AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮದು ಧುರಂಧರ್ ರೀತಿ ವಯಸ್ಕರ ಸಿನಿಮಾ ಅಲ್ಲ’: ಅಕ್ಷಯ್ ಕುಮಾರ್ ಹೀಗೆ ಹೇಳಿದ್ದು ಯಾಕೆ?

ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ. ‘ಧುರಂಧರ್ 2’ ಸಿನಿಮಾದ ಅಬ್ಬರದ ನಡುವೆ ಈ ಸಿನಿಮಾ ಪೈಪೋಟಿ ನೀಡಲು ಸಜ್ಜಾಗಿದೆ. ಆ ಬಗ್ಗೆ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

‘ನಮ್ಮದು ಧುರಂಧರ್ ರೀತಿ ವಯಸ್ಕರ ಸಿನಿಮಾ ಅಲ್ಲ’: ಅಕ್ಷಯ್ ಕುಮಾರ್ ಹೀಗೆ ಹೇಳಿದ್ದು ಯಾಕೆ?
Akshay Kumar, Ranveer Singh
ಮದನ್​ ಕುಮಾರ್​
|

Updated on: Mar 25, 2026 | 4:51 PM

Share

ಬಾಲಿವುಡ್‌ನಲ್ಲಿ ಸದ್ಯ ಆ್ಯಕ್ಷನ್ ಸಿನಿಮಾಗಳದ್ದೇ ಹವಾ. ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮತ್ತು ಅದರ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿವೆ. ಇಂತಹ ಅಬ್ಬರದ ಆ್ಯಕ್ಷನ್ ಸಿನಿಮಾಗಳ ನಡುವೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲ’ (Bhooth Bangla) ಚಿತ್ರ ಯಾವ ರೀತಿ ವಿಭಿನ್ನವಾಗಿರಲಿದೆ ಎಂಬುದನ್ನು ಸ್ವತಃ ಅಕ್ಷಯ್ ವಿವರಿಸಿದ್ದಾರೆ. ‘ನಮ್ಮದು ಧುರಂಧರ್ ರೀತಿ ಅಡಲ್ಟ್ ಸಿನಿಮಾ ಅಲ್ಲ’ ಎಂದು ಅಕ್ಷಯ್ ಕುಮಾರ್ (Akshay Kumar) ಅವರು ಹೇಳಿದ್ದಾರೆ.

ಇತ್ತೀಚೆಗೆ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ‘ಧುರಂಧರ್ ಸಿನಿಮಾ ಅದ್ಭುತವಾಗಿದೆ, ನಾನು ಅದನ್ನು ನೋಡಿದ್ದೇನೆ. ಆದರೆ ನಮ್ಮ ಸಿನಿಮಾ ಭೂತ್ ಬಂಗ್ಲ ಸಂಪೂರ್ಣವಾಗಿ ವಿಭಿನ್ನವಾಗಿದೆ. ಧುರಂಧರ್ ವಯಸ್ಕರಿಗಾಗಿ ಮಾಡಿದ ಸಿನಿಮಾ. ಆದರೆ ಭೂತ್ ಬಂಗ್ಲ ಮಕ್ಕಳು ಮತ್ತು ಕುಟುಂಬದವರಿಗಾಗಿ ಮಾಡಲ್ಪಟ್ಟಿದೆ. ನಾವು ಸಿನಿಮಾ ಮಾಡುವಾಗ ಸದ್ಯದ ಟ್ರೆಂಡ್ ಏನಿದೆ ಎಂದು ಯೋಚಿಸಲಿಲ್ಲ. ಕಥೆ ಚೆನ್ನಾಗಿದೆಯೇ ಇಲ್ಲವೇ ಎಂಬುದನ್ನಷ್ಟೇ ಗಮನಿಸಿದ್ದೇವೆ’ ಎಂದಿದ್ದಾರೆ.

ಅನೇಕ ವರ್ಷಗಳ ನಂತರ ನಿರ್ದೇಶಕ ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ‘ಭೂತ್ ಬಂಗ್ಲ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಈ ಹಿಂದೆ ಹಲವು ಕ್ಲಾಸಿಕ್ ಕಾಮಿಡಿ ಸಿನಿಮಾಗಳನ್ನು ನೀಡಿದೆ. ಪ್ರಿಯದರ್ಶನ್ ಕೂಡ ಅಕ್ಷಯ್ ಮಾತುಗಳಿಗೆ ಧ್ವನಿಗೂಡಿಸಿದ್ದಾರೆ. ‘ಜನರು ಧುರಂಧರ್ ಅಥವಾ ಬಾರ್ಡರ್ 2 ನಂತಹ ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಆದರೆ ಆ ಗದ್ದಲದ ನಡುವೆ ಒಂದು ವಿರಾಮ ಬೇಕೆನಿಸಿದಾಗ ಭೂತ್ ಬಂಗ್ಲದಂತಹ ಕಾಮಿಡಿ ಸಿನಿಮಾ ಖುಷಿ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಿಯದರ್ಶನ್ ಅವರು ತಮ್ಮ ಸಿನಿಮಾಗಳಲ್ಲಿ ಎಂದಿಗೂ ಅಶ್ಲೀಲತೆ ಅಥವಾ ದ್ವಂದ್ವಾರ್ಥದ ಸಂಭಾಷಣೆಗಳನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ‘ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ನನ್ನ ಸಿನಿಮಾ ನೋಡಬಹುದು. ನಾನು ಎಂದಿಗೂ ಪೋಷಕರು ಮುಜುಗರ ಪಡುವಂತೆ ಸಿನಿಮಾ ಮಾಡುವುದಿಲ್ಲ. ಇದು ಶುದ್ಧ ಮನರಂಜನೆಯ ಚಿತ್ರ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್

‘ಭೂತ್ ಬಂಗ್ಲ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಟಬು ಮತ್ತು ವಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳೆಯ ಕಾಮಿಡಿ ಗ್ಯಾಂಗ್ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರವು ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆ್ಯಕ್ಷನ್ ಸಿನಿಮಾಗಳ ಅಬ್ಬರದ ನಡುವೆ ಈ ಹಾರರ್-ಕಾಮಿಡಿ ಸಿನಿಮಾ ಪ್ರೇಕ್ಷಕರನ್ನು ಎಷ್ಟು ನಗಿಸಲಿದೆ ಎಂದು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್