ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಸಂಭಾವನೆ ಎಷ್ಟು?

Arijit Singh: ಅರಿಜಿತ್ ಸಿಂಗ್ ಭಾರತದ ಅತ್ಯುತ್ತಮ ಸಿನಿಮಾ ಗಾಯಕ. ಅರಿಜಿತ್ ಸಿಂಗ್​ರ ಲೈವ್ ಕಾನ್ಸರ್ಟ್​ಗಳಿಗೆ ಭಾರಿ ಸಂಖ್ಯೆಯ ಜನ ಬರುತ್ತಾರೆ. ಅಂದಹಾಗೆ ಮದುವೆಯಲ್ಲಿ ಹಾಡು ಹಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ.

ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಸಂಭಾವನೆ ಎಷ್ಟು?
Edited By:

Updated on: Sep 22, 2024 | 12:17 PM

ಗ್ರ್ಯಾಂಡ್ ಆಗಿ ಮದುವೆ ಆಗಬೇಕು ಎಂಬುದು ಅನೇಕರ ಕನಸು. ಅದೇ ರೀತಿ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬುದು ಕೆಲವರ ಕನಸಾಗಿರುತ್ತದೆ. ದೊಡ್ಡ ಉದ್ಯಮಿಗಳು ಸದಾ ಖ್ಯಾತ ಸೆಲೆಬ್ರಿಟಿಗಳನ್ನು, ಗಾಯಕರನ್ನು ಕರೆಸಿ ಹಾಡಿಸೋ ಟ್ರೆಂಡ್ ಚಾಲ್ತಿಯಲ್ಲಿ ಇದೆ. ಈ ರೀತಿ ಅವರನ್ನು ಕರೆದಾಗ ಅವರು ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅರಿಜಿತ್ ಸಿಂಗ್ ಅವರು ಪ್ರತಿ ಮದುವೆಯಲ್ಲಿ ಭಾಗಿ ಆಗಲು, ದೊಡ್ಡ ಕಾರ್ಯಕ್ರಮ ನೀಡಲು ಎಷ್ಟು ಪಡೆಯುತ್ತಾರೆ ಅನ್ನೋದು ಗೊತ್ತೇ? ಆ ಬಗ್ಗೆ ಇಲ್ಲಿದೆ ವಿವರ.

ಅರಿಜಿತ್ ಸಿಂಗ್ ಅವರು ಅನೇಕ ಕಾನ್ಸರ್ಟ್ ನೀಡುತ್ತಾರೆ. ಅವರು ಸಂಗೀತ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕರ ಆಸೆ. ಅವರು ಅನೇಕ ಕಡೆಗಳಲ್ಲಿ ಕಾನ್ಸರ್ಟ್ ನೀಡುತ್ತಾರೆ. ಅವರು ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರು. ಅರಿಜಿತ್ ಸಿಂಗ್ ಅವರು ಮದುವೆ ಅಥವಾ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿ ಆಗಲು 5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.

ಅರಿಜಿತ್ ಸಿಂಗ್ ಅವರು ರಿಯಾಲಿಟಿ ಶೋಗಳ ಮೂಲಕ ಎಲ್ಲರಿಗೂ ಪರಿಚಿತರಾದರು. ಆ ಬಳಿಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ನಂತರ ಅವರಿಗೆ ಸಿನಿಮಾ ಆಫರ್ಗಳು ಬರೋಕೆ ಆರಂಭ ಆದವು. ‘ಸೋಚ್ ನಾ ಸಕೆ’, ‘ಆಯತ್’, ‘ಲಾಲ್ ಇಷ್ಕ್’, ‘ಚನ್ನ ಮೆರೆಯಾ..’, ‘ತುಮ್ ಹಿ ಹೋ’, ಫಿರ್ ಲೇ ಆಯಾ ದಿಲ್’ ಸೇರಿ ಅನೇಕ ಹಿಂದಿ ಹಾಡುಗಳನ್ನು ಹಾಡಿದ್ದರು.

ಇದನ್ನೂ ಓದಿ:Arijit Singh: ಗುಂಪಿನಲ್ಲಿ ಅರಿಜಿತ್​ ಸಿಂಗ್​​ ಕೈ ಎಳೆದ ಮಹಿಳಾ ಅಭಿಮಾನಿ; ಗಾಯಗೊಂಡ ಗಾಯಕನ ವಿಡಿಯೋ ವೈರಲ್​

ಅರಿಜಿತ್ ಸಿಂಗ್ ಅವರು ಕನ್ನಡದಲ್ಲಿ ಕೇವಲ ಎರಡು ಹಾಡನ್ನು ಹಾಡಿದ್ದಾರೆ. 2014ರಲ್ಲಿ ರಿಲೀಸ್ ಆದ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡನ್ನು ಹಾಡಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದ ಕನ್ನಡ ವರ್ಷನ್ ‘ದೇವ ದೇವ..’ ಹಾಡನ್ನು ಹಾಡಿದ್ದರು.

ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ಲಂಡನ್ಗೆ ತೆರಳಿದ್ದರು. ಈ ವೇಳೆ ಅವರೇ ಬರೆದ ‘ಪ್ರೊಟೆಸ್ಟ್’ ಹಾಡನ್ನು ಹಾಡಿ ಎಂದು ಕೆಲ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಇದರಿಂದ ಸಿಟ್ಟಾದ ಅರಿಜಿತ್ ಸಿಂಗ್ ಅವರು, ‘ಇದು ಸಮಯವಲ್ಲ. ನಾನು ಇಲ್ಲಿ ಬಂದಿರೋದು ಮನರಂಜನೆ ಮಾಡಲು’ ಎಂದು ಹೇಳಿದ್ದರು. ಅವರು ಈ ರೀತಿ ಸಿಟ್ಟಾಗೋದು ತುಂಬಾನೇ ಕಡಿಮೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us