AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮೇಂದ್ರ ಹುಟ್ಟುಹಬ್ಬ; ನಮನ ಸಲ್ಲಿಸಲು ಅಭಿಮಾನಿಗಳಿಗೆ ವಿಶೇಷ ಅವಕಾಶ

ಹಿರಿಯ ನಟ ಧರ್ಮೇಂದ್ರ ನವೆಂಬರ್ 24ರಂದು ನಿಧನರಾದರು. ಅವರ 90ನೇ ಹುಟ್ಟುಹಬ್ಬದಂದು (ಡಿಸೆಂಬರ್ 8) ಕುಟುಂಬವು ಖಂಡಾಲಾದ ತೋಟದ ಮನೆಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದೆ. ಕೊನೆಯ ದರ್ಶನಕ್ಕೆ ಅವಕಾಶವಿಲ್ಲದ ಕಾರಣ, ಅಭಿಮಾನಿಗಳಿಗೆ ಗೌರವ ಸಲ್ಲಿಸಲು ಡಿಯೋಲ್ ಕುಟುಂಬವು ಆಹ್ವಾನಿಸಿದೆ. ಸನ್ನಿ ಮತ್ತು ಬಾಬಿ ಡಿಯೋಲ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.

ಧರ್ಮೇಂದ್ರ ಹುಟ್ಟುಹಬ್ಬ; ನಮನ ಸಲ್ಲಿಸಲು ಅಭಿಮಾನಿಗಳಿಗೆ ವಿಶೇಷ ಅವಕಾಶ
ಧರ್ಮೇಂದ್ರ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 08, 2025 | 8:01 AM

Share

ಬಾಲಿವುಡ್ ಹಿರಿಯ ಮತ್ತು ಜನಪ್ರಿಯ ನಟ ಧರ್ಮೇಂದ್ರ ನವೆಂಬರ್ 24ರಂದು ನಿಧನರಾದರು. ಧರ್ಮೇಂದ್ರ 89ನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದರು. ಕುಟುಂಬವು ಧರ್ಮೇಂದ್ರ ಅವರ 90 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಹೊರಟಿತ್ತು. ಆದರೆ ಅದಕ್ಕೂ ಮೊದಲು ಅವರು ನಿಧನರಾದರು. ಈಗ ಧರ್ಮೇಂದ್ರ ಅವರ 90 ನೇ ಹುಟ್ಟುಹಬ್ಬದಂದು, ಅಂದರೆ ಇಂದು (ಡಿಸೆಂಬರ್ 8) ಕುಟುಂಬವು ಒಂದು ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕೆ ಅಭಿಮಾನಗಳನ್ನೂ ಆಹ್ವಾನಿಸಿದೆ ಎನ್ನಲಾಗಿದೆ.

ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ತಮ್ಮ ತಂದೆ ಧರ್ಮೇಂದ್ರ ಅವರ ತೋಟದ ಮನೆಗೆ ಭೇಟಿ ನೀಡಿ ಅವರ ಸ್ಮರಣೆ ಮಾಡಲು ನಿರ್ಧರಿಸಿದ್ದಾರೆ. ಇದು ಖಂಡಾಲಾದಲ್ಲಿ ಇದೆ. ಧರ್ಮೇಂದ್ರ ಅವರ ಅಭಿಮಾನಿಗಳು ಸಹ ಅವರಿಗೆ ಗೌರವ ಸಲ್ಲಿಸಬೇಕೆಂದು ಕುಟುಂಬ ಬಯಸಿದೆ. ಹೀಗಾಗಿ, ಅಭಿಮಾನಿಗಳು ಕುಟುಂಬವನ್ನು ಭೇಟಿ ಮಾಡಿ ಗೌರವ ಸಲ್ಲಿಸಲು ತೋಟದ ಮನೆಗೆ ಆಹ್ವಾನಿಸಲಾಗಿದೆಯಂತೆ. ಇದಕ್ಕಾಗಿ ಕುಟುಂಬವು ಸಿದ್ಧತೆಗಳನ್ನು ಸಹ ಪ್ರಾರಂಭಿಸಿದೆ.

ಕಾರ್ಯಕ್ರಮವು ಮಧ್ಯಾಹ್ನ 12.30 ಕ್ಕೆ ಫಾರ್ಮ್‌ಹೌಸ್‌ನಲ್ಲಿ ಪ್ರಾರಂಭವಾಗಲಿದೆ. ಧರ್ಮೇಂದ್ರ ಅವರ ಅಭಿಮಾನಿಗಳು ಇಲ್ಲಿಗೆ ನೇರವಾಗಿ ತಲುಪಬಹುದು. ಇದಕ್ಕಾಗಿ ಅಭಿಮಾನಿಗಳಿಗೆ ಯಾವುದೇ ಪಾಸ್ ಅಥವಾ ನೋಂದಣಿ ಅಗತ್ಯವಿಲ್ಲ. ಅಭಿಮಾನಿಗಳನ್ನು ಲೋನಾವಾಲಕ್ಕೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದು ಭವ್ಯ ಸಮಾರಂಭವಲ್ಲ, ಆದರೆ ಧರ್ಮೇಂದ್ರ ಅವರ 90ನೇ ಹುಟ್ಟುಹಬ್ಬದ ನೆನಪಗಿದೆ ಈ ಕಾರ್ಯಕ್ರಮ ಮಾಡಲಾಗಿದೆ.

ಧರ್ಮೇಂದ್ರ ನಿಧನ ಹೊಂದಿದ ವಿಷಯ ಅಭಿಮಾನಿಗಳಿಗೆ ಗೊತ್ತಾಗುವುದರ ಒಳಗೆ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಅವರನ್ನು ಕೊನೆಯ ಬಾರಿ ನೋಡುವ ಅವಕಾಶ ಫ್ಯಾನ್ಸ್​ಗೆ ಸಿಕ್ಕಿರಲೇ ಇಲ್ಲ. ಈ ಕಾರಣಕ್ಕೆ ಕುಟುಂಬ ಈ ನಿರ್ಧಾರಕ್ಕೆ ಬಂದಿದೆ.

ಧರ್ಮೇಂದ್ರ ಅವರು ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ನವೆಂಬರ್ 10 ರಂದು ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಮಯದಲ್ಲಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅವರ ಸಾವಿನ ಸುದ್ದಿ ಮಾಧ್ಯಮಗಳಲ್ಲಿಯೂ ಬಂದಿತು. ಆದರೆ ಅವರ ಕುಟುಂಬ ಅದನ್ನು ನಿರಾಕರಿಸಿತು. ಅದರ ನಂತರ, ನವೆಂಬರ್ 12ರಂದು, ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ವೈದ್ಯರು ಮನೆಯಲ್ಲಿಯೇ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದರು. ಆದರೆ ನವೆಂಬರ್ 24 ರಂದು ಧರ್ಮೇಂದ್ರ ನಿಧನರಾದರು.

ಇದನ್ನೂ ಓದಿ: ಬಂಗಲೆಯೂ ಅಲ್ಲ, ಹಣವೂ ಅಲ್ಲ; ಧರ್ಮೇಂದ್ರ ಆಸ್ತಿಯಿಂದ ‘ಈ’ ವಿಶೇಷ ವಸ್ತು ಕೇಳಿದ ಮಗಳು

ಧರ್ಮೇಂದ್ರ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವಿಲೇ ಪಾರ್ಲೆ ಸ್ಮಶಾನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್, ಅಮಿತಾಬ್ ಬಚ್ಚನ್, ಅಮೀರ್ ಖಾನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.