ಮುಂಜಾನೆ ಎದ್ದು ಬಿಯರ್ ರೀತಿ ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್; ಕಾರಣ ಏನು?

ಹಿರಿಯ ನಟ ಪರೇಶ್ ರಾವಲ್ ಅವರು ಮೊಣಕಾಲು ಗಾಯದಿಂದ ಬಳಲುತ್ತಿದ್ದಾಗ, ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ಅವರು ಮೂತ್ರ ಸೇವನೆಯನ್ನು ಸಲಹೆ ನೀಡಿದ್ದರು. ಪರೇಶ್ ರಾವಲ್ ಅವರು 15 ದಿನಗಳ ಕಾಲ ಈ ಚಿಕಿತ್ಸೆಯನ್ನು ಅನುಸರಿಸಿ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಮುಂಜಾನೆ ಎದ್ದು ಬಿಯರ್ ರೀತಿ ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್; ಕಾರಣ ಏನು?
ಪರೇಶ್ ರಾವಲ್

Updated on: Apr 28, 2025 | 7:03 AM

ಹಿರಿಯ ನಟ ಪರೇಶ್ ರಾವಲ್ (Paresh Rawal) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಾಗ ಭರಪೂರವಾಗಿ ನಗು ಉಕ್ಕಿಸುತ್ತಾರೆ. ಅದರಲ್ಲೂ ‘ಹೇರಾ ಫೇರಿ’ ಸಿನಿಮಾ ಸರಣಿಯಲ್ಲಿ ಅವರು ಮಾಡಿದ ಬಾಬುರಾವ್ ಪಾತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಈಗ ಅವರ ಕಡೆಯಿಂದ ಒಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಮುಂಜಾನೆ ಎದ್ದ ತಕ್ಷಣ ಪರೇಶ್ ರಾವಲ್ ಕುಡಿಯೋದು ನೀರನಲ್ಲ, ಬದಲಿಗೆ ತಮ್ಮದೇ ಮೂತ್ರವನ್ನು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಪರೇಶ್ ರಾವಲ್ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾಗ ಮೊಣಕಾಲು ಗಾಯ ಆಯಿತು. ಇದರ ಪರಿಹಾರಕ್ಕೆ ಅಜಯ್ ದೇವಗನ್ ತಂದೆ ವೀರು ದೇವಗನ್ ಒಂದು ಪರಿಹಾರ ಕೊಟ್ಟರು. ಅದುವೇ ಮೂತ್ರ ಸೇವನೆ. ಮುಂಜಾನೆ ಎದ್ದ ತಕ್ಷಣ ಅವರು ಮೂತ್ರ ಸೇವನೆ ಮಾಡಲು ಆರಂಭಿಸಿದರು ಮತ್ತು ಕಾಲಿನ ಸಮಸ್ಯೆಗೆ ಪರಿಹಾರ ಪಡೆದುಕೊಂಡರು!

‘ನಾನು ಆಸ್ಪತ್ರೆಯಲ್ಲಿ ಇದ್ದಾಗ ವೀರು ದೇವಗನ್ ಅವರು ಭೇಟಿ ಮಾಡಲು ಬಂದರು. ಅವರು ಬಂದು ಏನಾಯಿತು ಎಂದು ವಿಚಾರಿಸಿದರು. ನನ್ನ ಕಾಲಿನ ಗಾಯದ ಬಗ್ಗೆ ಅವರಿಗೆ ವಿವರಿಸಿದೆ. ಆ ಸಮಯದಲ್ಲಿ ನನ್ನ ಕರಿಯರ್ ಕೊನೆ ಆಯಿತು ಎಂದುಕೊಂಡೆ. ಆಗ ಅವರು ಮುಂಜಾನೆ ಎದ್ದ ತಕ್ಷಣ ನನ್ನದೇ ಮೂತ್ರವನ್ನು ಸೇವನೆ ಮಾಡಲು ಹೇಳಿದರು. ಮದ್ಯ ಸೇವನೆ ಮಾಡಬಾರದು ಎಂದರು. ನಾನು ಅದನ್ನು ಬಿಟ್ಟೆ. ಸಾಮಾನ್ಯ ಆಹಾರ ಸೇವನೆ ಮಾಡಿದೆ’ ಎಂದು ಪರೇಶ್ ಹೇಳಿದ್ದಾರೆ.

ಇದನ್ನೂ ಓದಿ
ಅಪ್ಪಾಜಿಯೇ ದಾರಿ ಹಾಕಿಕೊಟ್ಟರು, ಎಲ್ಲರೂ ಪಾಲಿಸುತ್ತಿದ್ದಾರೆ: ಶಿವಣ್ಣ
ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ
20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ
ಡ್ರಗ್ಸ್ ಪ್ರಕರಣ ಇಬ್ಬರು ಮಲಯಾಳಂ ನಿರ್ದೇಶಕರ ಬಂಧನ

ಇದನ್ನೂ ಓದಿ: ಖ್ಯಾತ ಹಾಸ್ಯ ನಟ ಪರೇಶ್​ ರಾವಲ್​ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?

‘ನಾನು ನನ್ನದೇ ಮೂತ್ರವನ್ನು ಬಿಯರ್ ರೀತಿ ಸಿಪ್ ಮಾಡುತ್ತಿದ್ದೆ. ನಾನು ಅದನ್ನು ಸರಿಯಾಗಿ ಪಾಲಿಸುತ್ತಿದ್ದೆ. ನಾನು ಇದನ್ನು 15 ದಿನಗಳ ಕಾಲ ಮಾಡಿದೆ. ನನ್ನ ಎಕ್ಸ್​ರೇ ರಿಪೋರ್ಟ್ ಬಂತು. ವೈದ್ಯರೇ ಅಚ್ಚರಿ ಆದರು. ಕಾಲಿನ ಸಮಸ್ಯೆ ಪರಿಹಾರ ಆಗಿದೆ ಎಂದರು. ಸಾಮಾನ್ಯವಾಗಿ ಈ ರೀತಿ ಕಾಲಿನ ತೊಂದರೆ ಆದಾಗ ಸರಿಯಾಗಲು ಎರಡೂವರೆ ತಿಂಗಳು ಬೇಕಾಗುತ್ತದೆ. ಆದರೆ, ನನಗೆ ಕೇವಲ 15 ದಿನದಲ್ಲಿ ಪರಿಹಾರ ಆಯಿತು ಎಂದು ಅವರು ವಿವರಿಸಿದ್ದಾರೆ.  ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

(ವಿಶೇಷ ಸೂಚನೆ: ಇದು ಕೇವಲ ನಟನ ಅನುಭವ ಮತ್ತು ಅವರ ಅಭಿಪ್ರಾಯ ಅಷ್ಟೇ. ಇದು ಟಿವಿ9 ಕನ್ನಡ ನೀಡುತ್ತಿರುವ ಸಲಹೆ ಅಲ್ಲ. ಹೀಗಾಗಿ, ಇದನ್ನು ಮನೆಯಲ್ಲಿ ಪ್ರಯೋಗಿಸುವ ಮುನ್ನ ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಒಳಿತು.)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.