Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರು ಕೋಟಿ ರೂಪಾಯಿ ಒಡೆಯ ಆಮಿರ್ ಖಾನ್​; 20 ವರ್ಷಗಳಿಂದ ಪಡೆದಿಲ್ಲ ಸಂಭಾವನೆ

Aamir Khan Birthday: ಆಮಿರ್ ಖಾನ್ ಅವರು ಸಾವಿರಾರು ಕೋಟಿ ರೂಪಾಯಿಗಳಷ್ಟು ಆಸ್ತಿ ಹೊಂದಿದ್ದಾರೆ. ಬ್ರಾಂಡ್ ಪ್ರಚಾರ, ಚಿತ್ರ ನಿರ್ಮಾಣ ಮತ್ತು ಚಿತ್ರಗಳಲ್ಲಿ ನಟನೆಯಿಂದ ಲಾಭ ಪಡೆಯುತ್ತಾ ಇದ್ದಾರೆ. ಅವರ ಐಷಾರಾಮಿ ಜೀವನಶೈಲಿ, ದುಬಾರಿ ಕಾರುಗಳು ಮತ್ತು ಪ್ರಾಪರ್ಟಿಗಳ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ. ಆಮಿರ್ ತಮ್ಮ ನಟನೆಯಿಂದ ಗಳಿಸುವ ಹಣವನ್ನು ಚಿತ್ರ ನಿರ್ಮಾಣದಲ್ಲಿ ಹೂಡಿಕೆ ಮಾಡುತ್ತಾರೆ.

ಸಾವಿರಾರು ಕೋಟಿ ರೂಪಾಯಿ ಒಡೆಯ ಆಮಿರ್ ಖಾನ್​; 20 ವರ್ಷಗಳಿಂದ ಪಡೆದಿಲ್ಲ ಸಂಭಾವನೆ
ಆಮಿರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 14, 2025 | 6:30 AM

ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಇಂದು (ಮಾರ್ಚ್ 14) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಆಮಿರ್ ಖಾನ್ (Amir Khan) ಇತ್ತೀಚೆಗೆ ಸಿನಿಮಾ ಮಾಡಿದ್ದು ಕಡಿಮೆ ಇರಬಹುದು. ಆದರೆ, ಅವರು ಸಿನಿಮಾ ನಿರ್ಮಾಣದ ಕಡೆಗೂ ಗಮನ ಹರಿಸಿದ್ದಾರೆ. ಚಿತ್ರರಂಗ ತೊರೆಯುವ ಮೊದಲು ಅವರಿಗೆ ಒಳ್ಳೊಳ್ಳೆಯ ಸಿನಿಮಾ ಕೊಡೋ ಆಸೆ ಇದೆ. ಆಮಿರ್ ಖಾನ್ ಅವರು ಬಾಲಿವುಡ್​ನ ಶ್ರೀಮಂತ ನಟರಲ್ಲಿ ಒಬ್ಬರು. ಕಳೆದ 20 ವರ್ಷಗಳಿಂದ ಅವರು ಸಂಭಾವನೆಯನ್ನೇ ಪಡೆದಿಲ್ಲ. ಆದಾಗ್ಯೂ ಅವರು ದುಡ್ಡು ಮಾಡುತ್ತಿರುವುದು ಹೇಗೆ? ಆ ಪ್ರಶ್ನೆಗೆ ಇಲ್ಲಿ ಉತ್ತರ ಇದೆ.

ಆಮಿರ್ ಖಾನ್ ಅವರು ಬಾಲಿವುಡ್​ನ ಶ್ರೇಷ್ಠ ನಟರಲ್ಲಿ ಒಬ್ಬರು. 1973ರಲ್ಲಿ ರಿಲೀಸ್ ಆದ ‘ಯಾದೋ ಕಿ ಭಾರತ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಅವರು ನಟಿಸಿದರು. ಆ ಬಳಿಕ ಸಹಾಯಕ ನಿರ್ದೇಶಕನಾದರು. 90ರ ದಶಕದಲ್ಲಿ ಅವರು ಹೀರೋ ಆದರು. ಆ ಬಳಿಕ ಸಾಲು ಸಾಲು ಆಫರ್​ಗಳು ಅವರನ್ನು ಹುಡುಕಿ ಬಂದವು. ಆಮಿರ್ ಖಾನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಆಮಿರ್ ಖಾನ್ ಅವರ ಆಸ್ತಿ 1862 ಕೋಟಿ ರೂಪಾಯಿ ಆಗಿದೆ. ಬ್ರ್ಯಾಂಡ್​ಗಳ ಪ್ರಚಾರ, ಸಿನಿಮಾದಲ್ಲಿ ನಟನೆ, ಸಿನಿಮಾ ನಿರ್ಮಾಣದಿಂದ ಅವರಿಗೆ ಸಂಭಾವನೆ ಬರುತ್ತದೆ. ಆಮಿರ್ ಖಾನ್ ಅವರು ತಾವು ನಟಿಸೋ ಸಿನಿಮಾಗಳಲ್ಲಿ ಸಂಭಾವನೆ ಪಡೆಯುವುದಿಲ್ಲ. ಆ ಹಣವನ್ನು ನಿರ್ಮಾಣಕ್ಕೆ ಹಾಕುವಂತೆ ಕೋರುತ್ತಾರೆ. ಇದೇ ಹಣದಿಂದ ಅವರು ಲಾಭ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ
Image
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
Image
ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
Image
ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಕನ್ನಡ ಚಿತ್ರರಂಗದ ಹೆಮ್ಮೆ
Image
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು

ಆಮಿರ್ ಖಾನ್ ಅವರು ಸಾಕಷ್ಟು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ‘ಬವೆರ್ಲಿ ಹಿಲ್ಸ್ ಮ್ಯಾನ್ಶನ್​ನಲ್ಲಿ ಮನೆ ಹೊಂದಿದ್ದು ಇದರ ಬೆಲೆ 75 ಕೋಟಿ ರೂಪಾಯಿ. ಬಾಂದ್ರಾದಲ್ಲಿ ಸಮುದ್ರ ಕಡೆ ಮುಖ ಮಾಡಿದ ಮನೆ ಇದೆ. ಅವರು ಫಾರ್ಮ್​ಹೌಸ್ ಕೂಡ ಹೊಂದಿದ್ದು ಇದರ ಬೆಲೆ 100 ಕೋಟಿ ರೂಪಾಯಿ ಅಷ್ಟಿದೆ.

ಇದನ್ನೂ ಓದಿ: ಆಮಿರ್ ಖಾನ್ 60ನೇ ವರ್ಷದ ಬರ್ತ್​ಡೇ ಪಾರ್ಟಿಗೆ ಬಂದ ಶಾರುಖ್, ಸಲ್ಮಾನ್

ಆಮಿರ್ ಖಾನ್ ಅವರು ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರಿಗೆ ಕಾರಿನ ಬಗ್ಗೆ ಅಷ್ಟಾಗಿ ಕ್ರೇಜ್ ಇಲ್ಲ. ಆದರೆ, ಕಾರುಗಳನ್ನು ಅವರು ಓಡಾಟಕ್ಕೆ ಬಳಕೆ ಮಾಡುತ್ತಾರೆ. ಇದಕ್ಕೆ ಅವರು ಐಷಾರಾಮಿ ಕಾರುಗಳನ್ನೇ ಹೊಂದಿದ್ದಾರೆ. ರೋಲ್ಸ್ ರಾಯ್ಸ್, ಮರ್ಸೀಡಿಸ್ ಬೆಂಜ್ ಮೇಬ್ಯಾಷ್, ಬಿಎಂಡ್ಬ್ಲೂ ರೀತಿಯ ಕಾರುಗಳು ಅವರ ಬಳಿ ಇವೆ. ‘ಲಗಾನ್’, ‘ದಂಗಲ್’ ರೀತಿಯ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಸದ್ಯ ಅವರು ‘ಸಿತಾರೇ ಜಮೀನ್​ಪರ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ