‘ಇನ್ಮೇಲೆ ಎಲ್ಲ ನಟರನ್ನೂ ಪ್ರೀತಿಸುತ್ತೇನೆ’: ವಿವಾದದ ಬಳಿಕ ಅರ್ಷದ್ ವಾರ್ಸಿ ನಿರ್ಧಾರ

ಪ್ರಭಾಸ್​ ಬಗ್ಗೆ ಅರ್ಷದ್ ವಾರ್ಸಿ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಬಳಿಕ ಅವರು ಎಚ್ಚೆತ್ತುಕೊಂಡಿದ್ದಾರೆ. ಇನ್ಮುಂದೆ ಎಲ್ಲ ನಟರನ್ನು ತಾವು ಪ್ರೀತಿಸುವುದಾಗಿ ಅರ್ಷದ್ ತಿಳಿಸಿದ್ದಾರೆ. ಜನರು ಈ ಮೊದಲು ಟ್ರೋಲ್ ಮಾಡಲು ಆರಂಭಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಅರ್ಷದ್ ವಾರ್ಸಿ ಅವರು ಕಮೆಂಟ್ ಆಯ್ಕೆಯನ್ನು ತೆಗೆದುಹಾಕಿದ್ದರು.

‘ಇನ್ಮೇಲೆ ಎಲ್ಲ ನಟರನ್ನೂ ಪ್ರೀತಿಸುತ್ತೇನೆ’: ವಿವಾದದ ಬಳಿಕ ಅರ್ಷದ್ ವಾರ್ಸಿ ನಿರ್ಧಾರ
ಪ್ರಭಾಸ್, ಅರ್ಷದ್ ವಾರ್ಸಿ
Follow us
ಮದನ್​ ಕುಮಾರ್​
|

Updated on: Oct 22, 2024 | 4:52 PM

ಬಾಲಿವುಡ್ ನಟ ಅರ್ಷದ್​ ವಾರ್ಸಿ ಅವರು ಕೆಲವು ವಾರಗಳ ಹಿಂದೆ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸುವಾಗ ಅವರು, ‘ಪ್ರಭಾಸ್ ಪಾತ್ರ ಜೋಕರ್​ ರೀತಿ ಕಾಣಿಸುತ್ತಿದೆ’ ಎಂದು ಹೇಳಿದ್ದರು. ಇದರಿಂದ ಪ್ರಭಾಸ್ ಅಭಿಮಾನಿಗಳು ತೀವ್ರ ಟೀಕೆ ಮಾಡಿದ್ದರು. ಬಳಿಕ ಬಾಲಿವುಡ್ ವರ್ಸಸ್ ಸೌತ್ ಸಿನಿಮಾ ಎಂಬ ಚರ್ಚೆ ಜೋರಾಗಲು ಕೂಡ ಅವರ ಈ ಹೇಳಿಕೆ ಕಾರಣ ಆಗಿತ್ತು. ಆ ಘಟನೆಗಳ ಬಗ್ಗೆ ಈಗ ಅರ್ಷದ್​ ವಾರ್ಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಎಲ್ಲರಿಗೂ ಅವರವರ ದೃಷ್ಟಿಕೋನ ಇರುತ್ತದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ನೀವು ಪಾಸಿಟಿವ್ ವ್ಯಕ್ತಿ ಆಗಿದ್ದರೆ ಯಾವುದೇ ನೆಗೆಟಿವ್ ವಿಚಾರ ಎದುರಾದಾಗ ಅದು ನಿಮ್ಮನ್ನು ಬಾಧಿಸುತ್ತದೆ. ನಾವು ಕಲ್ಲು ಬೀಳುವ ಜಾಗದಲ್ಲಿ ಇದ್ದೇವೆ. ಈಗ ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅರ್ಷದ್ ವಾರ್ಸಿ ಅವರು ಹೇಳಿದ್ದಾರೆ.

ಪ್ರಭಾಸ್ ಮಾಡಿದ್ದ ಪಾತ್ರವನ್ನು ಜೋಕರ್​ ಎಂದು ಕರೆದ ಬಳಿಕ ಜನರು ಅರ್ಷದ್ ವಾರ್ಸಿ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಹಾಗಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಮೆಂಟ್ ಆಯ್ಕೆಯನ್ನು ಅರ್ಷದ್ ವಾರ್ಸಿ ಆಫ್ ಮಾಡಿದ್ದಾರೆ. ಆ ಬಗ್ಗೆ ಕೇಳಿದ್ದಕ್ಕೆ ‘ಅದು ಹೇಗೆ ಮಾಡುವುದು ಅಂತ ನನಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂಚಿತವಾಗಿ ನಟ ಪ್ರಭಾಸ್ ಜನ್ಮದಿನ ಆಚರಿಸಿದ ಟೋಕಿಯೋ ಅಭಿಮಾನಿಗಳು

ಒಮ್ಮೆ ಇಷ್ಟೆಲ್ಲ ಕಾಂಟ್ರವರ್ಸಿ ಆಗಿರುವುದರಿಂದ ಇನ್ಮುಂದೆ ಯಾವುದೇ ನಟರ ಬಗ್ಗೆ ಮಾತನಾಡುವಾಗ ಅರ್ಷದ್ ವಾರ್ಸಿ ಅವರು ಎಚ್ಚರಿಕೆ ವಹಿಸುತ್ತಾರೆ? ಈ ಪ್ರಶ್ನೆಗೆ ಅವರು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ಎಚ್ಚರಿಕೆ ವಹಿಸುತ್ತೇನೆ. ನಾನು ನೋಡುವ ಎಲ್ಲ ಸಿನಿಮಾವನ್ನೂ ಪ್ರೀತಿಸುತ್ತೇನೆ ಹಾಗೂ ಜೀವನದ ಕೊನೆಯ ತನಕ ಎಲ್ಲ ನಟರನ್ನೂ ನಾನು ಪ್ರೀತಿಸುವುದಾಗಿ ನಿರ್ಧಾರ ಮಾಡಿದ್ದೇನೆ’ ಎಂದಿದ್ದಾರೆ ಅರ್ಷದ್ ವಾರ್ಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ