
ಅದಾ ಶರ್ಮಾ (Adah Sharma) ಅವರು ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ‘ರಣ ವಿಕ್ರಮ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಮೆಚ್ಚುಗೆ ಪಡೆಯಿತು. ಇದರಲ್ಲಿ ಪೊಲೀಸ್ ಆಗಬೇಕು ಎಂದು ಕನಸು ಕಾಣುವ ವ್ಯಕ್ತಿಯ ಬಗ್ಗೆ ಕಥೆ ಇತ್ತು. ಈ ಸಿನಿಮಾ ಮೂಲಕ ಅದಾ ಅವರು ಕನ್ನಡಕ್ಕೆ ಪರಿಚಯ ಆದರು. ಅಂದಹಾಗೆ ಅದಾ ಅವರ ನಿಜವಾದ ಹೆಸರು ಅದಾ ಅಲ್ಲವೇ ಅಲ್ಲ. ಅವರ ನಿಜವಾದ ಹೆಸರು ತುಂಬಾನೇ ಟ್ರೆಡಿಷನಲ್ ಆಗಿತ್ತು. ಆ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರು.
‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ಅದಾ ಮತ್ತಷ್ಟು ಜನಪ್ರಿಯತೆ ಪಡೆದರು. ಹಿಂದೂ ಸಂಪ್ರದಾಯದ ಕುಟುಂಬದಿಂದ ಬಂದ ಹೆಣ್ಣು ಮಗು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್ ಸೇರುವ ಕಥೆಯನ್ನು ಈ ಚಿತ್ರ ಹೊಂದಿತ್ತು. ಈ ಚಿತ್ರ ವಿವಾದ ಕೂಡ ಸೃಷ್ಟಿಸಿತ್ತು. ಈ ಚಿತ್ರದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. ಈಗ ಅವರ ನಿಜವಾದ ಹೆಸರ ಬಗ್ಗೆ ಈಗ ಮತ್ತೊಮ್ಮೆ ಚರ್ಚೆ ಆಗಿದೆ.
‘ನನ್ನ ನಿಜವಾದ ಹೆಸರು ಚಾಮುಂಡೇಶ್ವರಿ ಐಯರ್’ ಎಂದು ಅದಾ ಹೇಳಿದ್ದಾರೆ. ಈ ರೀತಿಯ ಹೆಸರು ಇಟ್ಟುಕೊಂಡು ಚಿತ್ರರಂಗಕ್ಕೆ ಸೆಟ್ ಆಗೋದಿಲ್ಲ. ಅನೇಕರು ಈ ಹೆಸರನ್ನು ಸರಿಯಾಗ ಉಚ್ಚರಿಸಲು ಸಾಧ್ಯವಾಗದೇ ಇರಬಹುದು. ಈ ಕಾರಣಕ್ಕೆ ಅದಾ ಎಂದು ಹೆಸರು ಬದಲಿಸಿಕೊಂಡರು. ಇದು ಸಖತ್ ಟ್ರೆಂಡಿ ಆಗಿದೆ.
ಅದಾ ಶರ್ಮಾ ಅವರಿಗೆ ಹೆಸರು ತಂದುಕೊಟ್ಟಿದ್ದು 2008ರ ‘1920’ ಸಿನಿಮಾ. ರಾಜ್ನೀಶ್ ದುಗ್ಗಲ್ ಈ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಕಮಾಂಡೋ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. ಅವರು ‘ಹಸೀ ತೋ ಪಸೀ’ ಮೊದಲಾದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ಹೊಳೆಯುವ ತ್ವಚೆ ಬೇಕೆ? ನಟಿ ಅದಾ ಶರ್ಮಾ ಸಲಹೆ ಫಾಲೋ ಮಾಡಿ
ಅದಾ ಶರ್ಮಾ ಅವರು ಸುದ್ದಿ ಆಗೋದಕ್ಕೆ ಮತ್ತೊಂದು ಕಾರಣ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡರು. ಅದೇ ಫ್ಲಾಟ್ನಲ್ಲಿ ಅದಾ ಶರ್ಮಾ ವಾಸಿಸುತ್ತಿದ್ದಾರೆ. ಈ ವಿಚಾರಕ್ಕೆ ಅವರು ಸಾಕಷ್ಟು ಸುದ್ದಿ ಆಗಿದ್ದರು. ತುಂಬಾನೇ ಇಷ್ಟಪಟ್ಟು ಅವರು ಫ್ಲಾಟ್ನಲ್ಲಿ ವಾಸವಾಗಿದ್ದಾರೆ. ಈ ಫ್ಲಾಟ್ನ ಯಾರೂ ಬಾಡಿಗೆ ಪಡೆಯಲು ಮುಂದೆ ಬಂದಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.