AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆದ ‘ಆಲ್ಫಾ’; 7 ಸಾವಿರ ಶೋಗಳಿದ್ದರೂ ಗಳಿಸಿದ್ದು ಒಂದಂಕಿ

ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಾಲಿವುಡ್‌ನ ಬಹುನಿರೀಕ್ಷಿತ 'ಆಲ್ಫಾ' ಸಿನಿಮಾ ಸೋಮವಾರ ಬಾಕ್ಸ್ ಆಫೀಸ್‌ನ ಲಿಟ್ಮಸ್ ಟೆಸ್ಟ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ವೀಕೆಂಡ್‌ನಲ್ಲಿ ಸಾಧಾರಣ ಗಳಿಕೆ ಕಂಡಿದ್ದ ಈ ಚಿತ್ರಕ್ಕೆ ಸೋಮವಾರ ದೇಶಾದ್ಯಂತ ಬರೋಬ್ಬರಿ 6,997 ಶೋಗಳಿದ್ದರೂ ಕೇವಲ ₹3.85 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ.

ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆದ 'ಆಲ್ಫಾ'; 7 ಸಾವಿರ ಶೋಗಳಿದ್ದರೂ ಗಳಿಸಿದ್ದು ಒಂದಂಕಿ
ಆಲ್ಫಾ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Jul 07, 2026 | 9:37 AM

Share

ಮುಖ್ಯಾಂಶಗಳು

  • ಸೋಮವಾರದ ಪರೀಕ್ಷೆಯಲ್ಲಿ ತತ್ತರಿಸಿದ 'ಆಲ್ಫಾ'
  • ಆಲಿಯಾ ಭಟ್ ಹಾಗೂ ಶಾರ್ವರಿ ಚಿತ್ರಕ್ಕೆ ಎದುರಾದ ಭಾರಿ ನಷ್ಟದ ಭೀತಿ
  • ಸುಮಾರು 7 ಸಾವಿರ ಶೋಗಳಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ

ಬಾಲಿವುಡ್​ನ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಆಲ್ಫಾ’ (Alpha Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ಸೋಮವಾರ ಭಾರಿ ಹಿನ್ನಡೆ ಅನುಭವಿಸಿದೆ. ಸ್ಟಾರ್ ನಟಿಯರಾದ ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ವೀಕೆಂಡ್‌ನಲ್ಲಿ ಸಾಧಾರಣ ಗಳಿಕೆ ಕಂಡಿತ್ತು. ಈಗ ಸೋಮವಾರದ ಲಿಟ್ಮಸ್ ಟೆಸ್ಟ್‌ನಲ್ಲಿ ಸಂಪೂರ್ಣವಾಗಿ ಫೇಲ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಈ ಚಿತ್ರದಿಂದ ಭಾರೀ ನಷ್ಟ ಅನುಭವಿಸುವ ಭೀತಿ ಎದುರಿಸಿದೆ.

7 ಸಾವಿರ ಶೋ ಇದ್ದರೂ ಗಳಿಕೆ ಕೇವಲ 3.85 ಕೋಟಿ ರೂಪಾಯಿ

ಬಿಡುಗಡೆಯಾದ 4ನೇ ದಿನವಾದ ಸೋಮವಾರ ಈ ಚಿತ್ರಕ್ಕೆ ದೇಶಾದ್ಯಂತ ಸುಮಾರು 6,997 ಶೋಗಳು ಸಿಕ್ಕಿದ್ದವು. ಇಷ್ಟೊಂದು ದೊಡ್ಡ ಮಟ್ಟದ ಸ್ಕ್ರೀನಿಂಗ್ ಲಭ್ಯವಿದ್ದರೂ ಸಿನಿಮಾ ಗಳಿಸಿದ್ದು ಮಾತ್ರ ಕೇವಲ 3.85 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸೋಮವಾರದ ಒಟ್ಟಾರೆ ಆಕ್ಯುಪೆನ್ಸಿ ಕೇವಲ 13ರಷ್ಟು ಮಾತ್ರ ದಾಖಲಾಗಿದೆ. ಅಂದರೆ 100 ಸೀಟ್ ಇರುವ ಥಿಯೇಟರ್​​ನಲ್ಲಿ ತುಂಬಿದ್ದು ಕೇವಲ 13 ಜನ ಮಾತ್ರ.

4 ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

ಮೊದಲ ದಿನವಾದ ಶುಕ್ರವಾರ ಸಿನಿಮಾ 9.25 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ 11.50 ಕೋಟಿ ರೂಪಾಯಿ, ಭಾನುವಾರ 13.25 ಕೋಟಿ ರೂಪಾಯಿ, ಸೋಮವಾರ 3.85 ಕೋಟಿ ರೂಪಾಯಿ ಗಳಿಸಿದೆ. ನಾಲ್ಕು ದಿನಗಳ ಪ್ರದರ್ಶನದ ನಂತರ ‘ಆಲ್ಫಾ’ ಸಿನಿಮಾ ಭಾರತದಲ್ಲಿ ಒಟ್ಟು 37.85 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರ ಭಾರತದ ಒಟ್ಟು ಗ್ರಾಸ್ ಗಳಿಕೆ 45.34 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು?

ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಗಳಿಕೆ ಮಂದಗತಿಯಲ್ಲೇ ಸಾಗಿದ್ದು, 4ನೇ ದಿನ 1.50 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಸದ್ಯಕ್ಕೆ ಚಿತ್ರದ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 18.30 ಕೋಟಿ ರೂಪಾಯಿ ತಲುಪಿದೆ. ಜಾಗತಿಕವಾಗಿ (Worldwide) ಎಲ್ಲೂ ನಿರೀಕ್ಷಿತ ಮಟ್ಟದ ಹವಾ ಸೃಷ್ಟಿಸದ ಈ ಚಿತ್ರ, ನಾಲ್ಕು ದಿನಗಳಲ್ಲಿ ಒಟ್ಟಾರೆಯಾಗಿ 63.64 ಕೋಟಿ ಗ್ರಾಸ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಕಣ್ಣೀರು ಹಾಕಿದ ಜಗದೀಶ್
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಮಗುವಿಗೆ ಜನ್ಮ ನೀಡಿದೆ ಎಂದ 70ರ ಅಜ್ಜಿ: ಬಯಲಾಯಿತು ಸತ್ಯ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ