Farah Khan: ಫರ್ಹಾ ಖಾನ್ ಒಬ್ಬರಿಗಾಗಿ ಮಾತ್ರ ಓಪನ್ ಆಯ್ತು ಪೂರ್ತಿ ರೆಸ್ಟೋರೆಂಟ್; ಬಿಲ್ ಯಾರು ಕೊಡ್ತಾರೆ?
Farah Khan Viral Video: ಈ ವಿಡಿಯೋವನ್ನು ಫರ್ಹಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೈಪುರದ ಒಂದು ರೆಸ್ಟೋರೆಂಟ್ನಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ.
ನಿರ್ದೇಶಕಿ ಫರ್ಹಾ ಖಾನ್ (Farah Khan) ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಗಮನಾರ್ಹ ಸಿನಿಮಾಗಳನ್ನು ನೀಡಿ ಅವರು ಗುರುತಿಸಿಕೊಂಡಿದ್ದಾರೆ. ‘ಮೈ ಹೂ ನಾ’, ‘ಓಂ ಶಾಂತಿ ಓಂ’, ‘ತೀಸ್ ಮಾರ್ ಖಾನ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಕಿರುತೆರೆಯ ಅನೇಕ ಕಾರ್ಯಕ್ರಮಗಳಿಗೆ ಅವರು ಜಡ್ಜ್ ಆಗಿದ್ದಾರೆ. ಅಷ್ಟೇ ಅಲ್ಲದೇ, ನೃತ್ಯ ನಿರ್ದೇಶಕಿ ಆಗಿಯೂ ಫರ್ಹಾ ಖಾನ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅವರ ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಈಗೊಂದು ಹೊಸ ಸಾಕ್ಷಿ ಸಿಕ್ಕಿದೆ. ಕೇವಲ ಫರ್ಹಾ ಖಾನ್ ಒಬ್ಬರ ಸಲುವಾಗಿ ಜೈಪುರದಲ್ಲಿ ಇಡೀ ರೆಸ್ಟೋರೆಂಟ್ (Jaipur Restaurant) ಓಪನ್ ಮಾಡಲಾಗಿದೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಫರ್ಹಾ ಖಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೈಪುರದ ಈ ರೆಸ್ಟೋರೆಂಟ್ನಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಅಲ್ಲಿನ ರಾಯಲ್ ಆತಿಥ್ಯ ಕಂಡು ಫರ್ಹಾ ಖಾನ್ ಅಚ್ಚರಿಗೊಂಡಿದ್ದಾರೆ. ಒಳಗೆ ಪ್ರವೇಶಿಸುತ್ತಿದ್ದಂತೆಯೇ ಇಡೀ ರೆಸ್ಟೋರೆಂಟ್ ಖಾಲಿ ಇರುವುದು ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ಪ್ರಶ್ನಿಸಿದಾದ ಅವರಿಗೆ ಅಚ್ಚರಿಯ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ‘ಹಾಗಲ್ಲ ಸರ್..’ ಎಂದು ಅಮಿತಾಭ್ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್; ವಿಡಿಯೋ ವೈರಲ್
‘ಇಂದು ಈ ಇಡೀ ರೆಸ್ಟೋರೆಂಟ್ ತೆರೆದಿರುವುದು ನಿಮಗಾಗಿ ಮಾತ್ರ’ ಎಂದು ಅಲ್ಲಿನ ಸಿಬ್ಬಂದಿ ಉತ್ತರ ನೀಡಿದ್ದಾರೆ. ಅದನ್ನು ಕೇಳುತ್ತಿದ್ದಂತೆಯೇ ಫರ್ಹಾ ಖಾನ್ಗೆ ಅಚ್ಚರಿ ಆಗಿದೆ. ‘ಬಿಲ್ ಕೊಡೋದು ಯಾರು’ ಎಂದು ಅವರು ಹೌಹಾರಿದ್ದಾರೆ. ಅಂತಿಮವಾಗಿ ಯಾರು ಬಿಲ್ ಕೊಟ್ಟರೋ ತಿಳಿದಿಲ್ಲ. ಒಟ್ಟಿನಲ್ಲಿ ನಮ್ಮ ಮೇಲೆ ರೆಸ್ಟೋರೆಂಟ್ನವರು ಈ ಪರಿ ಪ್ರೀತಿ ತೋರಿಸಿದ್ದಕ್ಕೆ ಫರ್ಹಾ ಖಾನ್ ಅವರಿಗೆ ತುಂಬ ಖುಷಿ ಆಗಿದೆ.
ಇದನ್ನೂ ಓದಿ:
ಫರ್ಹಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ಲ್ಲಿ ಅವರನ್ನು ಬರೋಬ್ಬರಿ 32 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಹಲವು ಬಗೆಯ ವಿಡಿಯೋಗಳನ್ನು ಫರ್ಹಾ ಖಾನ್ ಅವರು ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಪ್ರವಾಸ, ಪಾರ್ಟಿ ಮತ್ತು ಸಿನಿಮಾ ಕೆಲಸಗಳ ಬಗ್ಗೆ ಈ ಮೂಲಕ ಅವರು ಅಪ್ಡೇಟ್ ನೀಡುತ್ತಾ ಇರುತ್ತಾರೆ.
View this post on Instagram
ಫರ್ಹಾ ಖಾನ್ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ 2014ರಲ್ಲಿ ತೆರೆಕಂಡಿತು. ಆ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ್ದರು. ಆ ಬಳಿಕ ಅವರು ಯಾವುದೇ ಸಿನಿಮಾಗೆ ನಿರ್ದೇಶನ ಮಾಡಿಲ್ಲ. ಮತ್ತೆ ಅವರು ಡೈರೆಕ್ಟರ್ ಹ್ಯಾಟ್ ಧರಿಸಲಿ ಎಂಬುದು ಅಭಿಮಾನಿಗಳ ಆಸೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.