
ಪ್ರಶ್ನೆ ಮಾಡುವ, ತಮಗೆ ಬೇಕಾದುದ್ದನ್ನು ಡಿಮ್ಯಾಂಡ್ ಮಾಡುವ, ಪುರುಷರಿಗೆ ಸಮಾನವಾದ ಸಂಬಳ, ಅವಕಾಶಗಳನ್ನು ಕೇಳುವ ಮಹಿಳೆಯರನ್ನು ಅಹಂಕಾರಿ, ಪೊಗರಿನ ಹೆಣ್ಣು ಎಂದು ಜರಿಯಲಾಗುತ್ತದೆ. ಈಗ ‘ಸ್ಪಿರಿಟ್’ ಸಿನಿಮಾ ವಿಷಯವಾಗಿ ದೀಪಿಕಾ ಪಡುಕೋಣೆ (Deepika Padukone) ಸಹ ಇದನ್ನೇ ಎದುರಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಸಂಭಾವನೆ, ಕೆಲಸದ ಅವಧಿ ಹಾಗೂ ದೀಪಿಕಾ ಹಾಕಿದ ಇನ್ನೂ ಕೆಲ ನಿಯಮಗಳ ಕಾರಣದಿಂದ ಅವರನ್ನು ಸಿನಿಮಾದಿಂದ ಕೈಬಿಡಲಾಯ್ತು. ಆದರೆ ಇದೀಗ ಸಿನಿಮಾದ ನಿರ್ಮಾಪಕ ಸಂದರ್ಶನವೊಂದರಲ್ಲಿ ಮಾತನಾಡಿ ದೀಪಿಕಾ ಬಗ್ಗೆ ಏನೇನೋ ಆರೋಪಗಳನ್ನು ಮಾಡಿದ್ದಾರೆ. ಆದರೆ ಅವರ ಆರೋಪವೆಲ್ಲವೂ ಸುಳ್ಳು ಎನ್ನಲಾಗುತ್ತಿದೆ.
ದೀಪಿಕಾ ಪಡುಕೋಣೆ, ‘ಸ್ಪಿರಿಟ್’ ಸಿನಿಮಾದ ಲಾಭದಲ್ಲಿ 10% ಮೊತ್ತವನ್ನು ಸಂಭಾವನೆಯಾಗಿ ಕೇಳಿದರು. ಸಿನಿಮಾದ ಕತೆಯನ್ನು ಲೀಕ್ ಮಾಡಿದರು’ ಇತ್ಯಾದಿ ಆರೋಪಗಳನ್ನು ಸಿನಿಮಾದ ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ ಮಾಡಿದ್ದಾರೆ. ಆದರೆ ಇದೀಗ ದೀಪಿಕಾರ ಹತ್ತಿರದ ವ್ಯಕ್ತಿಗಳು ನೀಡಿರುವ ಮಾಹಿತಿ ಅನ್ವಯ ಹಿಂದೂಸ್ತಾನ್ ಟೈಮ್ಸ್ ಮಾಡಿರುವ ವರದಿಯಂತೆ, ‘ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರನ್ನು ಭೇಟಿಯಾಗಿದ್ದು ಕೇವಲ ಒಂದು ಬಾರಿ ಮಾತ್ರ. ಅಷ್ಟೇ ಅಲ್ಲದೆ, ನಿರ್ದೇಶಕರು ಆ ಭೇಟಿಗೆ ಒಂದು ಗಂಟೆ ತಡವಾಗಿ ಬಂದಿದ್ದರು. ದೀಪಿಕಾ ವೃತ್ತಿಪರತೆಯಿಂದ ಸಂದೀಪ್ ಜೊತೆಗೆ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಸಭೆಯಲ್ಲಿ ಚಿತ್ರದ ಕಥೆಯ ಒನ್ ಲೈನರ್ ಮಾತ್ರ ಹೇಳಲಾಗಿತ್ತು. ಅವರಿಗೆ ಸಂಪೂರ್ಣ ಕಥೆಯಯನ್ನು ಹೇಳಿರಲಿಲ್ಲ. ದೀಪಿಕಾ ಎಂದಿಗೂ ಪೂರ್ಣ ಕಥೆ ಕೇಳದೆ ಯಾವುದೇ ಯೋಜನೆಗೆ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ‘ಸ್ಪಿರಿಟ್’ ಚಿತ್ರವು ದೀಪಿಕಾ ಅವರ ಆಯ್ಕೆ ಪಟ್ಟಿಯಲ್ಲಿ ಇರಲೇ ಇಲ್ಲ’ ಎಂದಿದ್ದಾರೆ ದೀಪಿಕಾರ ಆಪ್ತರು.
‘ಸಂದೀಪ್ ರೆಡ್ಡಿ ವಂಗಾ ಅವರಂತಹ ನಿರ್ದೇಶಕರೊಂದಿಗೆ ದೀಪಿಕಾ ಪಡುಕೋಣೆ ಎಂದಿಗೂ ಕೆಲಸ ಮಾಡಲು ಬಯಸುವುದಿಲ್ಲ. ಅವರ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಹೊರಗಿನ ವ್ಯಕ್ತಿತ್ವದಲ್ಲೂ ಕಂಡುಬರುವ ಅವರ ಸ್ತ್ರೀ-ವಿರೋಧಿ ಧೋರಣೆಯೇ ಅದಕ್ಕೆ ಕಾರಣ’ ಎಂದು ದೀಪಿಕಾ ಅವರ ಆಪ್ತರೊಬ್ಬರು ಮಾಧ್ಯಮಕ್ಕೆ ಹೇಳಿದ್ದಾರೆ.
ಇದನ್ನೂ ಓದಿ:‘ಸಂಸ್ಕೃತಿ ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು’; ದೀಪಿಕಾ ಪಡುಕೋಣೆಗೆ ಕೌಂಟರ್
ಕಳೆದ ವರ್ಷ ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಮತ್ತು ಸಂದೀಪ್ ರೆಡ್ಡಿ ವಂಗಾ ಮಾತುಕತೆ ನಡೆಸುತ್ತಿದ್ದರು. ಆದರೆ ಏಪ್ರಿಲ್‌ನಲ್ಲಿ ದೀಪಿಕಾ ಈ ಯೋಜನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿತು. ಆಗ ಹರಿದಾಡಿದ್ದ ವರದಿಯ ಪ್ರಕಾರ, ಆಗಷ್ಟೆ ತಾಯಿ ಆಗಿದ್ದ ದೀಪಿಕಾ ಪಡುಕೋಣೆ, ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಕೋರಿದ್ದರು, ಇದನ್ನು ಚಿತ್ರತಂಡ ಒಪ್ಪಿರಲಿಲ್ಲ ಎನ್ನಲಾಗಿದೆ. ‘ಕಲ್ಕಿ 2898 ಎಡಿ’ ಚಿತ್ರದ ನಿರ್ಮಾಪಕರು ಕೂಡ ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ದೀಪಿಕಾ ಅವರ ನಿರ್ಗಮನವನ್ನು ಪ್ರಕಟಿಸಿದ್ದು, ದೊಡ್ಡ ಮಟ್ಟದ ಆನ್‌ಲೈನ್ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.
ದೀಪಿಕಾ ಪಡುಕೋಣೆ, ‘ಸ್ಪಿರಿಟ್’ ಸಿನಿಮಾದಿಂದ ಹೊರಹೋದ ಬಳಿಕ ಅವರ ಸ್ಥಾನಕ್ಕೆ ತೃಪ್ತಿ ದಿಮ್ರಿಯನ್ನು ಹಾಕಿಕೊಳ್ಳಲಾಯ್ತು. ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಹೋದ ಬಳಿಕ ಪ್ರಕಾಶ್ ರೈ ಸಹ ಹೊರನಡೆದರು. ಇದೇ ಸಿನಿಮಾನಲ್ಲಿ ಕೊರಿಯನ್ ನಟ ಡಾನ್ ಲೀ ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅವರೂ ಸಹ ಈ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ