ಸ್ಟಾರ್ ನಟರಾದ ಜಾನ್ ಅಬ್ರಾಹಂ ಮತ್ತು ಹೃತಿಕ್ ರೋಷನ್ (Hrithik Roshan) ಅವರ ಬಗ್ಗೆ ಈಗೊಂದು ಅಪರೂಪದ ಮಾಹಿತಿ ಹೊರಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಟೋ ವೈರಲ್ ಆಗಿದೆ. ಹೃತಿಕ್ ರೋಷನ್ ಮತ್ತು ಜಾನ್ ಅಬ್ರಾಹಂ (John Abraham) ಅವರು ಸಹಪಾಠಿಗಳು ಆಗಿದ್ದರು ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ಈಗ ಈ ಫೋಟೋ (Hrithik Roshan Childhood Photo) ನೋಡಿದ ಬಳಿಕ ಎಲ್ಲರಿಗೂ ಅಚ್ಚರಿ ಆಗಿರುವುದಂತೂ ನಿಜ. ಇವರಿಬ್ಬರೂ ಈಗ ಬಾಲಿವುಡ್ನಲ್ಲಿ ಸ್ಟಾರ್ ಕಲಾವಿದರಾಗಿ, ಬಹುಬೇಡಿಕೆಯ ನಟರಾಗಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಅವರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು.
ಶಾಲೆಯಲ್ಲಿ ಓದುತ್ತಿರುವಾಗ ತೆಗೆದ ಗ್ರೂಪ್ ಫೋಟೋದಲ್ಲಿ ಹೃತಿಕ್ ರೋಷನ್ ಮತ್ತು ಜಾನ್ ಅಬ್ರಾಹಂ ಇದ್ದಾರೆ. ಹೃತಿಕ್ ರೋಷನ್ ಅವರು ಬಿಳಿ ಸಮವಸ್ತ್ರ ಧರಿಸಿದ್ದರೆ, ಜಾನ್ ಅಬ್ರಾಹಂ ಅವರು ಕಂದು ಬಣ್ಣದ ಸಮವಸ್ತ್ರ ಧರಿಸಿದ್ದಾರೆ. ತಮ್ಮ ನೆಚ್ಚಿನ ಹೀರೋಗಳು ಒಂದೇ ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.
Hrithik and John were classmates at Bombay Scottish School. The Kabir and Jim partnership goes back a long way then..#Pathaan pic.twitter.com/rmkJWAovmR
— Hipster (@Hipsterrrific) January 30, 2023
ಜಾನ್ ಅಬ್ರಾಹಂ ಮತ್ತು ಹೃತಿಕ್ ರೋಷನ್ ಅವರ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಹೃತಿಕ್ ರೋಷನ್ ಮತ್ತು ಜಾನ್ ಅಬ್ರಾಹಂ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಇಷ್ಟು ದಿನಗಳ ಕಾಲ ಕಾಣಿಸಿರದ ಈ ಫೋಟೋ ಈಗ ಏಕಾಏಕಿ ವೈರಲ್ ಆಗಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಲಿವ್-ಇನ್ ರಿಲೇಷನ್ಶಿಪ್
ಹೃತಿಕ್ ರೋಷನ್ ಅವರದ್ದು ಫಿಲ್ಮಿ ಕುಟುಂಬ. ಅವರ ತಂದೆ ರಾಕೇಶ್ ರೋಷನ್ ಹೆಸರಾಂತ ನಿರ್ಮಾಪಕ, ನಿರ್ದೇಶಕ. ಹೃತಿಕ್ ರೋಷನ್ ಅವರು ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಹೀರೋ ಆಗಿ ಮಿಂಚಿದರು. ಅವರು ಪ್ರತಿಭಾವಂತ ಡ್ಯಾನ್ಸರ್ ಕೂಡ ಹೌದು. ಈಗ ಅವರಿಗೆ ಭರ್ಜರಿ ಬೇಡಿಕೆ ಇದೆ. ‘ವಾರ್ 2’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇನ್ನು, ಜಾನ್ ಅಬ್ರಾಹಂ ಅವರು 2003ರಲ್ಲಿ ‘ಜಿಸ್ಮ್’ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದರು. ಆ ಸಿನಿಮಾದಲ್ಲಿ ಅವರು ಬಿಪಾಶಾ ಬಸು ಜೊತೆ ತೆರೆ ಹಂಚಿಕೊಂಡಿದ್ದರು. ಬಳಿಕ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.