‘ಡಾನ್ಸ್ ಮಾಡೋದು ನಿಲ್ಲಿಸೋಕೆ ಹೃತಿಕ್ ರೋಷನ್ ಕಾರಣ’; ಆರೋಪ ಮಾಡಿದ ಮನೋಜ್ ಬಾಜ್​ಪಾಯಿ

ಹೃತಿಕ್ ರೋಷನ್ ಅವರು ಡ್ಯಾನ್ಸ್ ಮಾಡುವ ಪರಿ ಅನೇಕರಿಗೆ ಇಷ್ಟವಾಗುತ್ತದೆ. ಅವರು ಸ್ಟೆಪ್ ಹಾಕುವುದನ್ನು ನೋಡೋದೆ ಅನೇಕರಿಗೆ ಇಷ್ಟ. ಅವರು ಡ್ಯಾನ್ಸ್ ಮಾಡುವುದನ್ನು ನೋಡಿ ನಾನೂ ಡ್ಯಾನ್ಸ್ ಮಾಡುತ್ತೇನೆ ಎಂದು ಹೊರಟವರ ಸಂಖ್ಯೆ ದೊಡ್ಡದಿದೆ.

‘ಡಾನ್ಸ್ ಮಾಡೋದು ನಿಲ್ಲಿಸೋಕೆ ಹೃತಿಕ್ ರೋಷನ್ ಕಾರಣ’; ಆರೋಪ ಮಾಡಿದ ಮನೋಜ್ ಬಾಜ್​ಪಾಯಿ
ಮನೋಜ್​-ಹೃತಿಕ್
Edited By:

Updated on: Dec 03, 2022 | 7:11 AM

ನಟ ಮನೋಜ್​ ಬಾಜ್​ಪಾಯಿ (Manoj Bajpayee) ಅವರು ತಮ್ಮ ಅಭಿನಯದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಯ ‘ಫ್ಯಾಮಿಲಿ ಮ್ಯಾನ್​’ (Family Man) ವೆಬ್​ಸೀರಿಸ್ ಸೂಪರ್ ಹಿಟ್ ಆಯಿತು. ಈ ಸರಣಿಯಲ್ಲಿ ಅವರ ನಟನೆ ನೋಡಿ ಫ್ಯಾನ್ಸ್ ತುಂಬಾನೇ ಇಷ್ಟಪಟ್ಟರು. ಈಗ ಅವರು ಹೃತಿಕ್ ರೋಷನ್ ಬಗ್ಗೆ ನೇರ ಆರೋಪ ಮಾಡಿದ್ದಾರೆ. ಅವರು ಡ್ಯಾನ್ಸ್ ಮಾಡೋದು ನಿಲ್ಲಿಸೋಕೆ ಹೃತಿಕ್ ಕಾರಣವಂತೆ! ಹಾಗಂತ ಇದು ಗಂಭೀರ ಆರೋಪವಲ್ಲ. ಫನ್ನಿಯಾಗಿ ಈ ವಿಚಾರ ಹೇಳಿದ್ದಾರೆ ಮನೋಜ್.

ಹೃತಿಕ್ ರೋಷನ್ ಅವರು ಡ್ಯಾನ್ಸ್ ಮಾಡುವ ಪರಿ ಅನೇಕರಿಗೆ ಇಷ್ಟವಾಗುತ್ತದೆ. ಅವರು ಸ್ಟೆಪ್ ಹಾಕುವುದನ್ನು ನೋಡೋದೆ ಅನೇಕರಿಗೆ ಇಷ್ಟ. ಅವರು ಡ್ಯಾನ್ಸ್ ಮಾಡುವುದನ್ನು ನೋಡಿ ನಾನೂ ಡ್ಯಾನ್ಸ್ ಮಾಡುತ್ತೇನೆ ಎಂದು ಹೊರಟವರ ಸಂಖ್ಯೆ ದೊಡ್ಡದಿದೆ. ಅದೇ ರೀತಿ ಡ್ಯಾನ್ಸ್ ನಿಲ್ಲಿಸಿದವರ ಪಟ್ಟಿ ಕೂಡ ಇದೆ. ಈ ಸಾಲಿಗೆ ಮನೋಜ್ ಬಾಜ್​ಪಾಯಿ ಕೂಡ ಸೇರ್ಪಡೆ ಆಗುತ್ತಾರೆ.

‘ಮಿಥುನ್ ಚಕ್ರವರ್ತಿ ಅವರ ಕಾಲದಲ್ಲೆಲ್ಲ ಚೆನ್ನಾಗಿಯೇ ಇತ್ತು. ಆದರೆ, ಹೃತಿಕ್​ ರೋಷನ್ ಬಂದು ಎಲ್ಲವನ್ನೂ ಹಾಳು ಮಾಡಿದರು. ಚಿಕ್ಕ ಚಿಕ್ಕ ಸ್ಟೆಪ್ ಹಾಕುತ್ತಿದ್ದವರು ನಿಲ್ಲಿಸಿಬಿಟ್ಟರು. ನಾನು ಕೂಡ’ ಎಂದಿದ್ದಾರೆ ಮನೋಜ್ ಬಾಜ್​ಪಾಯಿ. ಈ ಮೂಲಕ ಹೃತಿಕ್ ಸ್ಟೆಪ್​ಗಳನ್ನು ನೋಡಿ ಭಯ ಉಂಟಾಯಿತು ಎಂಬುದನ್ನು ಫನ್ನಿಯಾಗಿ ಹೇಳಿದ್ದಾರೆ. ಮನೋಜ್ ಬಾಜ್​ಪಾಯಿ ಅವರು ‘ಸಪ್ನೇ ಮೇ ಮಿಲ್ತಿ ಹೈ’ ಹೆಸರಿನ ವಿಡಿಯೋ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀವ್ಸ್ ಪಡೆದಿದೆ.

ಇದನ್ನೂ ಓದಿ
ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ
‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​
‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?
ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್​ ಬಾಜ​​ಪೇಯಿ ಜೀವನದ ಕಥೆ

ಇದನ್ನೂ ಓದಿ: ‘ಪುಷ್ಪ 2’ ಬಗ್ಗೆ ಹೆಚ್ಚಿತು ಅಂತೆ-ಕಂತೆ; ‘ಇಂಥ ಸುದ್ದಿ ಎಲ್ಲಿ ಸಿಗುತ್ತದೆ’ ಎಂದು ನೇರವಾಗಿ ಪ್ರಶ್ನೆ ಮಾಡಿದ ಮನೋಜ್​ ಬಾಜ್​ಪಾಯಿ

ಮನೋಜ್ ಬಾಜ್​ಪಾಯಿ ಅವರು ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜತೆ ‘ಫ್ಯಾಮಿಲಿ ಮ್ಯಾನ್​ 3’ ವೆಬ್ ಸರಣಿಯ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಈ ಸೀರಿಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ವೆಬ್​ ಸೀರಿಸ್​ನಲ್ಲಿ ಬಿಡುಗಡೆ ಆಗಿರುವ ಎರಡು ಸರಣಿಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಈಗ ಬರುತ್ತಿರುವ ಹೊಸ ಸೀರಿಸ್​ನಲ್ಲಿ ವೈರಸ್ ಕಥೆ ಹೇಳಲಾಗುತ್ತಿದೆ ಎನ್ನುವ ಸೂಚನೆಯನ್ನು ಈ ಮೊದಲೇ ನೀಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ