
ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ಬಹಳ ಜೋರಾಗಿ ನಡೆದಿದೆ. ದೇಶ ವಿದೇಶದ ಅನೇಕ ಸೆಲೆಬ್ರಿಟಿಗಳು ಈ ಇವೆಂಟ್ನಲ್ಲಿ ಭಾಗಿಯಾಗಿ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ವಿಶ್ವದ ಗಣ್ಯಾತಿಗಣ್ಯರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ವಿಶ್ವ ವಿಖ್ಯಾತ ಸಿಂಗರ್ ರಿಯಾನಾ ಅವರು ಭರ್ಜರಿ ಮನರಂಜನೆ ನೀಡಿದ್ದಾರೆ. ಅದೇ ರೀತಿ, ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರು ಒಟ್ಟಿಗೆ ವೇದಿಕೆ ಏರಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಅವರು ‘ನಾಟು ನಾಟು..’ (Naatu Naatu) ಹಾಡಿಗೆ ಡ್ಯಾನ್ಸ್ ಮಾಡಲಾಗದೇ ಸೋತಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ರೀತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಆ ರೀತಿ ಡ್ಯಾನ್ಸ್ ಮಾಡಲು ಪ್ರಯತ್ನಿಸಿ ಸೋತಿದ್ದಾರೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರು ವೇದಿಕೆ ಏರಿದಾಗ ‘ನಾಟು ನಾಟು..’ ಹಾಡು ಪ್ಲೇ ಮಾಡಲಾಗಿದೆ. ಅದಕ್ಕೆ ಸರಿಯಾಗಿ ಡ್ಯಾನ್ಸ್ ಮಾಡಲು ಈ ಮೂವರು ಸೂಪರ್ ಸ್ಟಾರ್ಗಳಿಗೆ ಸಾಧ್ಯವಾಗಿಲ್ಲ.
ವೇದಿಕೆಯಲ್ಲಿ ಸಾಂಗ್ ಪ್ಲೇ ಆಗುತ್ತಲೇ ಇತ್ತು. ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್ ಮಾಡಲು ಸಾಧ್ಯವಾಗದೇ ಸೋತಾಗ ಆ ಮುಜುಗರದ ಸನ್ನಿವೇಶದಿಂದ ಪಾರಾಗಲು ಸಲ್ಮಾನ್ ಖಾನ್ ಅವರು ಕೂಡಲೇ ಒಂದು ಪ್ಲಾನ್ ಮಾಡಿದರು. ‘ನಾಟು ನಾಟು..’ ಹಾಡಿಗೆ ಅವರು ತಮ್ಮ ಸಿನಿಮಾದ ಬೇರೆ ಬೇರೆ ಫೇಮಸ್ ಹುಕ್ ಸ್ಟೆಪ್ಗಳನ್ನು ಹಾಕಿದರು. ಅದೇ ರೀತಿ ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಕೂಡ ತಮ್ಮ ಸಿನಿಮಾಗಳ ಫೇಮಸ್ ಡ್ಯಾನ್ಸ್ ಸ್ಟೆಪ್ಗಳನ್ನು ಮಾಡಿದರು.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ಜಾಮ್ನಗರದಲ್ಲಿ ಮೂರು ದಿನಗಳ ಕಾಲ ನಡೆದಿದೆ. ಮಾರ್ಚ್ 1ರಿಂದ ಮಾರ್ಚ್ 3ರ ತನಕ ಅದ್ದೂರಿಯಾಗಿ ನಡೆದ ಈ ಸಮಾರಂಭಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸಿಂಗರ್ ರಿಯಾನಾ ಅವರಿಗೆ ಬರೋಬ್ಬರಿ 73 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಸುದ್ದಿ ಆಗಿದೆ. ಈ ಸಮಾರಂಭದ ಅದ್ದೂರಿತನವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.