ಸಂಜಯ್ ದತ್‌ಗೆ ಅಜಯ್ ದೇವಗನ್ ಅವರೇ ಫ್ಯಾಮಿಲಿ ಡಾಕ್ಟರ್; ಅವರು ಕೊಡುವ ಔಷಧವೇ ಬೇರೆ
ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದ ವದಂತಿಗಳ ಬಗ್ಗೆ ಕಪಿಲ್ ಶರ್ಮಾ ನಟರನ್ನು ಪ್ರಶ್ನಿಸುತ್ತಾರೆ. ಅಂತಹ ಒಂದು ಪ್ರಶ್ನೆಯನ್ನು ಸಂಜಯ್ ದತ್‌ಗೆ ಕಪಿಲ್ ಶರ್ಮಾ ಕೇಳಿದ್ದರು.
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರ ಮ್ಯಾನರಿಸಂ ಬೇರೆಯದೇ ರೀತಿಯಲ್ಲಿದೆ. ಅವರು ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ವೈಯಕ್ತಿಕ ಜೀವನವನ್ನು ಅವರು ಓಪನ್ ಬುಕ್ ರೀತಿಯಲ್ಲಿ ಇಟ್ಟಿದ್ದಾರೆ. ಅವರ ಜೀವನದಲ್ಲಿ ನಡೆದ ಬಹುತೇಕ ವಿಚಾರಗಳು, ಅದರಲ್ಲೂ ಕಾಂಟ್ರವರ್ಸಿ ವಿಚಾರಗಳನ್ನು ಅವರು ಮುಚ್ಚಿಟ್ಟಿಲ್ಲ. ಈ ಕಾರಣಕ್ಕೆ ಅವರು ವಿಶೇಷ ಎನಿಸಿಕೊಳ್ಳುತ್ತಾರೆ. ಸಂಜಯ್ ದತ್ ಅವರಿಗೆ 308 ಗರ್ಲ್ಫ್ರೆಂಡ್ಸ್ ಇದ್ದರು ಎಂಬ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅಜಯ್ ದೇವಗನ್ (Ajay Devgn) ನನಗೆ ಫ್ಯಾಮಿಲಿ ಡಾಕ್ಟರ್ ಎಂದು ಅವರು ಹೇಳಿಕೊಂಡಿದ್ದರು. ಅದು ಏಕೆ ಎಂಬುದಕ್ಕೆ ಅವರು ವಿವರಣೆ ನೀಡಿದ್ದರು.
‘ದಿ ಕಪಿಲ್ ಶರ್ಮಾ ಶೋ’ ಹಾಸ್ಯಕ್ಕೆ ಜನಪ್ರಿಯತೆ ಪಡೆದಿದೆ. ಈ ಕಾರ್ಯಕ್ರಮಕ್ಕೆ ಸಂಜಯ್ ದತ್ ಕೂಡ ಆಗಮಿಸಿದ್ದರು. ಸಂಜಯ್ ದತ್ ಅವರು ಸಮಯ ಸಿಕ್ಕಾಗಲೆಲ್ಲ ಜೋಕ್ ಮಾಡುತ್ತಾರೆ. ಕಪಿಲ್ ಶರ್ಮಾ ಬಗ್ಗೆಯಂತೂ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಇಬ್ಬರೂ ಸೇರಿ ಸಖತ್ ಫನ್ ಮಾಡಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಅಜಯ್ ದೇವಗನ್ ಫ್ಯಾಮಿಲಿ ಡಾಕ್ಟರ್ ಆಗಿದ್ದೇಕೆ ಎಂಬುದನ್ನು ಸಂಜಯ್ ದತ್ ಅವರು ವಿವರಿಸಿದ್ದರು.
ಇದನ್ನೂ ಓದಿ: Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್
ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದ ವದಂತಿಗಳ ಬಗ್ಗೆ ಕಪಿಲ್ ಶರ್ಮಾ ನಟರನ್ನು ಪ್ರಶ್ನಿಸುತ್ತಾರೆ. ಅಂತಹ ಒಂದು ಪ್ರಶ್ನೆಯನ್ನು ಸಂಜಯ್ ದತ್‌ಗೆ ಕಪಿಲ್ ಶರ್ಮಾ ಕೇಳಿದ್ದರು. ‘ಅಜಯ್ ದೇವಗನ್ ನಿಮಗೆ ಫ್ಯಾಮಿಲಿ ಡಾಕ್ಟರ್ ಅಂತೆ ಹೌದೇ?’ ಎಂದು ಕೇಳಿದರು. ಸಂಜಯ್ ದತ್ ಹೌದು ಎಂದರು. ಮತ್ತು ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದರು.
‘ಅವರಿಗೆ ಔಷಧಗಳ ಬಗ್ಗೆ ಸಾಕಷ್ಟು ಜ್ಞಾನವಿದೆ. ಅದರಲ್ಲೂ ಹೋಮಿಯೋಪತಿ ಔಷಧದ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಅವರು ನನ್ನ ಸಹೋದರ ಇದ್ದಂತೆ. ನಾನು ಅವರನ್ನು ಡಾಕ್ಟರ್ ಎಂದೇ ಕರೆಯುತ್ತೇನೆ. ನನಗೆ ಬೇಕಾದ ವಿಶೇಷ ಔಷಧವನ್ನು ಹೊಂದಿದ್ದಾರೆ. ರಾತ್ರಿಮೇಲೆ 60 ಅಥವಾ 90 ತೆಗೆದುಕೊಂಡರೆ ಎಲ್ಲವೂ ಸರಿಯಾಗುತ್ತದೆ’ ಎಂದಿದ್ದಾರೆ. ಅಷ್ಟು ಹೊತ್ತಿನವರೆಗೆ ಎಲ್ಲರೂ ಈ ವಿಚಾರವನ್ನು ಗಂಭೀರವಾಗಿ ಕೇಳುತ್ತಿದ್ದರು. ಯಾವಾಗ ಅವರು 60-90 ಎಂದು ಹೇಳಿದಿರೋ ಆಗ ಎಲ್ಲರಿಗೂ ಇದು ಆಲ್ಕೋಹಾಲ್ ವಿಚಾರ ಎಂಬುದು ಗೊತ್ತಾಗಿತ್ತು.
ಇದನ್ನೂ ಓದಿ: Sanjay Dutt Birthday: 308 ಹುಡುಗಿಯರ ಜೊತೆ ಸಂಜಯ್ ದತ್ ಡೇಟ್; ಬಾಲಿವುಡ್ನ ಈ ನಟಿಯರ ಜೊತೆಯೂ ಸುತ್ತಾಡಿದ್ದ ನಟ
ಸಂಜಯ್ ದತ್ ಅವರು ಸದ್ಯ ಹಲವು ಸಿನಿಮಾ ಒಪ್ಪಿ ನಟಿಸುತ್ತಿದ್ದಾರೆ. ತೆಲುಗಿನ ‘ಡಬಲ್ ಇಸ್ಮಾರ್ಟ್’ ಚಿತ್ರಕ್ಕೆ ಅವರು ವಿಲನ್. ಅವರ ಬರ್ತ್ಡೇ ಪ್ರಯಕ್ತ ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದು ಸಾಕಷ್ಟು ಗಮನ ಸೆಳೆದಿತ್ತು. ಬಿಗ್ ಬುಲ್ ಎಂದು ಪಾತ್ರಕ್ಕೆ ಹೆಸರು ಇಡಲಾಗಿದೆ. ಕನ್ನಡದ ‘ಕೆಡಿ’ ಚಿತ್ರಕ್ಕೂ ಅವರು ವಿಲನ್. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಪ್ರೇಮ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ, ಧ್ರುವ ಸರ್ಜಾ ಈ ಚಿತ್ರದ ಹೀರೋ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.