ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ಈಗ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ನಟ ಕಾರ್ತಿಕ್ ಆರ್ಯನ್ (Kartik Aaryan) ಜೊತೆ ಶ್ರೀಲೀಲಾ ಅವರು ಹೊಸ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ಅವರ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ (Sreeleela Viral Video) ನೋಡಿ ಶ್ರೀಲೀಲಾ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜನಜಂಗುಳಿ ಇರುವ ಪ್ರದೇಶದಲ್ಲಿ ನಡೆದುಕೊಂಡು ಬರುವಾಗ ಶ್ರೀಲೀಲಾ ಅವರನ್ನು ಕೆಲವರು ಬಲವಂತವಾಗಿ ಎಳೆದಾಡಿದ್ದಾರೆ! ಜನಪ್ರಿಯ ಸೆಲೆಬ್ರಿಟಿಗಳಿಗೇ ಈ ರೀತಿ ಆದರೆ ಸಾಮಾನ್ಯ ಮಹಿಳೆಯರ ಗತಿ ಏನು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಅವರು ಜೋಡಿಯಾಗಿ ನಟಿಸುತ್ತಿರುವ ಹೊಸ ಸಿನಿಮಾಗೆ ಇನ್ನೂ ಹೆಸರು ಇಟ್ಟಿಲ್ಲ. ಕೆಲವರು ಈ ಚಿತ್ರವನ್ನು ‘ಆಶಿಕಿ 3’ ಎನ್ನುತ್ತಿದ್ದಾರೆ. ಇನ್ನು ಕೆಲವರು ‘ತು ಮೇರಿ ಜಿಂದಗಿ ಹೈ’ ಎಂದು ಹೇಳುತ್ತಿದ್ದಾರೆ. ಅಧಿಕೃತ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡದವರು ಹೇಳಿಲ್ಲ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಈ ಚಿತ್ರದ ಬಗ್ಗೆ ಸುದ್ದಿ ಆಗುತ್ತಿದೆ.
ಜನರ ನಡುವೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ನಡೆದುಬರುತ್ತಿದ್ದರು. ಶ್ರೀಲೀಲಾಗಿಂತ ಒಂದೆರಡು ಹೆಜ್ಜೆ ಮುಂದೆ ಕಾರ್ತಿಕ್ ಆರ್ಯಕ್ ಇದ್ದರು. ಇಬ್ಬರೂ ಫೇಮಸ್ ಕಲಾವಿದರಾದ ಕಾರಣ ಅವರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಹಿಂದೆ ನಡೆದುಕೊಂಡ ಬರುತ್ತಿದ್ದ ಶ್ರೀಲೀಲಾ ಅವರ ಕೈಯನ್ನು ಹಿಡಿದು ಯಾರೋ ಎಳೆದಿದ್ದಾರೆ. ಅಲ್ಲದೇ, ತಮ್ಮ ಗುಂಪಿನ ಒಳಗೆ ನಟಿಯನ್ನು ಎಳೆದುಕೊಂಡಿದ್ದಾರೆ!
ತಮ್ಮ ಹಿಂದೆ ಈ ರೀತಿ ಆಗಿದೆ ಎಂಬುದು ಕಾರ್ತಿಕ್ ಆರ್ಯನ್ ಅವರಿಗೆ ಗೊತ್ತಾಗಲೇ ಇಲ್ಲ. ತಕ್ಷಣಕ್ಕೆ ಶ್ರೀಲೀಲಾ ಅವರ ಬಾಡಿಗಾರ್ಡ್ಗಳು ರಕ್ಷಣೆಗೆ ಮುಂದಾದರು. ಈ ಘಟನೆಯಿಂದ ಒಂದು ಕ್ಷಣ ಶ್ರೀಲೀಲಾ ವಿಚಲಿತರಾಗಿದ್ದು ನಿಜ. ಆದರೆ ಕೂಡಲೇ ಅವರು ನಗುನಗುತ್ತಾ ಮುಂದೆ ಸಾಗಿದರು. ಮುಂದೆ ಸಾಗುತ್ತಿದ್ದ ಕಾರ್ತಿಕ್ ಆರ್ಯನ್ ಅವರು ಹಿಂದೆ ತಿರುಗಿ ನೋಡುವಷ್ಟರಲ್ಲಿ ಇದೆಲ್ಲ ನಡೆದುಹೋಯಿತು.
ಇದನ್ನೂ ಓದಿ: ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್
ಈ ಘಟನೆ ಯಾವ ಲೊಕೇಷನ್ನಲ್ಲಿ ನಡೆದಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇನ್ನು, ಈ ಸಿನಿಮಾದ ಶೂಟಿಂಗ್ ವಿಡಿಯೋಗಳು ಕೂಡ ಕೆಲವೇ ದಿನಗಳ ಹಿಂದೆ ಲೀಕ್ ಆಗಿದ್ದವು. ಅದನ್ನು ನೋಡಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಈ ಚಿತ್ರಕ್ಕೆ ಅನುರಾಗ್ ಬಸು ಅವರು ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.