Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ಪೋರ್ಟ್​ನಲ್ಲಿ ಕ್ಯಾಮೆರಾ ಕಂಡು ಸಿಟ್ಟಾದ ಅಭಿಷೇಕ್ ಬಚ್ಚನ್ ಮಾಡಿದ್ದೇನು ನೋಡಿ

Abhishek Bachchan-Aishwarya Rai: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದೀಗ ಅಭಿಷೇಕ್ ಬಚ್ಚನ್ ನಡೆದುಕೊಂಡಿರುವ ರೀತಿ ವಿಚ್ಛೇದನ ಸುದ್ದಿಗಳಿಗೆ ಪುಷ್ಠಿ ನೀಡುತ್ತಿದೆ.

ಏರ್ಪೋರ್ಟ್​ನಲ್ಲಿ ಕ್ಯಾಮೆರಾ ಕಂಡು ಸಿಟ್ಟಾದ ಅಭಿಷೇಕ್ ಬಚ್ಚನ್ ಮಾಡಿದ್ದೇನು ನೋಡಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 22, 2024 | 6:44 PM

ಸದ್ಯ ಎಲ್ಲೆಲ್ಲೂ ಅಭಿಷೇಕ್ ಬಚ್ಚನ್ ಅವರದ್ದೇ ಸುದ್ದಿ. ಅವರು ಐಶ್ವರ್ಯಾ ರೈ ಅವರಿಂದ ದೂರ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೆ ಬೇರೆ ನಟಿಯ ಜೊತೆ ಸಂಬಂಧ ಇರುವ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿರುವುದು ನಿಜ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕ್ಯಾಮೆರಾ ನೋಡಿ ಅವರು ಸಾಕಷ್ಟು ಇರಿಟೇಟ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಷೇಕ್ ಬಚ್ಚನ್ ಅವರು ‘ಹೌಸ್ಫುಲ್ 5’ರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ಗಾಗಿ ಅಭಿಷೇಕ್ ಬಚ್ಚನ್ ಅವರು ವಿದೇಶಕ್ಕೆ ತೆರಳಿದ್ದರು. ಈಗ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ. ಕ್ಯಾಮೆರಾ ಕಾಣುತ್ತಿದ್ದಂತೆ ಅವರು ಇರಿಟೇಟ್ ಆಗಿದ್ದಾರೆ. ಕ್ಯಾಮೆರಾದವರು ಬಳಿ ದೂರ ಹೋಗುವಂತೆ ಕೋರಿದ್ದಾರೆ. ಆದರೆ, ಅವರು ಹೋಗಿಲ್ಲ.

ಅಭಿಷೇಕ್ ಅವರು ಕ್ಯಾಮೆರಾ ಕಾಣುತ್ತಿದದ್ದಂತೆ, ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆ ಬಳಿಕ ‘ಸಾಕು ನಿಲ್ಲಿಸಿ, ಧನ್ಯವಾದ’ ಎಂದಿದ್ದಾರೆ. ಈ ವೇಳೆ ಅವರು ಕೈ ಕೂಡ ಮುಗಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನಾನಾ ರೀತಿಯಲ್ಲಿ ಬಣ್ಣಿಸುವ ಕೆಲಸ ಆಗುತ್ತಿದೆ.

ಇದನ್ನೂ ಓದಿ:ಎಲ್ಲರ ಎದುರು ಅಭಿಷೇಕ್ ಜತೆ ಐಶ್ವರ್ಯಾ ರೈ ಜಗಳ; ವಿಡಿಯೋದಿಂದ ಹೆಚ್ಚಿತು ಡಿವೋರ್ಸ್ ಗುಮಾನಿ

ಅಭಿಷೇಕ್ ಬಚ್ಚನ್ ಅವರು ಲಂಡನ್ನಲ್ಲಿ ‘ಹೌಸ್ಫುಲ್ 5’ ಶೂಟ್ ಮಾಡುತ್ತಿದ್ದಾರೆ. ಈ ಚಿತ್ರದ ಸೆಟ್ನ ಫೋಟೋ ವೈರಲ್ ಆಗಿದೆ. ಅಭಿಷೇಕ್ ಬಚ್ಚನ್, ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಷ್ ದೇಶ್ಮುಖ್, ಚಂಕಿ ಪಾಂಡೆ ಸೇರಿ ಅನೇಕರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಹೌಸ್ಫುಲ್’ ಬಾಲಿವುಡ್ನ ಯಶಸ್ವಿ ಸೀರಿಸ್ಗಳಲ್ಲಿ ಒಂದು. ಹೀಗಾಗಿ, ‘ಹೌಸ್ಫುಲ್ 5’ ಮೇಲೆ ನಿರೀಕ್ಷೆ ಇದೆ.

View this post on Instagram

A post shared by Voompla (@voompla)

ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರಿಂದ ದೂರವೇ ಇದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಇದನ್ನು ದಂಪತಿ ಅಧಿಕೃತ ಮಾಡಿಲ್ಲ. ಇದು ನಿಜ ಎಂದು ಸಾಬೀತು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಇಲ್ಲಿಯವರೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದು ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅಭಿಷೇಕ್ ಬಚ್ಚನ್ ಕೆಲ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ, ಐಶ್ವರ್ಯಾ ರೈ ಯಾವುದೇ ಸಿನಿಮಾ ಮಾಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ