ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ವಿಶ್ ಮಾಡಲೇ ಇಲ್ಲ ಅಭಿಷೇಕ್, ಅಮಿತಾಭ್ ಬಚ್ಚನ್

ನಟಿ ಐಶ್ವರ್ಯಾ ರೈ ಬಚ್ಚನ್​ ಅವರು ಇಂದು (ನವೆಂಬರ್​ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅನೇಕರು ಅವರಿಗೆ ವಿಶ್ ಮಾಡಿದ್ದಾರೆ. ಆದರೆ ಪತಿ ಅಭಿಷೇಕ್ ಬಚ್ಚನ್ ಅವರು ಶುಭಾಶಯ ತಿಳಿಸಿಲ್ಲ. ಇದರಿಂದಾಗಿ ದಂಪತಿಯ ನಡುವೆ ಬಿರುಕು ಮೂಡಿದೆ ಎಂಬ ಅನುಮಾನ ಇನ್ನಷ್ಟು ಬಲವಾಗಿದೆ. ಡಿವೋರ್ಸ್​ ಬಗ್ಗೆ ಸಾಕಷ್ಟು ದಿನಗಳಿಂದ ಗಾಸಿಪ್ ಕೇಳಿಬರುತ್ತಿದೆ.

ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ವಿಶ್ ಮಾಡಲೇ ಇಲ್ಲ ಅಭಿಷೇಕ್, ಅಮಿತಾಭ್ ಬಚ್ಚನ್
ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್

Updated on: Nov 01, 2024 | 9:11 PM

ಇಷ್ಟು ವರ್ಷಗಳ ಕಾಲ ಖುಷಿಯಾಗಿ ಸಂಸಾರ ಮಾಡಿಕೊಂಡು ಬಂದಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್​ ನಡುವೆ ಈಗ ಬಿರುಕು ಮೂಡಿದೆ ಎಂಬ ಮಾತು ಕೇಳಿಬರುತ್ತಿದೆ. ಇಬ್ಬರೂ ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಅದಕ್ಕೆ ಸಾಕ್ಷಿ ನೀಡುವಂತಹ ಕೆಲವು ಘಟನೆಗಳು ಕೂಡ ನಡೆಯುತ್ತಿವೆ. ಇಂದು (ನವೆಂಬರ್​ 1) ಐಶ್ವರ್ಯಾ ರೈ ಬಚ್ಚನ್ ಅವರ ಜನ್ಮದಿನ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಶಾಕಿಂಗ್ ಏನೆಂದರೆ, ಪತಿ ಅಭಿಷೇಕ್​ ಬಚ್ಚನ್​ ಹಾಗೂ ಮಾವ ಅಮಿತಾಭ್ ಬಚ್ಚನ್​ ಅವರು ಐಶ್ವರ್ಯಾಗೆ ವಿಶ್ ಮಾಡಿಲ್ಲ. ಇದರಿಂದ ಅಭಿಮಾನಿಗಳ ಮನದಲ್ಲಿ ಇರುವ ಅನುಮಾನ ಜಾಸ್ತಿ ಆಗಿದೆ.

ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರು ಹೆಚ್ಚಾಗಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಅನಂತ್ ಅಂಬಾನಿ ಮದುವೆಗೆ ಐಶ್ವರ್ಯಾ ರೈ ಅವರು ಒಂಟಿಯಾಗಿ ಬಂದಿದ್ದರು. ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಿಗೆ ದಂಪತಿ ಜೊತೆಯಾಗಿ ಬರುತ್ತಾರೆ. ಆದರೆ ಐಶ್ವರ್ಯಾ ಸಿಂಗಲ್ ಆಗಿ ಬಂದಿದ್ದರಿಂದ ಅವರ ಸಂಸಾರದಲ್ಲಿ ಏನೋ ಕಿರಿಕ್ ಆಗಿದೆ ಎಂಬುದನ್ನು ಸೂಚಿಸಿತ್ತು.

ಕೆಲವು ತಿಂಗಳ ಹಿಂದೆ ಅಭಿಷೇಕ್ ಬಚ್ಚನ್ ಅವರು ಪತ್ನಿಯನ್ನು ಬಿಟ್ಟು ಒಂಟಿಯಾಗಿ ವಿದೇಶ ಪ್ರವಾಸ ಮಾಡಿದ್ದರು. ಇದರಿಂದ ಕೂಡ ಡಿವೋರ್ಸ್​ ಸಂಬಂಧಿತ ಗಾಸಿಪ್​ಗೆ ಬಲ ಬಂದಿತ್ತು. ಈಗ ಪತ್ನಿಯ ಹುಟ್ಟುಹಬ್ಬಕ್ಕೆ ಅಭಿಷೇಕ್ ಬಚ್ಚನ್​ ಅವರು ಯಾವುದೇ ರೀತಿಯ ವಿಶ್ ಮಾಡಿಲ್ಲ. ಸಂಜೆ ತನಕ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅಲ್ಲದೇ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ‘ಮದುವೆ ಹೆಚ್ಚು ದಿನ ಇರಲ್ಲ’: ಅಭಿಷೇಕ್ ಬಚ್ಚನ್​ಗೆ ನೇರವಾಗಿ ಹೇಳಿದ ನಿಮ್ರತ್ ಕೌರ್

ಅಂದಹಾಗೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮನಸ್ತಾಪದ ಬಗ್ಗೆ ಕಳೆದ ವರ್ಷವೇ ಅನುಮಾನ ಹುಟ್ಟಿಕೊಂಡಿತ್ತು. 2023ರ ನವೆಂಬರ್​ 1ರಂದು ಐಶ್ವರ್ಯಾ ರೈ ಅವರು ಹುಟ್ಟುಹಬ್ಬ ಆಚರಿಸಿಕೊಂಡಾಗ ಅಭಿಷೇಕ್ ಬಚ್ಚನ್ ಕೇವಲ ‘ಹ್ಯಾಪಿ ಬರ್ತ್​ಡೇ’ ಎಂದು ಪೋಸ್ಟ್ ಮಾಡಿದ್ದರು. ಆ ಪದಗಳಲ್ಲಿ ಯಾವುದೇ ಎಮೋಷನ್ ಇರಲಿಲ್ಲ. ಕೇವಲ ಕಾಟಾಚಾರಕ್ಕೆ ಅವರು ಆ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಡಿವೋರ್ಸ್​ ಪಡೆದುಕೊಳ್ಳಬಹುದು ಎಂಬ ಬಗ್ಗೆ ಇಷ್ಟೆಲ್ಲ ಗಾಸಿಪ್ ಹಬ್ಬಿದ್ದರೂ ಕೂಡ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್​ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us