
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭಿಸಿ ಈಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಅವರನ್ನು ನೀಡಿದ್ದಾರೆ. ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇಷ್ಟೆಲ್ಲಾ ಇದ್ದರೂ ದೀಪಿಕಾ ಪಡುಕೋಣೆ ಸಣ್ಣ ಬುದ್ಧಿ ಬಿಟ್ಟಿಲ್ಲ. ಈ ವಿಚಾರವನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ರಿವೀಲ್ ಮಾಡಿದ್ದಾರೆ. ಪರೋಕ್ಷವಾಗಿ ಅವರು ಟೀಕಿಸಿದ್ದಾರೆ.
ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ಸಂದೀಪ್ ಅವರು ದೀಪಿಕಾಗೆ ಹೇಳಿದ್ದರು. ಅವರು ಕಥೆಯನ್ನು ಒಪ್ಪಿದ್ದರು. ಆದರೆ, ದೀಪಿಕಾ ಇಟ್ಟ ಡಿಮ್ಯಾಂಡ್ ಪೂರೈಸಲಾಗದ ಕಾರಣ ಅವರನ್ನು ಚಿತ್ರದಿಂದ ಕೈ ಬಿಡಲಾಯಿತು. ಇದಾದ ಬಳಿಕ ಈ ಸ್ಥಾನಕ್ಕೆ ತೃಪ್ತಿ ದಿಮ್ರಿ ಆಯ್ಕೆ ಆದರು. ಇಷ್ಟಕ್ಕೆ ಉರಿದುಕೊಂಡಿರೋ ದೀಪಿಕಾ ಅವರು ಸಣ್ಣ ಬುದ್ಧಿ ತೋರಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರು ಚಿತ್ರದ ಕಥೆಯನ್ನು ಲೀಕ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳು ಇದ್ದು, ಸಿನಿಮಾಗೆ ಎ ಪ್ರಮಾಣ ಪತ್ರ ಸಿಗುತ್ತದೆ ಎಂಬುದನ್ನು ದೀಪಿಕಾ ಆಪ್ತ ವಲಯದಲ್ಲಿ ರಿವೀಲ್ ಮಾಡಿದ್ದಾರೆ. ಚಿತ್ರದ ಕಥೆಯನ್ನು ಕೂಡ ಹೇಳಿದ್ದಾರೆ. ಆಪ್ತ ವಲಯದವರು ಇನ್ನಷ್ಟು ಮಂದಿಗೆ ಹೇಳಿದ್ದು, ಈಗ ಚಿತ್ರದ ಪ್ರಮುಖ ವಿಷಯಗಳೇ ಸೋರಿಕೆ ಆಗಿದೆ. ಇದರಿಂದ ಸಂದೀಪ್ ಸಿಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
‘ನಾನು ಓರ್ವ ಕಲಾವಿದನಿಗೆ ಕಥೆ ಹೇಳುವಾಗ ಸಂಪೂರ್ಣ ನಂಬಿಕೆ ಇಡುತ್ತೇನೆ. ಯಾರಿಗೂ ಕಥೆಯನ್ನು ಹೇಳಬಾರದು ಎಂಬ ಒಪ್ಪಂದ ಇರುತ್ತದೆ. ಆದರೆ ನೀವು ನಿಯಮ ಮುರಿಯುವ ಮೂಲಕ ನಿಮ್ಮ ತನವನ್ನು ನೀವು ಬಹಿರಂಗಪಡಿಸಿದಂತಾಗಿದೆ. ಕಿರಿಯ ಕಲಾವಿದರನ್ನು ಕೆಳಕ್ಕೆ ಹಾಕಿದ್ದಲ್ಲದೆ, ನನ್ನ ಕಥೆಯನ್ನು ರಿವೀಲ್ ಮಾಡಿದ್ದೀರಿ’ ಎಂದು ಸಂದೀಪ್ ಟ್ವೀಟ್ ಮಾಡಿದ್ದಾರೆ. ಇದು ದೀಪಿಕಾಗೆ ಹೇಳಿದ್ದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್
ಮುಂದುವರಿದು, ‘ಇದು ನಿಮ್ಮ ಸ್ತ್ರೀವಾದದ ಅರ್ಥವೇ? ಒಬ್ಬ ನಿರ್ದೇಶಕನಾಗಿ ನಾನು ಸಾಕಷ್ಟು ಶ್ರಮ ಹಾಕಿರುತ್ತೇನೆ. ನಿಮಗೆ ಇದು ಅರ್ಥ ಆಗಿಲ್ಲ, ಆಗುವುದೂ ಇಲ್ಲ. ಮುಂದಿನ ಬಾರಿ ಪೂರ್ತಿ ಕಥೆಯನ್ನೇ ಹೇಳಿ. ನನಗೆ ಏನೂ ಫರಕ್ ಆಗುವದಿಲ್ಲ’ ಎಂದು ಸಿಟ್ಟನ್ನು ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.