ಬಾಲಿವುಡ್​ ಹಿರಿಯ ನಟನ ಮಗ ಡ್ರಗ್​ ಕೇಸ್​ನಲ್ಲಿ ಅರೆಸ್ಟ್​; ವಾಟ್ಸ್​ಆ್ಯಪ್​ ಮೆಸೇಜ್​ ಬಿಚ್ಚಿಡ್ತು ನಿಜ ವಿಚಾರ

ಏಪ್ರಿಲ್​ 20ರಂದು ಮುಜಮ್ಮಿಲ್​ ಶೇಖ್​​ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕವು ಬಂಧಿಸಿತ್ತು. ಈತನಿಂದ 35 ಗ್ರಾಂ ಡ್ರಗ್​ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಮುಜಮ್ಮಿಲ್ ಮೊಬೈಲ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಬಾಲಿವುಡ್​ ಹಿರಿಯ ನಟನ ಮಗ ಡ್ರಗ್​ ಕೇಸ್​ನಲ್ಲಿ ಅರೆಸ್ಟ್​; ವಾಟ್ಸ್​ಆ್ಯಪ್​ ಮೆಸೇಜ್​ ಬಿಚ್ಚಿಡ್ತು ನಿಜ ವಿಚಾರ
ದಿಲೀಙ್​ ತಾಹಿಲ್​-ಧ್ರುವ್​ ತಾಹಿಲ್

ಮುಂಬೈ: ಬಾಲಿವುಡ್​ನಲ್ಲಿ ಡ್ರಗ್​ ಕೇಸ್​ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ. ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಅನೇಕರು ವಿಚಾರಣೆಗೆ ಒಳಪಟ್ಟಿದ್ದಾರೆ. ಇನ್ನೂ, ಕೆಲವರನ್ನು ಬಂಧಿಸಲಾಗಿದೆ.  ಈಗ  ಬಾಲಿವುಡ್​ ​ಹಿರಿಯ ನಟ ದಿಲೀಪ್​ ತಾಹಿಲ್​ ಮಗ ಧ್ರುವ್​ ತಾಹಿಲ್ ಅವರನ್ನು​ ಮಾದಕ ವಸ್ತು ನಿಯಂತ್ರಣ ಘಟಕವು ಡ್ರಗ್​ ಕೇಸ್​ನಲ್ಲಿ ಬಂಧಿಸಿದೆ.

ಏಪ್ರಿಲ್​ 20ರಂದು ಮುಜಮ್ಮಿಲ್​ ಶೇಖ್​​ ಅವರನ್ನು ಮಾದಕ ವಸ್ತು ನಿಯಂತ್ರಣ ಘಟಕವು ಬಂಧಿಸಿತ್ತು. ಈತನಿಂದ 35 ಗ್ರಾಂ ಡ್ರಗ್​ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಮುಜಮ್ಮಿಲ್ ಮೊಬೈಲ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವರ ವಾಟ್ಸ್​ಆ್ಯಪ್​ ಪರಿಶೀಲಿಸಿದಾಗ ಧ್ರುವ್​ ತಾಹಿಲ್ ಜತೆಗಿನ ಚ್ಯಾಟ್​ ಸಿಕ್ಕಿದೆ. ಧ್ರುವ್​ ಸಾಕಷ್ಟು ಬಾರಿ ಈತನ ಬಳಿ ಡ್ರಗ್ಸ್​ಗೆ ಬೇಡಿಕೆ ಇಟ್ಟಿದ್ದರು ಎನ್ನುವ ವಿಚಾರ ಬಯಲಾಗಿದೆ. ಹೀಗಾಗಿ ಧ್ರುವ್​ ಅವರನ್ನು ಬಂಧಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ, ಡ್ರಗ್ಸ್​ ಖರೀದಿ ಮಾಡಲು ಮುಜಮ್ಮಿಲ್​ ಖಾತೆಗೆ ಧ್ರುವ್​ ಸಾಕಷ್ಟು ಬಾರಿ ಹಣ ವರ್ಗಾವಣೆ ಮಾಡಿದ್ದಾರೆ. ಮಾರ್ಚ್​ 2019ರಿಂದ ಶೇಖ್​ ಜತೆಗೆ ಧ್ರುವ್​ ಸಂಪರ್ಕಕ್ಕೆ ಬಂದಿದ್ದರು. ನಂತರ ನಿರಂತರವಾಗಿ ಡ್ರಗ್​ ಪಡೆಯುತ್ತಿದ್ದರು ಎಂದು ಮಾದಕ ವಸ್ತು ನಿಯಂತ್ರಣ ಘಟಕ ಸ್ಪಷ್ಟಪಡಿಸಿದೆ. ಸದ್ಯ ಧ್ರುವ್​ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಇನ್ನೂ ಅನೇಕರ ಹೆಸರು ಇದರಲ್ಲಿ ಬರುವ ಸಾಧ್ಯತೆಇದೆ. ಧ್ರುವ್​ ಕೂಡ ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ನಟನಾ ಕ್ಷೇತ್ರಕ್ಕೆ ಕಾಲಿಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಡ್ರಗ್ಸ್​ ಜಾಲ ನಿರ್ಮೂಲನೆಯಾಗಿಲ್ಲ, ಇದು ಕಳಂಕವಲ್ಲದೇ ಇನ್ನೇನು?

ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್ಸ್ ಪೆಡ್ಲರ್​ಗಳ ಬಂಧನ