AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಕೊನೆಯ ಸಿನಿಮಾಕ್ಕೆ ಬಾಲಿವುಡ್​ನಿಂದ ಬಂದ ವಿಲನ್

Thalapathy Vijay: ದಳಪತಿ ವಿಜಯ್ ಕೆಲ ದಿನಗಳ ಹಿಂದಷ್ಟೆ ತಮ್ಮ ಕೊನೆಯ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಬಾಲಿವುಡ್​ನಿಂದ ಬರಲಿದ್ದಾರೆ ವಿಲನ್.

ವಿಜಯ್ ಕೊನೆಯ ಸಿನಿಮಾಕ್ಕೆ ಬಾಲಿವುಡ್​ನಿಂದ ಬಂದ ವಿಲನ್
ಮಂಜುನಾಥ ಸಿ.
|

Updated on: Sep 15, 2024 | 3:31 PM

Share

ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ಕೆಲವೇ ವಾರಗಳ ಹಿಂದೆ ತೆರೆಗೆ ಬಂದಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಸಿನಿಮಾ ಹೇಗೆ ಇದ್ದರೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶವನ್ನೇ ಕಂಡಿತು ‘ಗೋಟ್’ ಸಿನಿಮಾ. ಇದರ ಬೆನ್ನಲ್ಲೆ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದ ಘೋಷಣೆ ಆಗಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಲಿರುವ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದು, ಇದು ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಸಿನಿಮಾಕ್ಕೆ ಬಾಲಿವುಡ್​ನಿಂದ ಬರಲಿದ್ದಾರೆ ವಿಲನ್.

90ರ ದಶಕದಲ್ಲಿ ನಾಯಕ ನಟನಾಗಿ ಮಿಂಚಿದ್ದ ಬಾಬಿ ಡಿಯೋಲ್ ಆ ನಂತರ ಅವಕಾಶಗಳನ್ನು ಕಳೆದುಕೊಂಡಿದ್ದರು. ಇದೀಗ ವಿಲನ್ ಆಗಿ ವೃತ್ತಿಯನ್ನು ಮತ್ತೆ ಪ್ರಾರಂಭಿಸಿದ್ದು, ನಾಯಕನಾಗಿ ಗಳಿಸಿದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ವಿಲನ್ ಆಗಿ ಪಡೆಯುತ್ತಿದ್ದಾರೆ ಬಾಬಿ. ‘ಅನಿಮಲ್’ ಸಿನಿಮಾದ ಬಳಿಕವಂತೂ ವಿಲನ್ ಬಾಬಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ವಿಜಯ್​ರ ಕೊನೆಯ ಸಿನಿಮಾದಲ್ಲಿಯೂ ಬಾಬಿ ವಿಲನ್ ಆಗಿ ನಟಿಸಲಿದ್ದಾರೆ.

ಇದನ್ನೂ ಓದಿ: ‘2026ಕ್ಕೆ ಸಿಎಂ’: ದಳಪತಿ ವಿಜಯ್ ಕಾರ್ ನಂಬರ್ ನೋಡಿದ್ರಾ?

ವಿಜಯ್​ರ ಈ ಹಿಂದಿನ ‘ಲಿಯೋ’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದರು. ಇದೀಗ ವಿಜಯ್​ರ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಲಿದ್ದಾರೆ. ಅಂದಹಾಗೆ ಬಾಬಿ ಡಿಯೋಲ್​ಗೆ ಇದು ಮೊದಲ ತಮಿಳು ಸಿನಿಮಾ ಏನಲ್ಲ. ಬಾಬಿ ಡಿಯೋಲ್ ಈಗಾಗಲೇ ಸೂರ್ಯ ಜೊತೆಗೆ ‘ಕನಗುವ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈಗ ವಿಜಯ್​ರ ಕೊನೆಯ ಸಿನಿಮಾ ಬಾಬಿ ಪಾಲಿಗೆ ಎರಡನೇ ತಮಿಳು ಸಿನಿಮಾ ಆಗಿರಲಿದೆ.

ಇನ್ನು ಬಾಬಿ ಡಿಯೋಲ್ ತೆಲುಗಿನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ 109ನೇ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಹಿಂದಿಯ ‘ಆಲ್ಫಾ’ ಮತ್ತು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಬಾಬಿ ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಬಾಬಿಗೆ ಇನ್ನಷ್ಟು ದಕ್ಷಿಣ ಭಾರತದ ಸಿನಿಮಾಗಳ ಅವಕಾಶಗಳು ಬರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us