ಟ್ರ್ಯಾಕ್ಟರ್ ಇದ್ದಿದ್ದರೆ ರೈತನಾಗುತ್ತಿದ್ದ ಪಂಕಜ್ ತ್ರಿಪಾಠಿ; ಆದರೆ ಅಲ್ಲಾಗಿದ್ದೇ ಬೇರೆ
Pankaj Tripathi Birthday:ಪಂಕಜ್ ತ್ರಿಪಾಠಿ ಅವರು ಬಾಲಿವುಡ್ ನಲ್ಲಿ ಯಶಸ್ವಿಯಾಗಿ ನಟನೆಯನ್ನು ಮಾಡುತ್ತಿದ್ದಾರೆ. ರೈತ ಕುಟುಂಬದಿಂದ ಬಂದ ಅವರು, ವೈದ್ಯಕೀಯ ವೃತ್ತಿಯನ್ನು ಬಿಟ್ಟು ನಟನೆಯತ್ತ ಹೆಜ್ಜೆ ಹಾಕಿದರು. 'ಗ್ಯಾಂಗ್ಸ್ ಆಫ್ ವಸೇಪುರ್' ಚಿತ್ರದಿಂದ ಅವರಿಗೆ ಖ್ಯಾತಿ ದೊರೆಯಿತು. 'ಮಿರ್ಜಾಪುರ್' ವೆಬ್ ಸರಣಿಯಲ್ಲಿನ ಅವರ ಪಾತ್ರ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತು.

ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಖ್ಯಾತಿ ಪಂಕಜ್ ತ್ರಿಪಾಠಿ (Pankaj Tripathi) ಅವರಿಗೆ ಇದೆ. ಅವರು ಅನೇಕರ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಂತ ಹಂತವಾಗಿ ಮೇಲಕ್ಕೆ ಬಂದಿದ್ದಾರೆ. ಅವರು ಇದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಸ್ತ್ರೀ 2’ ಸಿನಿಮಾ ಸೂಪರ್ ಹಿಟ್ ಆಯಿತು. ಅವರು ಮಾಡಿದ ಪಾತ್ರಕ್ಕೆ ತೂಕ ಇದೆ. ಅವರು ಇನ್ನೂ ಕೆಲವರು ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಇಂದು (ಸೆಪ್ಟೆಂಬರ್ 5) ಜನ್ಮದಿನ. ಅವರು ರೈತನಾಗಬೇಕಿತ್ತು, ಆದರೆ ಈಗ ಹೀರೋ ಆಗಿದ್ದಾರೆ.
‘ನಾನು ರೈತನಾಗಬೇಕಿತ್ತು. ನನಗೆ ಟ್ರ್ಯಾಕ್ಟರ್ ಖರೀದಿ ಮಾಡಬೇಕು ಎಂಬ ಆಸೆ ಇತ್ತು. ಸಣ್ಣಿದ್ದಾಗಲೇ ಈ ಆಸೆ ಇತ್ತು. ಟ್ರ್ಯಾಕ್ಟರ್ ಇಲ್ಲ ಎಂಬ ಬೇಸರ ಆಗುತ್ತಿತ್ತು. ಟ್ರ್ಯಾಕ್ಟರ್ ಇದ್ದಿದ್ದೆ ಒಳ್ಳೆಯ ರೈತನಾಗಬಹುದು ಎಂದುಕೊಂಡಿದ್ದೆ. ಚೆನ್ನಾಗಿ ಓದಿ ಡಾಕ್ಟರ್ ಆದರೆ ಹಣ ಮಾಡಬಹುದು ಎಂದುಕೊಂಡೆ. ಆ ಹಣದಿಂದ ಟ್ರ್ಯಾಕ್ಟರ್ ಖರೀದಿಸಬಹುದು ಎಂದುಕೊಂಡಿದ್ದೆ. ನಾನು ಡಾಕ್ಟರ್ ಓದಲು ಪಾಟ್ನಾ ಹೋದೆ. ಆದರೆ, ವೈದ್ಯನಾಗಿಲ್ಲ’ ಎಂದು ಅವರು ಹೇಳಿದ್ದರು.
ಪಂಕಜ್ ಅವರ ತಂದೆ ರೈತ ಆಗಿದ್ದರು. ಈ ಬಗ್ಗೆ ಅವರು ಮಾತನಾಡಿದ್ದರು. ನಟ ಆಗದೇ ಇದ್ದಿದ್ದರೆ ಏನಾಗುತ್ತಿದ್ದಿರಿ ಎಂದು ಅವರಿಗೆ ಈ ಮೊದಲು ಪ್ರಶ್ನೆ ಮಾಡಲಾಗಿತ್ತು. ‘ನನ್ನ ತಂದೆ ರೈತ ವೃತ್ತಿ ಮಾಡುತ್ತಿದ್ದರು. ನಾನು ನಟನಾಗದೇ ಇದ್ದಿದ್ದರೆ ಊರಿನಲ್ಲಿ ರೈತನಾಗಿ ಇರುತ್ತಿದ್ದೆ. ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇತ್ತು. ಅದನ್ನೂ ಪ್ರಯತ್ನಿಸುತ್ತಿದ್ದೆನೇನೋ’ ಎಂದು ಅವರು ಹೇಳಿದ್ದರು.
2003ರಲ್ಲಿ ರಿಲೀಸ್ ಆದ ಕನ್ನಡದ ‘ಚಿಗುರಿದ ಕನಸು’ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. ಆ ಬಳಿಕ ‘ರನ್’, ‘ಓಂಕಾರ್’ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. 2012ರಲ್ಲಿ ಆದ ‘ಗ್ಯಾಂಗ್ಸ್ ಆಫ್ ವಸೇಪುರ್’ ಚಿತ್ರದಲ್ಲಿ ನಟಿಸಿ ಅವರು ಸಾಕಷ್ಟು ಫೇಮಸ್ ಆದರು. ‘ಫಕ್ರೆ’, ‘ಮಸಾನ್’, ‘ಬರೇಲಿ ಕಿ ಬರ್ಫಿ’, ‘ನ್ಯೂಟನ್’, ‘ಸ್ತ್ರೀ’, ‘ಮಿಮಿ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ವಿದ್ಯಾದಾನ ಮಾಡಿದವರ ಋಣ ತೀರಿಸಿದ ಪಂಕಜ್ ತ್ರಿಪಾಠಿ; ಸರ್ಕಾರಿ ಶಾಲೆಗೆ ಮರುಹುಟ್ಟು
‘ಮಿರ್ಜಾಪುರ್’ ಹೆಸರಿನ ವೆಬ್ ಸರಣಿಯಲ್ಲಿ ಪಂಕಜ್ ನಟಿಸಿದರು. ಇದರ ಮೂಲಕ ಅವರ ಫೇಮಸ್ ಆದರು. ಅವರಿಗೆ ಸರಣಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ‘ಕ್ರಿಮಿನಲ್ ಜಸ್ಟಿಸ್’, ‘ಯುವರ್ಸ್ ಟ್ರ್ಯೂಲಿ’, ‘ಕ್ರಿಮಿನಲ್ ಜಸ್ಟೀಸ್: ಬಿಹೈಂಡ್ ಕ್ಲೋಸ್ಡ್ ಡೋರ್ಸ್’ ಸೀರಿಸ್ಗಳಲ್ಲಿ ಅವರು ನಟಿಸಿದ್ದಾರೆ. ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ದಲ್ಲಿ ಪಂಕಜ್ ತ್ರಿಪಾಠಿ ನಟನಾ ತರಬೇತಿ ಪಡೆದರು. ನಂತರ ಅವರು ನಟನೆಯಲ್ಲಿ ಪಳಗಿದರು. ಬಿಹಾರ ಮೂಲದ ಅವರು ಈಗ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







