ವಿಚ್ಛೇದನದ ಹಂತದಲ್ಲಿ ಗೋವಿಂದ ದಾಂಪತ್ಯ; ಪತಿಯಿಂದ ಮೋಸ ಆಗಿದೆ ಎಂದ ಸುನೀತಾ

ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ ನಡುವಿನ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಸುನೀತಾ ಅವರು ಮೋಸ ಮತ್ತು ನೋವಿನ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಗೋವಿಂದ ವಿಚಾರಣೆಗೆ ಗೈರುಹಾಜರಾಗಿದ್ದಾರೆ. ಈ ವಿಷಯದಲ್ಲಿ ಸುನೀತಾ ಅವರು ವ್ಲಾಗ್ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವಿಚ್ಛೇದನದ ಹಂತದಲ್ಲಿ ಗೋವಿಂದ ದಾಂಪತ್ಯ; ಪತಿಯಿಂದ ಮೋಸ ಆಗಿದೆ ಎಂದ ಸುನೀತಾ
ಗೋವಿಂದ
Edited By:

Updated on: Aug 23, 2025 | 7:53 AM

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಗೋವಿಂದ (Govinda) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಗೋವಿಂದ ಮರಾಠಿ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗೋವಿಂದ ಅವರಿಂದ ಬೇರ್ಪಡಲು ಸುನೀತಾ ಅಹುಜಾ ಬಯಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಈಗ ಗೋವಿಂದ ಅವರ ಪತ್ನಿ ಸುನೀತಾ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಗೋವಿಂದ ವಿಚಾರಣೆಗೆ ಗೈರುಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಗೋವಿಂದ ತನಗೆ ಮೋಸ ಮಾಡಿದ್ದಾರೆ ಮತ್ತು ನೋವುಂಟು ಮಾಡಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ.

ಗೋವಿಂದ ಅವರೊಂದಿಗಿನ ವಿಚ್ಛೇದನದ ವದಂತಿಗಳ ಕುರಿತು ಸುನೀತಾ ಅಹುಜಾ ಇತ್ತೀಚೆಗೆ ವ್ಲಾಗ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಈಗ, ಹೊಸ ಮಾಹಿತಿಯ ಪ್ರಕಾರ, ಸುನೀತಾ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ‘ಪ್ರೀತಿ ಮತ್ತು ಮದುವೆಯಲ್ಲಿ ಮೋಸ, ನೋವು ಮತ್ತು ಬೇರ್ಪಡುವಿಕೆ’ ಆಧಾರದ ಮೇಲೆ ಅವರು ಗೋವಿಂದ ವಿಚ್ಛೇದನವನ್ನು ಕೋರಿದ್ದಾರೆ. ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ, 195 ರ ಸೆಕ್ಷನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯವು ಮೇ 25ರಂದು ಗೋವಿಂದ ಅವರಿಗೆ ಸಮನ್ಸ್ ಕಳುಹಿಸಿತ್ತು. ವಿಚಾರಣೆಯ ಸಮಯದಲ್ಲಿ ಸುನೀತಾ ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಗೋವಿಂದ ಗೈರುಹಾಜರಾಗಿದ್ದರು.  ಹೀಗಾಗಿ, ವಿಚಾರಣೆ ಮುಂದಕ್ಕೆ ಹೋಗುತ್ತಲೇ ಇದೆ.

ಇದನ್ನೂ ಓದಿ
‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ದೀಪಿಕಾ ದಾಸ್
ವಿಶೇಷ ದಿನದಂದೇ ವಿವಾಹ ಆಗುತ್ತಿದ್ದಾರೆ ಆ್ಯಂಕರ್ ಅನುಶ್ರೀ; ಇಲ್ಲಿದೆ ವಿವರ
‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ​ ಋಣ ತೀರಿಸಿದ ರಾಜ್
ನಟ ಚಿರಂಜೀವಿ ಅದೆಷ್ಟು ಶ್ರೀಮಂತ ನೋಡಿ; ಪ್ರೈವೆಟ್ ಜೆಟ್ ಒಡೆಯ

ಇದನ್ನೂ ಓದಿ: ‘ಜೀವನ ಹಾಳು ಮಾಡುತ್ತಿದ್ದೀರಿ’: ನಟ ಗೋವಿಂದ ಬಗ್ಗೆ ಪತ್ನಿ ಸುನೀತಾ ಟೀಕೆ

ಈ ವರ್ಷದ ಫೆಬ್ರವರಿಯಲ್ಲಿ, ಗೋವಿಂದ ಮತ್ತು ಸುನೀತಾ ಅಹುಜಾ ನಿರಂತರ ಭಿನ್ನಾಭಿಪ್ರಾಯಗಳು ಮತ್ತು ವಿಭಿನ್ನ ಜೀವನಶೈಲಿಯಿಂದಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿಕೊಂಡವು. 30 ವರ್ಷದ ಮರಾಠಿ ನಟಿಯೊಂದಿಗೆ ಗೋವಿಂದ ಅವರ ಹೆಚ್ಚುತ್ತಿರುವ ನಿಕಟತೆಯೇ ಅವರ ಬೇರ್ಪಡುವಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿತ್ತು. ನಂತರ, ದಂಪತಿಗಳು ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಈಗ ಅವರು ಮತ್ತೆ ಒಟ್ಟಿಗೆ ಸೇರಲು ಯೋಜಿಸುತ್ತಿದ್ದಾರೆ ಎಂದು ಅವರ ವಕೀಲರು ಹೇಳಿದ್ದರು. ಅಲ್ಲದೆ, ನನ್ನನ್ನು ಪತಿಯಿಂದ ದೂರ ಮಾಡಲು ಯಾರೂ ಸಾಧ್ಯವಿಲ್ಲ ಎಂದು ಸುನೀತಾ ಅವರು ನಿರಂತರವಾಗಿ ಹೇಳುತ್ತಲೇ ಬರುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.