
ನಟ ಸಲ್ಮಾನ್ ಖಾನ್ (Salman Khan) ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುತ್ತಿಲ್ಲ. ಹಾಗಾಗಿ ಕೆಲವರು ಅವರನ್ನು ಟೀಕಿಸಿದ್ದುಂಟು. ಅಲ್ಲದೇ, ಸಲ್ಮಾನ್ ಖಾನ್ ಅವರಿಗೆ ವಯಸ್ಸಾಗಿದೆ ಎಂದು ಕೂಡ ಕೆಲವರು ಲೇವಡಿ ಮಾಡಿದ್ದರು. ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಾಗ ಅವರ ಲುಕ್ ನೋಡಿ ಜನರು ಈ ರೀತಿ ಟೀಕಿಸಿದ್ದರು. ಅಂಥವರಿಗೆ ಈಗ ಸಲ್ಲು ಖಡಕ್ ಉತ್ತರ ನೀಡಿದ್ದಾರೆ. ಕಟ್ಟುಮಸ್ತಾದ ಬಾಡಿಯ (Salman Khan Body) ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಸಲ್ಮಾನ್ ಖಾನ್ ಅವರು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಈಗ 59 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಕೂಡ ಅವರು ಕಟ್ಟುಮಸ್ತಾಗಿದ್ದಾರೆ. ಆ್ಯಕ್ಷನ್ ಸಿನಿಮಾಗಳ ಮೂಲಕ ಅಬ್ಬರಿಸುತ್ತಾರೆ. ಹಾಗಾಗಿದ್ದರೂ ಕೂಡ ಅವರನ್ನು ಕೆಲವರು ಲೇವಡಿ ಮಾಡುತ್ತಿದ್ದಾರೆ. ಆದರೆ ಈಗ ಸಲ್ಮಾನ್ ಖಾನ್ ಅವರು ಸ್ವಿಮಿಂಗ್ ಪೂಲ್ನಲ್ಲಿ ಶರ್ಟ್ಲೆಸ್ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳು ವೈರಲ್ ಆಗಿವೆ. ಈ ಮೊದಲು ಕೂಡ ಸಲ್ಮಾನ್ ಖಾನ್ ಅವರು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಅದನ್ನು ಕಂಡು ಕೂಡ ನೆಟ್ಟಿಗರು ಬೆರಗಾಗಿದ್ದರು. ಫಿಟ್ನೆಸ್ಗೆ ಸಲ್ಮಾನ್ ಖಾನ್ ಹೆಚ್ಚು ಆದ್ಯತೆ ನೀಡುತ್ತಾರೆ. ಎಷ್ಟೇ ತಾಪತ್ರಯಗಳು ಇದ್ದರೂ ಕೂಡ ಅವರು ವರ್ಕೌಟ್ ಮಾಡುವುದು ತಪ್ಪಿಸಲ್ಲ. ಅದರ ಪರಿಣಾಮವಾಗಿಯೇ ಅವರು ಕಟ್ಟುಮಸ್ತಾದ ಬಾಡಿ ಹೊಂದಿದ್ದಾರೆ.
ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಒಟ್ಟಿಗೆ ನಟಿಸಿದ್ದ ‘ಅಂದಾಜ್ ಅಪ್ನ ಅಪ್ನ’ ಸಿನಿಮಾ ಈಗ ಮರು ಬಿಡುಗಡೆ ಆಗಿದೆ. ಮೂರು ದಿನಕ್ಕೆ 1.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಳೇ ಸಿನಿಮಾಗೆ ಅಭಿಮಾನಿಗಳು ಪ್ರೀತಿ ತೋರಿಸಿದ್ದಾರೆ. ಆ ಸಿನಿಮಾಗೆ ರಾಜ್ಕುಮಾರ್ ಸಂತೋಷಿ ನಿರ್ದೇಶನವಿದೆ. ಕರೀಷ್ಮಾ ಕಪೂರ್, ಜೂಹಿ ಚಾವ್ಲಾ, ರವೀನಾ ಟಂಡನ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ‘ಕಾಶ್ಮೀರ ನರಕ ಆಗುತ್ತಿದೆ’: ಪಹಲ್ಗಾಮ್ ಉಗ್ರರ ದಾಳಿಗೆ ನಟ ಸಲ್ಮಾನ್ ಖಾನ್ ಖಂಡನೆ
ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಸಲ್ಮಾನ್ ಖಾನ್ ಅವರು ಲಂಡನ್ಗೆ ತೆರಳಿ ಮನರಂಜನಾ ಕಾರ್ಯಕ್ರಮ ನೀಡಬೇಕಿತ್ತು. ಮೇ 4 ಮತ್ತು 5ರಂದು ಅಲ್ಲಿ ಶೋ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಸಲ್ಮಾನ್ ಖಾನ್ ಅವರು ಲಂಡನ್ ಟೂರ್ ಮುಂದೂಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.