‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್ಗೆ ಜೋಡಿ ಆಗಲಿರುವ ಜೆನಿಲಿಯಾ ದೇಶಮುಖ್
‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಜೆನಿಲಿಯಾ ದೇಶಮುಖ್ ಸೂಕ್ತ ಆಗುತ್ತಾರೆ ಎಂದು ಆಮಿರ್ ಖಾನ್ ಅವರಿಗೆ ಅನಿಸಿದೆ. ಹಾಗಾಗಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಸಿನಿಮಾವನ್ನು ಜೆನಿಲಿಯಾ ಒಪ್ಪಿಕೊಂಡಿದ್ದಾರೆ. ಆಮಿರ್ ಖಾನ್ ಮತ್ತು ಜೆನಿಲಿಯಾ ಅವರನ್ನು ಜೊತೆಯಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಬಹುಬೇಡಿಕೆಯ ನಟ ಆಮಿರ್ ಖಾನ್ (Aamir Khan) ಅವರ ಹೊಸ ಸಿನಿಮಾ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ಹೊರಬಿದ್ದಿತ್ತು. ‘ಸಿತಾರೆ ಜಮೀನ್ ಪರ್’ ಎಂಬ ಹೊಸ ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಈಗ ಇನ್ನೊಂದು ಅಪ್ಡೇಟ್ ಕೇಳಿಬಂದಿದೆ. ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಜೆನಿಲಿಯಾ ದೇಶಮುಖ್ (Genelia Deshmukh) ಮತ್ತು ಆಮಿರ್ ಖಾನ್ ಅವರು ಜೋಡಿಯಾಗಿ ನಟಿಸಿಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ‘ತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಕಥೆಯ ಥೀಮ್ ರೀತಿಯೇ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಡಿಬರಲಿದೆ.
ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ್ ಅವರು ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅವರು ‘ಜಾನೆ ತು ಯಾ ಜಾನೆ ನಾ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆ ಸಿನಿಮಾಗೆ ಆಮಿರ್ ಖಾನ್ ಬಂಡವಾಳ ಹೂಡಿದ್ದರು. ಅವರ ಹತ್ತಿರದ ಸಂಬಂಧಿ ಇಮ್ರಾನ್ ಖಾನ್ ಹೀರೋ ಆಗಿದ್ದರು. ಆ ಚಿತ್ರಕ್ಕೆ ಜೆನಿಲಿಯಾ ಡಿಯೋಜಾ ನಾಯಕಿ ಆಗಿದ್ದರು. ಈಗ ಆಮಿರ್ ಖಾನ್ಗೆ ಜೋಡಿಯಾಗಿ ನಟಿಸಲು ಜೆನಿಲಿಯಾ ಸಜ್ಜಾಗಿದ್ದಾರೆ.
ಇದನ್ನೂ ಓದಿ: ನಟಿ ಜೆನಿಲಿಯಾ ಮತ್ತೆ ಪ್ರೆಗ್ನೆಂಟ್ ಎಂದವರಿಗೆ ಉತ್ತರ ಕೊಟ್ಟ ರಿತೇಶ್
‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಜೆನಿಲಿಯಾ ದೇಶಮುಖ್ ಅವರು ಸೂಕ್ತ ಆಗುತ್ತಾರೆ ಎಂದು ಆಮಿರ್ ಖಾನ್ ಅವರಿಗೆ ಅನಿಸಿದೆ. ಹಾಗಾಗಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಿನಿಮಾವನ್ನು ಜೆನಿಲಿಯಾ ಒಪ್ಪಿಕೊಂಡಿದ್ದಾರೆ. ಆಮಿರ್ ಖಾನ್ ಮತ್ತು ಜೆನಿಲಿಯಾ ಅವರನ್ನು ಜೊತೆಯಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇಬ್ಬರ ಕೆಮಿಸ್ಟ್ರಿ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾದ ಪಾತ್ರವರ್ಗ ಮತ್ತು ತಂತ್ರಜ್ಞರ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ: Genelia Deshmukh: ಜೆನಿಲಿಯಾ ಸಿನಿಮಾದಿಂದ ದೂರ ಆಗಿದ್ದಕ್ಕೆ ಗಂಡ ಕಾರಣವೇ? ಕಡೆಗೂ ಬಾಯಿಬಿಟ್ಟ ನಟಿ
ಆಮಿರ್ ಖಾನ್ ಪಾಲಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಹಳ ವಿಶೇಷ. ಯಾಕೆಂದರೆ, ಇದು ಅವರ ಕಮ್ಬ್ಯಾಕ್ ಸಿನಿಮಾ. ಅವರು ನಟಿಸಿದ ‘ಥಗ್ಸ್ ಆಫ್ ಹಿಂದೂಸ್ತಾನ್’ ಮತ್ತು ‘ಲಾಲ್ ಸಿಂಗ್ ಛಡ್ಡಾ’ ಚಿತ್ರಗಳು ಸೋತವು. ಆ ಬಳಿಕ ಒಂದು ದೀರ್ಘ ಗ್ಯಾಪ್ ಪಡೆದುಕೊಂಡು ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.