ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಯ್ತಾ ‘ಡಂಕಿ’ ಚಿತ್ರದ ಫಸ್ಟ್ ಹಾಫ್? ಈ ರಿಪೋರ್ಟ್ ನೋಡಿ..
Dunki First Half Review: ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರು ನಟಿಸಿದ್ದಾರೆ. ಇಂದು (ಡಿ.21) ಈ ಸಿನಿಮಾ ಬಿಡುಗಡೆ ಆಗಿದ್ದು, ಮುಂಜಾನೆಯೇ ದೇಶಾದ್ಯಂತ ಶೋ ಆರಂಭ ಆಗಿದೆ. ‘ಡಂಕಿ’ ಫಸ್ಟ್ ಹಾಫ್‌ನಲ್ಲಿ ಏನೆಲ್ಲ ಇದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

ಈ ವರ್ಷ ಶಾರುಖ್ ಖಾನ್ (Shah Rukh Khan) ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಈ ಮೊದಲು ತೆರೆಕಂಡಿದ್ದ ‘ಜವಾನ್’, ‘ಪಠಾಣ್’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿವೆ. ಈಗ ಮೂರನೇ ಚಿತ್ರ ‘ಡಂಕಿ’ (Dunki Movie) ರಿಲೀಸ್ ಆಗಿದೆ. ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಲು ಹಲವು ಕಾರಣಗಳಿವೆ. ರಾಜ್‌ಕುಮಾರ್ ಹಿರಾನಿ ಅವರಂತಹ ಸ್ಟಾರ್ ನಿರ್ದೇಶಕರ ಜೊತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಒಂದು ವಿಶೇಷವಾದ ಕಾನ್ಸೆಪ್ಟ್ ಇಟ್ಟುಕೊಂಡು ರಾಜ್‌ಕುಮಾರ್ ಹಿರಾನಿ (Rajkumar Hirani) ಅವರು ಈ ಸಿನಿಮಾ ಮಾಡಿದ್ದಾರೆ. ಇಂದು (ಡಿಸೆಂಬರ್ 21) ಬಿಡುಗಡೆ ಆಗಿರುವ ‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರು ನಟಿಸಿದ್ದಾರೆ. ಮುಂಜಾನೆಯೇ ದೇಶಾದ್ಯಂತ ಈ ಚಿತ್ರದ ಶೋ ಆರಂಭ ಆಗಿದೆ. ‘ಡಂಕಿ’ ಫಸ್ಟ್ ಹಾಫ್‌ನಲ್ಲಿ ಏನೆಲ್ಲ ಇದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…
- ಹಾರ್ಡಿ ಸಿಂಗ್ ಎಂಬ ಪಾತ್ರ ಮಾಡಿರುವ ಶಾರುಖ್ ಖಾನ್. ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲಿ ಎಂಟ್ರಿ ನೀಡಿದ ಕಿಂಗ್ ಖಾನ್. ಅವರ ಎಂಟ್ರಿ ಕ್ಲಾಸ್ ಆಗಿದೆ.
- ಭಾರತ ಬಿಟ್ಟು ಇಂಗ್ಲೆಂಡ್‌ಗೆ ಹೋಗಿ ಸೆಟ್ಲ್ ಆಗಬೇಕು ಎಂದು ಕನಸು ಕಂಡವರ ಕಥೆ ಹೇಳುತ್ತದೆ ‘ಡಂಕಿ’ ಸಿನಿಮಾ.
- ಕಥೆಯ ಆರಂಭದಲ್ಲಿ ಕಾಮಿಡಿ ಮತ್ತು ಎಮೋಷನ್‌ಗೆಹೆಚ್ಚು ಆದ್ಯತೆ ನೀಡಿದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
- ಕಥೆಗೆ ಮೇಜರ್ ಟರ್ನ್ ನೀಡುವ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಿಕ್ಕಿ ಕೌಶಲ್. ಅವರ ನಟನೆ ಇಷ್ಟವಾಗುತ್ತದೆ.
- ಶಾರುಖ್ ಖಾನ್, ತಾಪ್ಸಿ ಪನ್ನು ನಡುವಿನ ಕೆಮಿಸ್ಟ್ರಿ ಡಿಫರೆಂಟ್ ಆಗಿದೆ. ‘ಲುಟ್ ಪುಟ್ ಗಯಾ..’ ಹಾಡು ಫಸ್ಟ್ ಹಾಫ್‌ನಲ್ಲೇ ಮನರಂಜನೆ ನೀಡುತ್ತದೆ.
- ಪಂಜಾಬ್‌ನಲ್ಲಿ ನಡೆಯುವ ಫಸ್ಟ್ ಹಾಫ್ ಕಥೆ. ಹೀರೋಗಿರಿ ಬದಿಗೊತ್ತಿ ಕಾಮನ್ ಮ್ಯಾನ್ ರೀತಿಯಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಶಾರುಖ್ ಖಾನ್.
- ಇಂಗ್ಲಿಷ್ ಟೀಚರ್ ಪಾತ್ರದಲ್ಲಿ ನಗುವಿನ ಕಚಗುಳಿ ಇಡುವ ನಟ ಬೊಮನ್ ಇರಾನಿ.
- ಇಂಟರ್‌ವಲ್‌ನಲ್ಲಿ ಭಾವನಾತ್ಮಕ ಟ್ವಿಸ್ಟ್ ಪಡೆದುಕೊಳ್ಳುತ್ತದೆ ‘ಡಂಕಿ’ ಕಹಾನಿ. ಅಸಲಿ ಡಾಂಕಿ ಜರ್ನಿ ಶುರುವಾಗುವುದು ಸೆಕೆಂಡ್ ಹಾಫ್‌ನಲ್ಲಿ.
- ‘ಡಂಕಿ’ ಫಸ್ಟ ಹಾಫ್‌ನಲ್ಲಿ ಯಾವುದೇ ಆ್ಯಕ್ಷನ್ ದೃಶ್ಯಗಳಿಲ್ಲ. ಮಾಸ್ ಮನರಂಜನೆ ಬಯಸುವ ಪ್ರೇಕ್ಷಕರಿಗೆ ಕೊಂಚ ನಿರಾಸೆ ಆಗಬಹುದು.
- ತಮ್ಮ ಈ ಹಿಂದಿನ ಸಿನಿಮಾಗಳ ರೀತಿಯೇ ಒಂದು ಗಂಭೀರವಾದ ವಿಷಯವನ್ನು ಕಾಮಿಡಿ ಮೂಲಕ ಪ್ರಸ್ತುತಪಡಿಸಿದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.