ಮೂರು ವರ್ಷಗಳ ಬಳಿಕ ಬ್ರೇಕಪ್ ಮಾಡಿಕೊಂಡ ಅನನ್ಯಾ ಪಾಂಡೆ-ಇಶಾನ್ ಖಟ್ಟರ್
ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದು ಮೂರು ವರ್ಷಗಳೇ ಕಳೆದಿದ್ದವು. ಈ ಬಾರಿ ಹೊಸ ವರ್ಷವನ್ನು ಇಬ್ಬರೂ ಒಟ್ಟಾಗಿ ಸ್ವಾಗತಿಸಿದ್ದರು. ಆದರೆ, ರಿಲೇಶನ್ಶಿಪ್ ಬಗ್ಗೆ ಇಬ್ಬರೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ನಟಿ ಅನನ್ಯಾ ಪಾಂಡೆ (Ananya Panday) ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಗೆಹರಾಯಿಯಾ’ ಸಿನಿಮಾ ತೆರೆಗೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಪ್ರೀತಿ ವಿಚಾರದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಆದರೆ, ಈಗ ಅನನ್ಯಾ ಪಾಂಡೆ ಬ್ರೇಕಪ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅನನ್ಯಾ ಹಾಗೂ ನಟ ಇಶಾನ್ ಖಟ್ಟರ್ ನಡುವೆ ಇದ್ದ ಮೂರು ವರ್ಷಗಳ ಪ್ರೀತಿ ಬ್ರೇಕಪ್ನಲ್ಲಿ ಅಂತ್ಯವಾಗಿದೆ ಎಂದು ವರದಿ ಆಗಿದೆ. 2020ರಲ್ಲಿ ತೆರೆಕಂಡ ‘ಖಾಲಿ ಪೀಲಿ’ ಸಿನಿಮಾದಲ್ಲಿ ಇಶಾನ್ ಖಟ್ಟರ್ (Ishaan Khatter) ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ನಟಿಸಿದರು. ಆ ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದು ಮೂರು ವರ್ಷಗಳೇ ಕಳೆದಿದ್ದವು. ಈ ಬಾರಿ ಹೊಸ ವರ್ಷವನ್ನು ಇಬ್ಬರೂ ಒಟ್ಟಾಗಿ ಸ್ವಾಗತಿಸಿದ್ದರು. ಆದರೆ, ರಿಲೇಶನ್ಶಿಪ್ ಬಗ್ಗೆ ಇಬ್ಬರೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಇವರ ಸಂಬಂಧ ಬ್ರೇಕಪ್ನಲ್ಲಿ ಅಂತ್ಯವಾಗಿದೆ.
‘ಅನನ್ಯಾ ಪಾಂಡೆ ಹಾಗೂ ಇಶಾನ್ ಮೂರು ವರ್ಷ ಒಟ್ಟಾಗಿ ಇದ್ದರು. ಈಗ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಮ್ಯೂಚುವಲ್ ನಿರ್ಧಾರ. ಮುಂದೆ ಇಬ್ಬರೂ ಒಟ್ಟಾಗಿ ನಟಿಸಲು ರೆಡಿ ಇದ್ದಾರೆ’ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ.
ಇತ್ತೀಚೆಗೆ ಐಪಿಎಲ್ನಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದರು. ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಜತೆ ಅನನ್ಯಾ ತುಂಬಾನೇ ಕ್ಲೋಸ್ ಆಗಿದ್ದಾರೆ. ಈ ಕಾರಣಕ್ಕೆ ಶಾರುಖ್ ಒಡೆತನದ ಕೋಲ್ಕತ್ತಾ ತಂಡವನ್ನು ಬೆಂಬಲಿಸಲು ಆರ್ಯನ್ ಹಾಗೂ ಸುಹಾನಾ ತೆರಳಿದ್ದರು. ಈ ವೇಳೆ ಅನನ್ಯಾ ಕೂಡ ಅಲ್ಲಿ ಹಾಜರಿ ಹಾಕಿದ್ದರು.
ಇಶಾನ್ ನನ್ನ ಫೇವರಿಟ್ ಎಂದಿದ್ದ ಅನನ್ಯಾ:
ಅನನ್ಯಾ ಸಿಂಗಲ್ ಆಗಿದ್ದಾರಾ ಅಥವಾ ರಿಲೇಷನ್ಶಿಪ್ನಲ್ಲಿ ಇದ್ದಾರಾ ಎಂಬುದು ಅಭಿಮಾನಿಯ ಪ್ರಶ್ನೆ ಆಗಿತ್ತು. ಅದಕ್ಕೆ ನೇರವಾಗಿ ಉತ್ತರ ನೀಡುವ ಬದಲು ಅನನ್ಯಾ ಪಾಂಡೆ ಹಾರಿಕೆ ಉತ್ತರ ನೀಡಿದ್ದರು. ‘ನಾನು ಖುಷಿಯಾಗಿದ್ದೇನೆ’ ಎಂದು ಹೇಳುವ ಮೂಲಕ ಅವರು ಜಾರಿಕೊಂಡಿದ್ದರು. ಹಾಗಾದರೆ ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಲಾಗಿತ್ತು. ಅದಕ್ಕೆ ಅವರು ಇಶಾನ್ ಖಟ್ಟರ್ ಹೆಸರು ಹೇಳಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ಕೊಂಚ ಬದಲಾಯಿಸಿಕೊಂಡಿದ್ದರು. ‘ನನ್ನ ಜೊತೆ ಅಭಿನಯಿಸಿದ ಎಲ್ಲ ನಟರು ನನಗೆ ಇಷ್ಟ. ‘ಗೆಹರಾಯಿಯಾ’ ಬಳಿಕ ‘ಕೋ ಗಯೇ ಹಮ್ ಕಹಾ’ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ನಾನು ಮತ್ತೊಮ್ಮೆ ಕೆಲಸ ಮಾಡಲಿದ್ದೇನೆ’ ಎಂದು ಅನನ್ಯಾ ಪಾಂಡೆ ಹೇಳಿದ್ದರು.
ಇದನ್ನೂ ಓದಿ: ಹಾಟ್ ಅವತಾರದಲ್ಲಿ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ಹಾಟ್ ಡ್ರೆಸ್ ಬಗ್ಗೆ ಟ್ರೋಲ್ ದಾಳಿ; ಮಗಳ ರಕ್ಷಣೆಗೆ ಬಂದ ತಂದೆ ಹೇಳಿದ್ದೇನು?