಲರಿಗೂ ಇದೆ. ಟಾಸ್ಕ್​ ಇಲ್ಲದೆ ಇರುವಾಗ ಅವರಿಬ್ಬರು ಜೊತೆಯಾಗಿ ಹೆಚ್ಚಿನ ಸಮಯ ಕಳೆಯುತ್ತಾರೆ. ಆ ಬಗ್ಗೆ ಪದೇಪದೇ ಚರ್ಚೆ ಆಗುತ್ತಿದೆ ಕೂಡ. ಕೆಲವೇ ದಿನಗಳ ಹಿಂದೆ ತಾವಿಬ್ಬರೂ ಗಂಡ-ಹೆಂಡತಿ ಎಂದು ಭಾವಿಸಿಕೊಂಡು ಅವರಿಬ್ಬರು ವೈಷ್ಣವಿ ಬಳಿ ಹೋಗಿ ಆಪ್ತ ಸಮಾಲೋಚನೆ ಪಡೆದುಕೊಂಡಿದ್ದರು. ಆದರೆ ಈಗ ದಿವ್ಯಾ ಸುರೇಶ್​ ಇನ್ನೊಂದು ಟ್ವಿಸ್ಟ್​ ನೀಡಿದ್ದಾರೆ.

ಐದನೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಎದುರಿನಲ್ಲೇ ಮಂಜು ಮತ್ತು ದಿವ್ಯಾ ಸುರೇಶ್​ ಒಡನಾಟದ ಬಗ್ಗೆ ಚರ್ಚೆ ಆಗಿದೆ. ಮನೆಯ ಎಲ್ಲ ಸದಸ್ಯರಿಗೂ ಸುದೀಪ್​ ಒಂದು ಪ್ರಶ್ನೆ ಕೇಳಿದರು. ಮಂಜು ಇಲ್ಲದೇ ಇದ್ದಿದ್ದರೆ ಇಷ್ಟು ದಿನಗಳ ಕಾಲ ದಿವ್ಯಾ ಸುರೇಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಉಳಿಯುತ್ತಿರಲಿಲ್ಲ- ಹೌದೋ ಅಲ್ಲವೋ ಎಂದು ಕಿಚ್ಚ ಕೇಳಿದ್ದಕ್ಕೆ ಎಲ್ಲರೂ ಬೇರೆ ಬೇರೆ ರೀತಿ ಉತ್ತರ ನೀಡಿದರು.

ಹೌದು ಎಂದು ಪ್ರಶಾಂತ್​ ಸಂಬರಗಿ ಉತ್ತರಿಸಿದರು. ದಿವ್ಯಾ ಮಂಜುನ ಬಾಲದ ರೀತಿ ಇದ್ದಾಳೆ ಎಂಬ ಮಾತನ್ನು ಅವರು ಒತ್ತಿ ಹೇಳಿದರು. ಆದರೆ ಈ ಮಾತನ್ನು ಸ್ವತಃ ಮಂಜು ಒಪ್ಪಲಿಲ್ಲ. ದಿವ್ಯಾ ಸುರೇಶ್​ಗೆ ಅವಳದ್ದೇ ಆದ ವ್ಯಕ್ತಿತ್ವ ಇದೆ. ನಾನು ಇಲ್ಲದೇ ಇದ್ದರೂ ಅವಳು ಬಿಗ್​ ಬಾಸ್​ ಮನೆಯಲ್ಲಿ ಇಷ್ಟು ದಿನ ಖಂಡಿತವಾಗಿ ಇರುತ್ತಿದ್ದಳು ಎಂದು ಮಂಜು ಹೇಳಿದರು.

ನಂತರ ಮಂಜು ಬಗ್ಗೆ ದಿವ್ಯಾ ಸುರೇಶ್​ ಮಾತನಾಡಿದರು. ‘ಮಂಜು ನನ್ನ ಜೀವನದಲ್ಲಿ ಬೇರೆ ಸ್ಥಾನ ಪಡೆದುಕೊಂಡಿದ್ದಾನೆ. ಯಾವ ಥರ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ. ಐ ಲವ್​ ಹಿಮ್​ ಸೋ ಮಚ್​’ ಎಂದು ಅವರು ಹೇಳಿದರು. ಮರುಕ್ಷಣವೇ ‘ಆ್ಯಸ್​ ಎ ಫ್ರೆಂಡ್​. ಅದು ಹಾಗೇ ಇರುತ್ತೆ ಎಂದು ಭಾವಿಸುತ್ತೇನೆ’ ಎನ್ನುವ ಮೂಲಕ ಟ್ವಿಸ್ಟ್​ ನೀಡಿದರು!

ಮಂಜು ಮತ್ತು ದಿವ್ಯಾ ಪರಸ್ಪರ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಎಂಬುದು ನಿಜವಾದರೂ ಟಾಸ್ಕ್​ ವಿಚಾರದಲ್ಲಿ ಪಕ್ಕಾ ಪ್ರಾಕ್ಟಿಕಲ್​ ಆಗಿದ್ದಾರೆ. ಹಾಗಿದ್ದರೂ ಕೂಡ ಅವರ ನಡುವಿನ ಆಪ್ತತೆಯೇ ಯಾಕೋ ಹೆಚ್ಚು ಹೈಲೈಟ್​ ಆಗುತ್ತಿದೆ. ಏ.4ರಂದು ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆದರು. ಎಲ್ಲರಿಗೂ ವಿದಾಯ ಹೇಳುವ ಸಂದರ್ಭದಲ್ಲಿ ಮಂಜು ಮತ್ತು ದಿವ್ಯಾರನ್ನು ಉದ್ದೇಶಿಸಿ, ‘ಹೊರಗೆ ಬಂದಮೇಲೆ ಸಿಹಿ ಸುದ್ದಿ ನೀಡಿ’ ಎಂದು ಶಂಕರ್​ ಅಶ್ವತ್ಥ್​ ಆಶೀರ್ವಾದ ಮಾಡಿದರು!

ಇದನ್ನೂ ಓದಿ: ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

 

 

(Bigg Boss Kannada updates: Divya Suresh says I love Manju Pavagada but as a friend)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us