ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ರಿಯಲ್ ಎಸ್ಟೇಟ್ ಬಿಸ್ನೆಸ್

Ajay Devgn Birthday: ಬಾಲಿವುಡ್ ನಟ ಅಜಯ್ ದೇವಗನ್ ಅವರ 427 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮುಂಬೈನ ದುಬಾರಿ ಮನೆ ಇದ್ದು, ಜೊತೆಗೆ ಐಷಾರಾಮಿ ಕಾರುಗಳು ಇವೆ. ಸಿನಿಮಾ ನಟನೆ, ನಿರ್ಮಾಣ, ರಿಯಲ್ ಎಸ್ಟೇಟ್, ಮತ್ತು ಇತರ ವ್ಯಾಪಾರಗಳಿಂದ ಅವರು ಹಣ ಮಾಡುತ್ತಾ ಇದ್ದಾರೆ.

ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ರಿಯಲ್ ಎಸ್ಟೇಟ್ ಬಿಸ್ನೆಸ್
ಅಜಯ್ ದೇವಗನ್
Updated By: ರಾಜೇಶ್ ದುಗ್ಗುಮನೆ

Updated on: Apr 02, 2025 | 7:48 AM

ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅವರಿಗೆ ಇಂದು (ಏಪ್ರಿಲ್ 2) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಬಾಲಿವುಡ್​ನ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರೋ ಇವರು ವಿಮಲ್ ಜಾಹೀರಾತಿನ ಮೂಲಕ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಜನ್ಮದಿನದ ಪ್ರಯುಕ್ತ ಅಜಯ್ ದೇವಗನ್ ಅವರ ಒಟ್ಟೂ ಆಸ್ತಿ ಎಷ್ಟು ಎಂಬುದನ್ನು ನೋಡೋಣ. ಅವರ ಕಾರ್ ಕಲೆಕ್ಷನ್ ಬಗ್ಗೆಯೂ ಇಂದು ತಿಳಿದುಕೊಳ್ಳೋಣ.

ಅಜಯ್ ದೇವಗನ್ ಅವರ ಒಟ್ಟೂ ಆಸ್ತಿ 427 ಕೋಟಿ ರೂಪಾಯಿ ಅಷ್ಟಿದೆ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಅವರಿಗೆ ಸಿನಿಮಾದಲ್ಲಿ ನಟನೆ, ಜಾಹೀರಾತು, ನಿರ್ಮಾಣ ಸಂಸ್ಥೆಯಿಂದ ಸಾಕಷ್ಟು ಹಣ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದು, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಮನೆ ಹೊಂದಿದ್ದಾರೆ. ಇವೆಲ್ಲವೂ ಅಜಯ್ ಅವರ ಆಸ್ತಿ ಹೆಚ್ಚಿಸಿದೆ.

ಅಜಯ್ ದೇವಗನ್ ಅವರು 2000ನೇ ಇಸ್ವಿಯಲ್ಲಿ ‘ದೇವಗನ್ ಫಿಲ್ಮ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಹಾಗೂ ಹಂಚಿಕೆ ಮಾಡಲಾಗುತ್ತದೆ. ಇದಲ್ಲದೆ ವಿಎಫ್​ಎಕ್ಸ್ ಕಂಪನಿಯನ್ನು ಕೂಡ ಹೊಂದಿದ್ದು, ಇದರಲ್ಲಿ ಸಿನಿಮಾ ಕೆಲಸಗಳು ನಡೆಯುತ್ತವೆ. ‘ಎನ್​ವೈ ಸಿನಿಮಾಸ್’ ಹೆಸರಿನ ಮಲ್ಟಿಪ್ಲೆಕ್ಸ್ ಚೈನ್​ ಕೂಡ ಅಜಯ್ ಆರಂಭಿಸಿದರು.

ಇದನ್ನೂ ಓದಿ
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್
‘ಲೇ ಕಳಸ್ರಯ್ಯ ಇವಳನ್ನ’; ಸುಕೃತಾ ಮೇಲೆ ರವಿಚಂದ್ರನ್ ಸಿಟ್ಟಾಗಿದ್ದೇಕೆ?
‘ನಿಂದು ಒಂದೇ ವರ್ಷಕ್ಕೆ ಡಿವೋರ್ಸ್ ಕಣೋ’; ವಿವಾಹದ ಬಳಿಕ ಅಜಯ್ ಕೇಳಿದ ಮಾತಿದು

ಅಜಯ್ ದೇವಗನ್ ಅವರು ಸಿನಿಮಾ ಮಾತ್ರವಲ್ಲ ರಿಯಲ್ ಎಸ್ಟೇಟ್​ ಕ್ಷೇತ್ರದಲ್ಲೂ ಇದ್ದಾರೆ. 2010ರಲ್ಲಿ ಅಜಯ್ ದೇವಗನ್ ಅವರು ರಿಯಲ್ ಎಸ್ಟೇಟ್ ಹಾಗೂ ಕನ್​ಸ್ಟ್ರಕ್ಷನ್ ಬ್ಯುಸಿನೆಸ್ ಆರಂಭಿಸಿದರು. ಅಜಯ್ ದೇವಗನ್ ಅವರು ಚ್ಯಾರಿಟಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಎನ್​ವೈ ಹೆಸರಿನ ಚ್ಯಾರಿಟಿಯನ್ನು ಅವರು ಆರಂಭಿಸಿದ್ದಾರೆ. ಗುಜರಾತ್​ನ ಸೋಲಾರ್ ಪ್ರಾಜೆಕ್ಟ್ ಮೇಲೆ ಅಜಯ್ ದೇವಗನ್ ಅವರು ಹಣ ಹೂಡಿದ್ದಾರೆ. ಅಜಯ್ ದೇವಗನ್ ಅವರು ವಿವಿಧ ಸಿನಿಮಾಗಳನ್ನು ನಿರ್ಮಾಣ ಮಾಡಿ ಹಣ ಮಾಡಿದ್ದಾರೆ.

ಇದನ್ನೂ ಓದಿ: ಗುಟ್ಕಾ ಪ್ರಚಾರ, ಶಾರುಖ್, ಟೈಗರ್ ಶ್ರಾಫ್, ಅಜಯ್ ದೇವಗನ್​ಗೆ ನೊಟೀಸು

ಅಜಯ್ ದೇವಗನ್ ಬಳಿ ಮೆಸರಾಟಿ, ಆಡಿ ಕ್ಯೂ 7, ಬಿಎಂಡಬ್ಲ್ಯೂ ಝಡ್ 4, ಮಿನಿ ಕಂಟ್ರಿಮ್ಯಾನ್, ರೋಲ್ಸ್ ರಾಯ್ಸ್ ರೀತಿಯ ಕಾರುಗಳು ಅವರ ಬಳಿ ಇವೆ. ಮುಂಬೈನ ಪ್ರತಿಷ್ಠಿತ ಜಾಗಗಳಲ್ಲಿ ಮನೆ ಹೊಂದಿದ್ದು ಇದರ ಬೆಲೆ ನೂರಾರು ಕೋಟಿ ರೂಪಾಯಿ. ಕೆಲ ವರ್ಷಗಳ ಹಿಂದೆ ಜುಹುನಲ್ಲಿ 60 ಕೋಟಿ ರೂಪಾಯಿಯ ಮನೆ ಖರೀದಿ ಮಾಡಿದ್ದಾರೆ. ಇದಕ್ಕೆ ಶಿವಶಕ್ತಿ ಎಂದು ಹೆಸರು ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.