ಸ್ಟಾರ್ ಗಾಯಕನ ನೋಡಿ ಯಾರೆಂದು ಕೇಳಿದ್ದ ಆಲಿಯಾ ಭಟ್; ಅಚ್ಚರಿಯ ವಿಚಾರ ಹೇಳಿದ ರಣಬೀರ್

ಕಿಶೋರ್ ಕುಮಾರ್ ಯಾರು ಎಂಬುದು ಆಲಿಯಾ ಭಟ್​ಗೆ ಗೊತ್ತಿರಲಿಲ್ಲವಂತೆ. ಆಲಿಯಾ ಭಟ್ ಅವರನ್ನು ಈ ವಿಚಾರಕ್ಕೆ ಅನೇಕರು ಟ್ರೋಲ್ ಮಾಡಿದ್ದಾರೆ. ‘ಆಲಿಯಾಗೆ ರಾಷ್ಟ್ರಪತಿ ಯಾರೆಂಬ ವಿಚಾರ ಹಾಗಿರಲಿ, ಅವರಿಗೆ ಬಾಲಿವುಡ್​ನ ಖ್ಯಾತ ಹೀರೋನೆ ಗೊತ್ತಿಲ್ಲ’ ಎಂದು ಅನೇಕರು ಹೇಳಿದ್ದಾರೆ.

ಸ್ಟಾರ್ ಗಾಯಕನ ನೋಡಿ ಯಾರೆಂದು ಕೇಳಿದ್ದ ಆಲಿಯಾ ಭಟ್; ಅಚ್ಚರಿಯ ವಿಚಾರ ಹೇಳಿದ ರಣಬೀರ್
ಆಲಿಯಾ-ರಣಬೀರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 29, 2024 | 7:34 AM

ಆಲಿಯಾ ಭಟ್ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಸಾಮಾನ್ಯ ಜ್ಞಾನದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಆಗುತ್ತಾರೆ. ಈ ವಿಚಾರಗಳು ಆಲಿಯಾಗೆ ಹೆಚ್ಚು ತಿಳಿದಿಲ್ಲ. ಇದು ಅನೇಕ ಬಾರಿ ಸಾಬೀತು ಆಗಿದೆ. ಅವರಿಗೆ ಮತ್ತೊಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ. ಖ್ಯಾತ ಗಾಯಕ ಕಿಶೋರ್ ಕುಮಾರ್ ಯಾರು ಎಂಬುದು ಆಲಿಯಾ ಭಟ್​ಗೆ ಗೊತ್ತಿರಲಿಲ್ಲ. ಈ ವಿಚಾರದಲ್ಲಿ ಅವರು ಟ್ರೋಲ್ ಆಗುತ್ತಿದ್ದಾರೆ. ಆಲಿಯಾ ಭಟ್ ಟ್ರೋಲ್ ಆಗುವ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ.

‘ನಾನು ಮೊದಲ ಬಾರಿಗೆ ಆಲಿಯಾ ಭಟ್ ಅವರನ್ನು ಭೇಟಿ ಮಾಡಿದಾಗ ಕಿಶೋರ್ ಕುಮಾರ್ ಯಾರು ಎಂದು ಕೇಳಿದ್ದರು’ ಎಂದಿದ್ದಾರೆ ರಣಬೀರ್ ಕಪೂರ್. ಗೋವಾದಲ್ಲಿ ನಡೆಯುತ್ತಿರುವ 55ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ.

ಆಲಿಯಾ ಭಟ್ ಅವರನ್ನು ಈ ವಿಚಾರಕ್ಕೆ ಅನೇಕರು ಟ್ರೋಲ್ ಮಾಡಿದ್ದಾರೆ. ‘ಆಲಿಯಾಗೆ ರಾಷ್ಟ್ರಪತಿ ಯಾರೆಂಬ ವಿಚಾರ ಹಾಗಿರಲಿ, ಅವರಿಗೆ ಬಾಲಿವುಡ್​ನ ಖ್ಯಾತ ಹೀರೋನೆ ಗೊತ್ತಿಲ್ಲ’ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ‘ಆಲಿಯಾ ಭಟ್ ಅವರು ಈಗ ಎಲ್ಲವನ್ನೂ ಕಲಿಯುತ್ತಿದ್ದಾರೆ’ ಎಂದು ಹೇಳಿದ್ದಾರೆ. ‘ಕಿಶೋರ್ ಕುಮಾರ್ ನಿಧನ ಹೊಂದಿ ಹಲವು ವರ್ಷಗಳ ಬಳಿಕ ಆಲಿಯಾ ಜನಿಸಿದ್ದಾರೆ. ಹೀಗಾಗಿ ತಿಳಿದಿಲ್ಲದೆ ಇರಬಹುದು’ ಎಂದು ಕೆಲವರು ಹೇಳಿದ್ದಾರೆ. ಈ ಮೂಲಕ ಆಲಿಯಾ ಪರ ಬ್ಯಾಟ್ ಬೀಸಿದ್ದಾರೆ.

ಆಲಿಯಾ ಭಟ್ ಅವರು ರಹಾ ಅವಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ಜಿಗ್ರಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಚಿತ್ರದ ಮೂಲಕ ಆಲಿಯಾ ಭಟ್ ನಿರ್ಮಾಪಕಿ ಕೂಡ ಆಗಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್ ಈ ಗುಣಕ್ಕೆ ಎಲ್ಲರೂ ಫಿದಾ; ಎಲ್ಲಾ ಸೆಲೆಬ್ರಿಟಿಗಳಿಗೆ ಮಾದರಿ ಈ ನಟಿ

ಆಲಿಯಾ ಭಟ್ ಅವರು ಸದ್ಯ ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅತ್ತ ರಣಬೀರ್ ಕಪೂರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಯಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.