AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಸಿನಿಮಾ ತಂಡ ಸೇರಿದ ನುರಿತ ಹಾಲಿವುಡ್ ತಂತ್ರಜ್ಞ

Ramayana movie: ‘ರಾಮಾಯಣ’ ಸಿನಿಮಾಕ್ಕಾಗಿ ಸಿನಿಮಾ ಜಗತ್ತಿನ ಶ್ರೇಷ್ಠ ತಂತ್ರಜ್ಞಾನವನ್ನು, ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ನಮಿತ್ ಮಲ್ಹೋತ್ರಾ, ಹಾಲಿವುಡ್​ನ ಟಾಪ್ ವಿಎಫ್​​ಎಕ್ಸ್ ಸ್ಟುಡಿಯೋದ ಸಹಮಾಲೀಕರು ಹಾಗೂ ಸಿಇಓ ಸಹ ಆಗಿದ್ದಾರೆ. ಹಾಗಾಗಿ ‘ರಾಮಾಯಣ’ ಸಿನಿಮಾಕ್ಕೆ ವಿಶ್ವ ಶ್ರೇಷ್ಠ ವಿಎಫ್​​ಎಕ್ಸ್ ತಂತ್ರಜ್ಞಾನ ಬಳಸಲಾಗುತ್ತಿದೆ.

‘ರಾಮಾಯಣ’ ಸಿನಿಮಾ ತಂಡ ಸೇರಿದ ನುರಿತ ಹಾಲಿವುಡ್ ತಂತ್ರಜ್ಞ
Ramayana
ಮಂಜುನಾಥ ಸಿ.
|

Updated on:Sep 05, 2025 | 12:27 PM

Share

ರಣ್​​ಬೀರ್ ಕಪೂರ್ (Ranbir Kapoor), ಸಾಯಿ ಪಲ್ಲವಿ, ಯಶ್ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​​ನ ಸಿನಿಮಾ ಆಗಿದೆ. ಈ ಸಿನಿಮಾವನ್ನು ಹಾಲಿವುಡ್​​ ಸಿನಿಮಾಗಳ ಗುಣಮಟ್ಟದಲ್ಲಿಯೇ ನಿರ್ಮಿಸಲಾಗುತ್ತಿದೆ. ಸಿನಿಮಾಕ್ಕಾಗಿ ಸಿನಿಮಾ ಜಗತ್ತಿನ ಶ್ರೇಷ್ಠ ತಂತ್ರಜ್ಞಾನವನ್ನು, ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ನಮಿತ್ ಮಲ್ಹೋತ್ರಾ, ಹಾಲಿವುಡ್​ನ ಟಾಪ್ ವಿಎಫ್​​ಎಕ್ಸ್ ಸ್ಟುಡಿಯೋದ ಸಹಮಾಲೀಕರು ಹಾಗೂ ಸಿಇಓ ಸಹ ಆಗಿದ್ದಾರೆ. ಹಾಗಾಗಿ ‘ರಾಮಾಯಣ’ ಸಿನಿಮಾಕ್ಕೆ ವಿಶ್ವ ಶ್ರೇಷ್ಠ ವಿಎಫ್​​ಎಕ್ಸ್ ತಂತ್ರಜ್ಞಾನ ಬಳಸಲಾಗುತ್ತಿದೆ.

‘ಹ್ಯಾರಿಪಾಟರ್’ನ ಎಲ್ಲ ಸಿನಿಮಾಗಳು, ಜೇಮ್ಸ್ ಬಾಂಡ್ ಸರಣಿಯ ಹಲವು ಸಿನಿಮಾಗಳು, ‘ಡಾರ್ಕ್ ನೈಟ್’ ಸರಣಿಯ ಸಿನಿಮಾಗಳು ಇನ್ನೂ ಹಲವಾರು ವಿಶ್ವದ ಅತ್ಯುತ್ತಮ ಸಿನಿಮಾಗಳಿಗೆ ವಿಎಫ್​ಎಕ್ಸ್ ನೀಡಿರುವ ಡಿಎನ್​​ಇಜಿ ಸಂಸ್ಥೆಯೇ ‘ರಾಮಾಯಣ’ ಸಿನಿಮಾಕ್ಕೂ ವಿಎಫ್​​ಎಕ್ಸ್ ಮಾಡುತ್ತಿದೆ. ಇದೀಗ ಈ ಸಿನಿಮಾದ ವಿಎಫ್​​ಎಕ್ಸ್ ಕಾರ್ಯದ ಮೇಲ್ವಿಚಾರಣೆಗೆಂದೇ ಹಾಲಿವುಡ್​​ನ ಅತ್ಯುತ್ತಮ ತಂತ್ರಜ್ಞ ಒಬ್ಬರನ್ನು ನೇಮಕ ಮಾಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಆದ ಜನಪ್ರಿಯ ಹಾಲಿವುಡ್ ಸಿನಿಮಾಗಳಾದ ‘ವೆನಮ್’, ‘ಕಾಂಗ್ vs ಗಾಡ್ಜಿಲ್ಲಾ’ ಇನ್ನೂ ಕೆಲವು ಸಿನಿಮಾಗಳ ವಿಎಫ್​​ಎಕ್ಸ್ ತಂಡದ ಪ್ರಮುಖ ವ್ಯಕ್ತಿಯಾಗಿದ್ದ ಕ್ಸೇವಿಯರ್ ಬೆರ್ನಾಶೋನಿ ಅವರನ್ನು ‘ರಾಮಾಯಣ’ ಸಿನಿಮಾದ ವಿಎಫ್​​ಎಕ್ಸ್​ ಕಾರ್ಯದ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಅದರಲ್ಲಿಯೂ ‘ರಾಮಾಯಣ’ ಸಿನಿಮಾದ ಎರಡನೇ ಭಾಗದ ವಿಎಫ್​​ಎಕ್ಸ್ ಕಾರ್ಯಕ್ಕೆ ಸಂಪೂರ್ಣ ಹೊಣೆಗಾರರು ಕ್ಸೇವಿಯರ್ ಅವರೇ ಆಗಿರಲಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ದಲ್ಲಿ ಯಶ್ ಸ್ಕ್ರೀನ್​ ಟೈಮ್ ಬಗ್ಗೆ ಸಿಕ್ಕಿತು ಸ್ಪಷ್ಟನೆ

‘ರಾಮಾಯಣ’ ಸಿನಿಮಾದ ಎರಡನೇ ಭಾಗದಲ್ಲಿ ಅತಿ ಹೆಚ್ಚು ವಿಎಫ್​​ಎಕ್ಸ್ ಬಳಕೆ ಆಗಲಿರುವ ಕಾರಣದಿಂದಾಗಿ ಅತ್ಯುತ್ತಮ ತಂತ್ರಜ್ಞರನ್ನೇ ವಿಎಫ್​​ಎಕ್ಸ್​​ನ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ‘ರಾಮಾಯಣ 2’ ಸಿನಿಮಾಕ್ಕೆ ಈಗಾಗಲೇ ಕೆಲಸಗಳನ್ನು ಕ್ಸೇವಿಯರ್ ಪ್ರಾರಂಭ ಮಾಡಿದ್ದು ಹಲವು ಮಾಡೆಲ್​​ಗಳನ್ನು ತಯಾರು ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾನಲ್ಲಿ ಕೌಸಲ್ಯ ಪಾತ್ರದಲ್ಲಿ ನಟಿಸುತ್ತಿರುವ ಇಂದಿರಾ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡಿ, ‘ರಾಮಾಯಣ’ ಸಿನಿಮಾನಲ್ಲಿ ಹೊಸ ಲೋಕವನ್ನೇ ಸೃಷ್ಟಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ವಿಎಫ್​​ಎಕ್ಸ್ ಬಳಕೆ ಮಾಡಲಾಗುತ್ತಿದೆ. ನನ್ನ ವಿಎಫ್​​ಎಕ್ಸ್​ ಮೆಶರ್​​ಮೆಂಟ್​ಗೆ ಹೋಗಿದ್ದಾಗ ಕ್ರಿಸ್ಟೊಫರ್ ನೋಲನ್ ಅವರ ‘ಇಂಟರ್ಸ್ಟೆಲ್ಲರ್’ಗೆ ಬಳಕೆ ಮಾಡಿದ್ದ ಯಂತ್ರವನ್ನು ತರಲಾಗಿತ್ತು. ಅದಕ್ಕೆ 86 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ನಾನು ಹೇಗೆ ನಡೆಯುತ್ತೇನೆ, ಹೇಗೆ ಮುಖಭಾವ ಬದಲಿಸುತ್ತೇನೆ ಎಲ್ಲವೂ ಅದರಲ್ಲಿ ಅಡಕವಾಗಿದೆ. ‘ರಾಮಾಯಣ’ ಅತ್ಯುತ್ತಮ ದೃಶ್ಯಗಳಿಂದ ಕೂಡಿದ ಸಿನಿಮಾ ಆಗಿದೆ’ ಎಂದಿದ್ದರು.

ಸಿನಿಮಾ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 am, Fri, 5 September 25