Dunki Twitter Review: ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ‘ಡಂಕಿ’ ಸಿನಿಮಾ; ನೆಟ್ಟಿಗರ ವಿಮರ್ಶೆ ಹೇಗಿದೆ?

|

Updated on: Dec 21, 2023 | 1:20 PM

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳಲು ವೀಸಾ ಪಡೆಯಬೇಕು. ಬಡವರಿಗೆ ಸುಲಭವಾಗಿ ವೀಸಾ ಸಿಗುವುದಿಲ್ಲ. ವಿದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಮಾಡಬೇಕು ಎಂದು ಕನಸು ಕಂಡ ಬಡವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಫಸ್ಟ್​ ಶೋ ನೋಡಿದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

Dunki Twitter Review: ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ‘ಡಂಕಿ’ ಸಿನಿಮಾ; ನೆಟ್ಟಿಗರ ವಿಮರ್ಶೆ ಹೇಗಿದೆ?
‘ಡಂಕಿ’ ಸಿನಿಮಾ ಪೋಸ್ಟರ್​
Follow us on

ವಿಶ್ವಾದ್ಯಂತ ‘ಡಂಕಿ’ ಸಿನಿಮಾ (Dunki Movie) ಬಿಡುಗಡೆ ಆಗಿದೆ. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​, ತಾಪ್ಸಿ ಪನ್ನು, ಬೊಮನ್​ ಇರಾನಿ, ವಿಕ್ಕಿ ಕೌಶಲ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ಭಿನ್ನವಾದ ಕಾನ್ಸೆಪ್ಟ್​ ಆಯ್ಕೆ ಮಾಡಿಕೊಂಡು ರಾಜ್​ಕುಮಾರ್​ ಹಿರಾನಿ (Rajkumar Hirani) ಈ ಸಿನಿಮಾ ಮಾಡಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಸೋಶಿಯಲ್​ ಮೀಡಿಯಾದಲ್ಲಿ ವಿಮರ್ಶೆ (Dunki Review) ಹಂಚಿಕೊಳ್ಳುತ್ತಿದ್ದಾರೆ. ಕೆಲವರಿಗೆ ‘ಡಂಕಿ’ ಸಿನಿಮಾ ಸಖತ್​ ಇಷ್ಟವಾಗಿದೆ. ಆದರೆ ಕೆಲವರಿಗೆ ಇಷ್ಟವಾಗಿಲ್ಲ.

ಇದು ಕ್ಲಾಸ್​ ಸಿನಿಮಾ. ಹಾಗಾಗಿ ಕ್ಲಾಸ್​ ಪ್ರೇಕ್ಷಕರು ಇದನ್ನು ಎಂಜಾಯ್​ ಮಾಡುತ್ತಿದ್ದಾರೆ. ‘ಡಂಕಿ’ ಸಿನಿಮಾದಲ್ಲಿ ಹೊಡಿಬಡಿ ದೃಶ್ಯಗಳು ಇಲ್ಲ. ಅದರ ಬದಲು ಎಮೋಷನ್​ ತುಂಬಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಎಂದಿನಂತೆ ರಾಜ್​ಕುಮಾರ್ ಹಿರಾನಿ ಅವರು ಒಂದು ಉತ್ತಮವಾದ ಮೆಸೇಜ್​ ನೀಡಿದ್ದಾರೆ. ಮೊದಲ ದಿನ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಶಾರುಖ್​ ಖಾನ್ ಅವರ ನಟನೆ, ರಾಜ್​ಕುಮಾರ್​ ಹಿರಾನಿ ಅವರ ನಿರ್ದೇಶನಕ್ಕೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ನೀಡುತ್ತಿದ್ದಾರೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳಲು ವೀಸಾ ಪಡೆಯಬೇಕು. ಬಡವರಿಗೆ ಸುಲಭವಾಗಿ ವೀಸಾ ಸಿಗುವುದಿಲ್ಲ. ಬೇರೆ ದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಮಾಡಬೇಕು ಎಂದು ಕನಸು ಕಂಡ ಬಡವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.

2023ರಲ್ಲಿ ‘ಜವಾನ್​’ ಮತ್ತು ‘ಪಠಾಣ್’ ಸಿನಿಮಾಗಳಿಂದ ಶಾರುಖ್​ ಖಾನ್​ ಅವರಿಗೆ ಭರ್ಜರಿ ಗೆಲವು ಸಿಕ್ಕಿತ್ತು. ಈಗ ಈ ವರ್ಷದಲ್ಲಿ ಅವರ ಮೂರನೇ ಸಿನಿಮಾ ‘ಡಂಕಿ’ ತೆರೆಕಂಡಿದೆ. ಕೆಲವರು ಈ ಚಿತ್ರವನ್ನು ಟೀಕಿಸಿದ್ದಾರೆ. ನಿರೀಕ್ಷಿಸಿದ ರೀತಿಯಲ್ಲಿ ಇದು ಮೂಡಿಬಂದಿಲ್ಲ ಎಂದು ಒಂದಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

ರಾಜ್​ಕುಮಾರ್​ ಹಿರಾನಿ ಅವರು ಇನ್ನೂ ಚೆನ್ನಾಗಿ ಈ ಸಿನಿಮಾವನ್ನು ಕಟ್ಟಿಕೊಡಬಹುದಿತ್ತು ಎಂಬ ಅಭಿಪ್ರಾಯ ಕೂಡ ಪ್ರೇಕ್ಷಕರಿಂದ ಕೇಳಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.