Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ಉಂಟಾದರೂ ಜೀವನ ನಡೆಸಲು ಐಶ್ವರ್ಯಾಗೆ ಆಗಲ್ಲ ಸಮಸ್ಯೆ; ಇಲ್ಲಿವೆ ಕಾರಣ

ಐಶ್ವರ್ಯಾ ರೈ ವಯಸ್ಸು ಈಗ 50 ವರ್ಷ. ಆದಾಗ್ಯೂ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್’ ಹಾಗೂ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು.

ವಿಚ್ಛೇದನ ಉಂಟಾದರೂ ಜೀವನ ನಡೆಸಲು ಐಶ್ವರ್ಯಾಗೆ ಆಗಲ್ಲ ಸಮಸ್ಯೆ; ಇಲ್ಲಿವೆ ಕಾರಣ
ಐಶ್ವರ್ಯಾ ರೈ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 22, 2023 | 11:30 AM

ನಟಿ ಐಶ್ವರ್ಯಾ ರೈ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಬಚ್ಚನ್ ಕುಟುಂಬ ಸೇರಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಈಗ ಐಶ್ವರ್ಯಾ ರೈ (Aishwarya Rai) ಅವರು ಅಭಿಷೇಕ್ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕಿಲ್ಲ. ಆದಾಗ್ಯೂ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಬಚ್ಚನ್ ಕುಟುಂಬ ಸುಂದರಿ ವಿಚ್ಛೇದನ ಪಡೆದರೂ ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಐಶ್ವರ್ಯಾ ರೈ ಅವರು ಮದುವೆ ಆದ ಬಳಿಕವೂ ಸಿನಿಮಾ ಮಾಡಿದರು. ಅವರ ಒಟ್ಟೂ ಆಸ್ತಿ 770 ಕೋಟಿ ರೂಪಾಯಿಗೂ ಅಧಿಕವಾಗಿದೆ. ನಟಿಯಾಗಿ ಇಷ್ಟು ದೊಡ್ಡ ಮೊತ್ತದ ಆಸ್ತಿ ಮಾಡುವುದು ಎಂದರೆ ಅದು ಸುಲಭವಲ್ಲ. ಹೆಲ್ತ್​ಕೇರ್ ಸ್ಟಾರ್ಟ್​ಅಪ್​​ಗೆ ಅವರು ಐದು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಬರುವ ಲಾಭದಲ್ಲಿ ಐಶ್ವರ್ಯಾಗೆ ಹಣ ಸಿಗುತ್ತದೆ.

ಐಶ್ವರ್ಯಾ ರೈ ವಯಸ್ಸು ಈಗ 50 ವರ್ಷ. ಆದಾಗ್ಯೂ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್’ ಹಾಗೂ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಒಂದು ಚಿತ್ರಕ್ಕೆ ಅವರು ಪಡೆಯೋ ಸಂಭಾವನೆ 10 ಕೋಟಿ ರೂಪಾಯಿ. ಹೀಗಾಗಿ, ಸಿನಿಮಾ ಮಾಡಿಕೊಂಡು ಹಾಯಾಗಿ ಸಂಸಾರ ನಡೆಸುತ್ತಾರೆ.

ಐಶ್ವರ್ಯಾ ರೈ ಅವರು ಅನೇಕ ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಹಲವು ಕಾಸ್ಮೆಟಿಕ್ಸ್ ಕಂಪನಿಗಳು ಐಶ್ವರ್ಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಇಟ್ಟುಕೊಂಡಿವೆ. ಇದಕ್ಕಾಗಿ ಅವರು 6-7 ಕೋಟಿ ರೂಪಾಯಿ ಪಡೆಯುತ್ತಾರೆ. ವರ್ಷಕ್ಕೆ ಇದರಿಂದ ಐಶ್ವರ್ಯಾಗೆ ಸಾಕಷ್ಟು ಹಣ ಸಿಗುತ್ತದೆ.

ಐಶ್ವರ್ಯಾ ರೈ ಅವರು 2015ರಲ್ಲಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದರು. ‘ಜಜ್ಬಾ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಇರ್ಫಾನ್ ಖಾನ್, ಶಬಾನಾ ಅಜ್ಮಿ, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಮನಸ್ಸು ಮಾಡಿದರೆ ಅವರು ಈಗ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿಯಬಹುದು.

ಐಶ್ವರ್ಯಾ ರೈ ಮದುವೆ ಬಳಿಕವೂ ಹೂಡಿಕೆ ಮಾಡಿದ್ದಾರೆ. ಅವರು ದುಬೈನಲ್ಲಿ ಮ್ಯಾನ್ಶನ್ ಹೊಂದಿದ್ದಾರೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆ ಇದಾಗಿದೆ.  5 ಬಿಎಚ್​ಕೆ ಅಪಾರ್ಟ್​ಮೆಂಟ್​ನ ಅವರು ಹೊಂದಿದ್ದಾರೆ. ಇದರ ಬೆಲೆ 21 ಕೋಟಿ ರೂಪಾಯಿ. ಅಭಿಷೇಕ್ ಹಾಗೂ ಐಶ್ವರ್ಯಾ ಬಚ್ಚನ್ ಅವರು ವೊರ್ಲಿಯಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. 37ನೇ ಫ್ಲೋರ್​ನಲ್ಲಿ ಈ ಮನೆ ಇದೆ. ಈ ಮನೆಯನ್ನು 41 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು.

ಇದನ್ನೂ ಓದಿ: ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’; ಐಶ್ವರ್ಯಾ ರೈ ಬಗ್ಗೆ ಟ್ವೀಟ್ ಮಾಡಿದ್ರಾ ಅಮಿತಾಭ್?

ಐಶ್ವರ್ಯಾ ರೈ ಅವರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಐಶ್ವರ್ಯಾ ರೈ ಬಳಿ ಇದೆ. ಇದರ ಬೆಲೆ 7.95 ಕೋಟಿ ರೂಪಾಯಿ. ಲೆಕ್ಸಸ್ ಎಲ್​ಎಕ್ಸ್ ಕಾರು ಇದೆ. ಇದರ ಬೆಲೆ 2.33 ಕೋಟಿ ರೂಪಾಯಿ, ಆಡಿ ಎ8 ಎಲ್​ ಕಾರು (1.56 ಕೋಟಿ ರೂಪಾಯಿ) ಇದೆ. ಬೆಂಜ್ ಮೊದಲಾದ ಕಾರುಗಳು ಅವರ ಗ್ಯಾರೇಜ್​ನಲ್ಲಿವೆ. ಮಗಳಿಗೆ ಅವರು ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:30 am, Fri, 22 December 23

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ