ಪ್ರಭಾಸ್​ ಮೇಲೆ ದಿಶಾ ಪಟಾನಿಗೆ ಪ್ರೀತಿ? ನಟಿಯ ಹೊಸ ಟ್ಯಾಟೂ ನೋಡಿ ಜನರಿಗೆ ಅಚ್ಚರಿ

|

Updated on: Jul 02, 2024 | 7:58 PM

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್​ ಮತ್ತು ದಿಶಾ ಪಟಾನಿ ಅವರು ತೆರೆ ಹಂಚಿಕೊಂಡಿದ್ದಾರೆ. ಈಗ ಒಬ್ಬರ ನಡುವೆ ಪ್ರೀತಿ ಮೂಡಿದೆಯಾ ಎಂಬ ಗುಮಾನಿ ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ದಿಶಾ ಪಟಾನಿ ಕೈ ಮೇಲೆ ಇರುವ ಹೊಸ ಟ್ಯಾಟೂ. ‘ಪಿಡಿ’ ಎಂದು ದಿಶಾ ಅವರು ಟ್ಯಾಟೂ ಹಾಕಿಸಿಕೊಂಡಿದ್ದು, ‘ಪ್ರಭಾಸ್​ ದಿಶಾ’ ಎಂಬುದು ಇದರ ಅರ್ಥ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಪ್ರಭಾಸ್​ ಮೇಲೆ ದಿಶಾ ಪಟಾನಿಗೆ ಪ್ರೀತಿ? ನಟಿಯ ಹೊಸ ಟ್ಯಾಟೂ ನೋಡಿ ಜನರಿಗೆ ಅಚ್ಚರಿ
ದಿಶಾ ಪಟಾನಿ, ಪ್ರಭಾಸ್​
Follow us on

ನಟ ಪ್ರಭಾಸ್​ (Prabhas) ಅವರು ಸದ್ಯಕ್ಕೆ ಸಿಂಗಲ್​ ಆಗಿದ್ದಾರೆ. ಅವರು ಯಾವಾಗ ಮದುವೆ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ. ಪ್ರಭಾಸ್​ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್​ ಆಗಿದೆ. ಇದೇ ಖುಷಿಯಲ್ಲಿ ಅವರು ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂಬುದು ಅವರ ಆಪ್ತರ ಆಸೆ. ಈ ನಡುವೆ ಇನ್ನೊಂದು ಗಾಸಿಪ್​ ಜೋರಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ದಿಶಾ ಪಟಾನಿ (Disha Patani) ಅವರಿಗೆ ಪ್ರಭಾಸ್​ ಮೇಲೆ ಪ್ರೀತಿ ಚಿಗುರಿದೆಯಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ನಟಿಯ ಹೊಸ ಟ್ಯಾಟೂ.

ದಿಶಾ ಪಟಾನಿ ಅವರು ಕೈ ಮೇಲೆ ‘ಪಿಡಿ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ಏನೆಂಬುದು ಯಾರಿಗೂ ತಿಳಿದಿಲ್ಲ. ಆದರೆ ನೆಟ್ಟಿಗರು ಹಲವು ರೀತಿಯಲ್ಲಿ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ. ‘ಪಿಡಿ ಎಂದರೆ ಪ್ರಭಾಸ್​ ಮತ್ತು ದಿಶಾ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ. ತಮ್ಮಿಬ್ಬರ ಪ್ರೀತಿಯ ಸಂಕೇತವಾಗಿ ಅವರು ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂಬುದು ನೆಟ್ಟಿಗರ ವಾದ.

ಪ್ರಭಾಸ್​ ಮತ್ತು ದಿಶಾ ಪಟಾನಿ ಅವರು ಎಂದಿಗೂ ಜೊತೆಯಾಗಿ ಸುತ್ತಾಡಿಲ್ಲ. ಹಾಗಾಗಿ ಅವರಿಬ್ಬರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬುದನ್ನು ಅಷ್ಟು ಸುಲಭಕ್ಕೆ ಒಪ್ಪಲು ಸಾಧ್ಯವಿಲ್ಲ. ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರ ಕಾರ್ಯದಲ್ಲೂ ದಿಶಾ ಪಟಾನಿ ಅವರು ಹೆಚ್ಚಾಗಿ ಭಾಗವಹಿಸಿಲ್ಲ. ಒಟ್ಟಿನಲ್ಲಿ ಪ್ರಭಾಸ್​ ಜೊತೆ ಅವರು ಒಂದು ಮಟ್ಟಿಗಿನ ಅಂತರವನ್ನು ಕಾಯ್ದುಕೊಂಡಿದ್ದಾರೆ. ಹಾಗಿರುವಾಗ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ.

ಒಟ್ಟಿನಲ್ಲಿ ದಿಶಾ ಪಟಾನಿ ಅವರ ಕೈ ಮೇಲೆ ಇರುವ ಹೊಸ ಟ್ಯಾಟೂ ನೋಡಿದ ಬಳಿಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ. ಜನರು ಹತ್ತಾರು ಬಗೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ದಿಶಾ ಪಟಾನಿ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಟ್ಯಾಟೂ ಬಗ್ಗೆ ಜನರ ಕುತೂಹಲ ನೋಡಿ ಖುಷಿ ಆಯಿತು’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆದರೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ದಿಶಾ ಪಟಾನಿ ಧರಿಸಿರುವ ಈ ಸರಣ ಉಡುಗೆಯ ಬೆಲೆ ಕೆಲ ಲಕ್ಷಗಳು

ಈ ಮೊದಲು ದಿಶಾ ಪಟಾನಿ ಅವರು ಟೈಗರ್ ಶ್ರಾಫ್​ ಜೊತೆ ಡೇಟಿಂಗ್​ ಮಾಡುತ್ತಿದ್ದರು. ಆ ವಿಷಯ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ಬ್ರೇಕಪ್​ ಆಯಿತು. ಬಾಲಿವುಡ್​ನಲ್ಲಿ ದಿಶಾಗೆ ಸಖತ್ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಅವರನ್ನು 6 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.