ಸೀಸನ್ಗೆ ತಕ್ಕಂತೆ ಫಿಟ್ನೆಸ್ ಮೇಂಟೇನ್ ಮಾಡ್ತಾರೆ ಈ ಬಾಲಿವುಡ್ ಬ್ಯೂಟಿ
ಸಯಾನಿ ಗುಪ್ತಾ ಅಂದ್ರೆ ಸೌಂದರ್ಯ ಸುನಾಮಿ. ಸೀಸನ್‌ಗಳು ಸದಾ ಬದಲಾಗುತ್ತಲೇ ಇರುತ್ತವೆ, ಅದಕ್ಕೆ ತಕ್ಕಂತೆ ನಾವು ಮುನ್ನೆಡೆಯುವುದು ಮುಖ್ಯ. ಮಾನ್ಸೂನ್, ವಿಂಟರ್ ಅಥವಾ ರೇನಿ ಸೀಸನ್ನೇ ಇರಲಿ ಅದಕ್ಕೆ ತಕ್ಕಂತೆ ಇರಬೇಕು, ಅದಕ್ಕನುಗಣವಾಗಿ ಫಿಟ್ನೆಸ್ ಕಾಪಾಡಿಕೊಳ್ಳಬೇಕು ಅಂತಾರೆ ಸಯಾನಿ ಉರುಫ್ ಸುನಾಮಿ. ಅದ್ರಲ್ಲೂ ಮಾನ್ಸೂನ್ ಎಂದಿಗೂ ಬ್ಯೂಟಿಫುಲ್ ಎನ್ನುತ್ತಾರೆ ನಟಿ ಸಯಾನಿ ಗುಪ್ತಾ. ಮಳೆಗಾಲಕ್ಕೂ ತಾನು ತನ್ನ ಫಿಟ್ನೆಸ್ ತಪ್ಪಿಸುವುದಿಲ್ಲ ಅಂತಾರೆ ಅವರು. ಆದ್ರೆ ಮಳೆಗಾಲಕ್ಕೆ ಮನ ಬಿಡುವಾಗ ಸಾಕಷ್ಟು ಪ್ರಿಪೇರ್ ಆಗಿರಬೇಕು. ಮಳೆಗಾಲಕ್ಕೆ ಕೊಡೆ ರೇನ್ […]
ಸಯಾನಿ ಗುಪ್ತಾ ಅಂದ್ರೆ ಸೌಂದರ್ಯ ಸುನಾಮಿ. ಸೀಸನ್‌ಗಳು ಸದಾ ಬದಲಾಗುತ್ತಲೇ ಇರುತ್ತವೆ, ಅದಕ್ಕೆ ತಕ್ಕಂತೆ ನಾವು ಮುನ್ನೆಡೆಯುವುದು ಮುಖ್ಯ. ಮಾನ್ಸೂನ್, ವಿಂಟರ್ ಅಥವಾ ರೇನಿ ಸೀಸನ್ನೇ ಇರಲಿ ಅದಕ್ಕೆ ತಕ್ಕಂತೆ ಇರಬೇಕು, ಅದಕ್ಕನುಗಣವಾಗಿ ಫಿಟ್ನೆಸ್ ಕಾಪಾಡಿಕೊಳ್ಳಬೇಕು ಅಂತಾರೆ ಸಯಾನಿ ಉರುಫ್ ಸುನಾಮಿ.
ಅದ್ರಲ್ಲೂ ಮಾನ್ಸೂನ್ ಎಂದಿಗೂ ಬ್ಯೂಟಿಫುಲ್ ಎನ್ನುತ್ತಾರೆ ನಟಿ ಸಯಾನಿ ಗುಪ್ತಾ. ಮಳೆಗಾಲಕ್ಕೂ ತಾನು ತನ್ನ ಫಿಟ್ನೆಸ್ ತಪ್ಪಿಸುವುದಿಲ್ಲ ಅಂತಾರೆ ಅವರು. ಆದ್ರೆ ಮಳೆಗಾಲಕ್ಕೆ ಮನ ಬಿಡುವಾಗ ಸಾಕಷ್ಟು ಪ್ರಿಪೇರ್ ಆಗಿರಬೇಕು. ಮಳೆಗಾಲಕ್ಕೆ ಕೊಡೆ ರೇನ್ ಕೋಟ್ ಹೇಗೆ ಅಗತ್ಯನೋ ಹಾಗೆ ವಿಂಟರ್ಗೆ ಬೆಚ್ಚಗಿನ ಸ್ವೆಟರ್, ಜಾಕೆಟ್ ಬೇಕು ಅಂತಾರೆ ಅವರು. ಸೀಸನ್ ಯಾವುದೇ ಇದ್ದರೂ ತಮ್ಮ ಫಿಟ್ನೆಸ್ ರೆಜಿಮ್ಗೆ ತೊಂದರೆಯಾಗಬಾರದು ಅನ್ನೋದು ಅವರ ಅಭಿಪ್ರಾಯ.
ಸಯಾನಿಯವರ ವ್ಯಾಯಾಮಕ್ಕೊಂದು ಕ್ರಮವಿದೆ. ಅದರಂತೆ, ಅವರು ಪರ್ಸನಲ್ ಜಿಮ್ ಟ್ರೈನರನ್ನು ಇಟ್ಟುಕೊಂಡಿದ್ದಾರೆ. ಪರ್ಸನಲ್ ಟ್ರೈನರ್ ಮನೆಗೆ ಬಂದು ಅವರಿಗೆ ಎಕ್ಸಸೈಸ್ ಹೇಳಿಕೊಡ್ತಾರಂತೆ. ಆದ್ರೆ, ಅವರು ವಾರಕ್ಕೆ 3 ಬಾರಿ ತಲಾ ಒಂದೊಂದು ಗಂಟೆ ವ್ಯಾಯಾಮ ಮಾಡ್ತಾರೆ. ಅದರಲ್ಲಿ ವೇಟ್ ಟ್ರೈನಿಂಗ್ ಮತ್ತು ಕಾರ್ಡಿಯೋ ಕಾಂಬಿನೇಶನ್ ಇರುತ್ತೆ. ಹಾಗೆಂದು ಶೂಟಿಂಗ್ ಇರುವಾಗ ವ್ಯಾಯಾಮಕ್ಕೆ ಅಂಟಿಕೊಳ್ಳುವುದಿಲ್ಲ. ಆದ್ರೆ ಎಲ್ಲಾ ಕಾಲಕ್ಕೂ ತಮ್ಮ ಮೆಟಬಾಲಿಸಂ ಚೆನ್ನಾಗಿದೆ ಅಂತಾರೆ ಅವರು. ಪ್ರತಿ ಸೀಸನ್ನಲ್ಲೂ ಅವರು ಎಕ್ಸಸೈಸ್ ಜೊತೆಗೆ ಯೋಗ ಕೂಡಾ ಮಾಡ್ತಾರೆ.
ಇದೆಲ್ಲದರ ಜೊತೆಗೆ ಆಹಾರದ ಬಗ್ಗೆ ಸಖತ್ ಕಾಳಜಿ ವಹಿಸ್ತಾರೆ ಸಯಾನಿ ಗುಪ್ತಾ. ಸೇವಿಸುವ ಆಹಾರವನ್ನು ಬಿಸಿಯಾಗಿರುವಾಗಲೇ ಸೇವಿಸಬೇಕು. ತಣ್ಣೀರು ಸ್ನಾನ, ಶೀತಗುಣವುಳ್ಳ ಆಹಾರ ಪದಾರ್ಥವನ್ನು ಸೀಸನ್ನಿಗೆ ತಕ್ಕಂತೆ ವರ್ಜಿಸಬೇಕು ಎನ್ನುತ್ತಾರೆ. ಆದ್ರೆ, ಸಾಮಾನ್ಯವಾಗಿ ತಿನ್ನುವಾಗ ಹೆಚ್ಚಿನ ಮಡಿವಂತಿಕೆ ಮಾಡಲ್ಲ. ತಿನ್ನುವ ಕಾಲಕ್ಕೆ ರೈಸ್, ಸ್ವೀಟ್ ಎಲ್ಲವನ್ನು ತಿಂತಾರೆ. ಬಿರಿಯಾನಿ ಮತ್ತು ಬೆಂಗಾಳಿ ಫುಡ್ಗಳನ್ನು ಕೂಡಾ ಸೇವಿಸ್ತಾರೆ. ಅದ್ರ ಜೊತೆ ಜೊತೆ ಸಮಪ್ರಮಾಣದ ಹಣ್ಣು ತರಕಾರಿ ಮತ್ತು ಮಾಂಸಾಹಾರವನ್ನು ಸೇವಿಸ್ತಾರೆ. ಸಮತೋಲಿತ ಆಹಾರ ಮತ್ತು ವ್ಯಾಯಾಮದ ಜೊತೆಗೆ ಸಯಾನಿ ಗುಪ್ತಾ ಫಿಟ್ ಮತ್ತು ಫೈನ್ ಆಗಿದ್ದಾರೆ.
Published On - 7:55 am, Fri, 1 November 19