AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು?

Alpha Movie Box Office Collection: ಯಶ್ ರಾಜ್ ಫಿಲ್ಮ್ಸ್‌ನ 'ಆಲ್ಫಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಭಾನುವಾರದ ರಜೆಯಲ್ಲೂ ಕೇವಲ 29.0% ಆಕ್ಯುಪೆನ್ಸಿ ದಾಖಲಿಸಿ, ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ದುರ್ಬಲ ಕಥೆ ಮತ್ತು ನಿರಾಸೆ ಮೂಡಿಸಿದ ಚಿತ್ರಕಥೆಯೇ ಇದಕ್ಕೆ ಮುಖ್ಯ ಕಾರಣ. ಹಿಂದಿನ YRF ಸ್ಪೈ ಯೂನಿವರ್ಸ್ ಚಿತ್ರಗಳಿಗೆ ಹೋಲಿಸಿದರೆ, 'ಆಲ್ಫಾ' ಆರಂಭದಲ್ಲೇ ಎಡವಿದ್ದು, ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆ.

ಭಾನುವಾರವೂ ಚೇತರಿಸಿಕೊಳ್ಳದ ‘ಆಲ್ಫಾ’; 3 ದಿನಗಳ ಗಳಿಕೆ ಎಷ್ಟು?
ಆಲಿಯಾ-ಶರ್ವರಿ
ರಾಜೇಶ್ ದುಗ್ಗುಮನೆ
|

Updated on:Jul 06, 2026 | 7:00 AM

Share

ಮುಖ್ಯಾಂಶಗಳು

  • ಮೊದಲ ವಾರಾಂತ್ಯದಲ್ಲೇ ನಿರಾಸೆ ಮೂಡಿಸಿದ ಆಲಿಯಾ ಭಟ್ ಚಿತ್ರದ ಕಲೆಕ್ಷನ್
  • ದುರ್ಬಲ ಚಿತ್ರಕಥೆಗೆ ಪ್ರೇಕ್ಷಕರಿಂದ ಸಿಕ್ಕ ತಣ್ಣಗಿನ ಪ್ರತಿಕ್ರಿಯೆ
  • ವಾರದ ದಿನಗಳಲ್ಲಿ ಆಲ್ಫಾ ಸಿನಿಮಾದ ಕಲೆಕ್ಷನ್ ಭವಿಷ್ಯವೇನು?

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಆಲ್ಫಾ’ (Alpha) ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತು ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಭಾನುವಾರದ ರಜಾದಿನದಂದೂ ದೊಡ್ಡ ಮಟ್ಟದ ಚೇತರಿಕೆ ಕಾಣದೆ ಪ್ರೇಕ್ಷಕರಿಂದ ತಣ್ಣಗಿನ ಪ್ರತಿಕ್ರಿಯೆ ಪಡೆದಿದೆ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆ.

ಭಾನುವಾರವೂ ಕೇವಲ 29.0% ಆಕ್ಯುಪೆನ್ಸಿ

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳಿಗೆ ಮೊದಲ ಭಾನುವಾರ ಅತ್ಯಂತ ನಿರ್ಣಾಯಕ. ಆದರೆ, ದೇಶಾದ್ಯಂತ ಬರೋಬ್ಬರಿ 7,439 ಶೋಗಳು ಪ್ರದರ್ಶನ ಕಂಡಿದ್ದರೂ, ಚಿತ್ರದ ಆಕ್ಯುಪೆನ್ಸಿ ಕೇವಲ 29.0% ದಾಟಲು ಸಾಧ್ಯವಾಗಿಲ್ಲ. ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಖಾಲಿ ಉಳಿದಿದ್ದು, ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಿತ್ರವು 3ನೇ ದಿನ (ಭಾನುವಾರ) ಭಾರತದಲ್ಲಿ ಕೇವಲ 13.25 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. 13 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ನೋಡಿದರೆ ಈ ಗಳಿಕೆ ತುಂಬಾನೇ ಅಲ್ಪ.

3 ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ

3ನೇ ದಿನವಾದ ಭಾನುವಾರ ಈ ಸಿನಿಮಾ 13.25 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರದ ಒಟ್ಟೂ ಗಳಿಕೆ 34.00 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಗಳಿಕೆ 40.80 ಕೋಟಿ ರೂಪಾಯಿ ದಾಟಿದೆ. ವಿದೇಶದಿಂದ ಚಿತ್ರಕ್ಕೆ 3 ದಿನದಲ್ಲಿ 18.00 ಕೋಟಿ ರೂಪಾಯಿ ಹರಿದು ಬಂದಿದ್ದು, ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 58.80 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ವಾರ್ 2’ ಸೋಲಿನ ಬಳಿಕ ಜೂ. ಎನ್​ಟಿಆರ್​ ಮುಂದಿನ ಚಿತ್ರಕ್ಕೆ ಬ್ರೇಕ್ ಹಾಕಿದ ಯಶ್ ರಾಜ್ ಫಿಲ್ಮ್ಸ್?

ವೀಕೆಂಡ್‌ನಲ್ಲೂ ಕಷ್ಟಪಟ್ಟ ‘ಆಲ್ಫಾ’

ಸ್ಪೈ ಯೂನಿವರ್ಸ್‌ನ ಹಿಂದಿನ ಚಿತ್ರಗಳಾದ ‘ಪಠಾಣ್’, ‘ಟೈಗರ್ 3’ ಅಥವಾ ‘ವಾರ್’ ಸಿನಿಮಾಗಳಿಗೆ ಹೋಲಿಸಿದರೆ ‘ಆಲ್ಫಾ’ ಆರಂಭದಲ್ಲೇ ಎಡವಿದೆ. ಆಲಿಯಾ ಭಟ್ ಮತ್ತು ಶಾರ್ವರಿ ಅವರ ಆಕ್ಷನ್ ಸೀಕ್ವೆನ್ಸ್‌ಗಳು ಗಮನ ಸೆಳೆದಿದ್ದರೂ, ದುರ್ಬಲ ಕಥೆ ಮತ್ತು ನಿರಾಸೆ ಮೂಡಿಸಿದ ಚಿತ್ರಕಥೆಯಿಂದಾಗಿ ಪ್ರೇಕ್ಷಕರಿಂದ ನೆಗೆಟಿವ್ ಟಾಕ್ ಕೇಳಿ ಬಂದಿದೆ. ಭಾನುವಾರವೇ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಹೆಚ್ಚಾಗದ ಕಾರಣ, ಇಂದಿನಿಂದ (ಸೋಮವಾರ) ವಾರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Mon, 6 July 26

Follow Us
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ