ಬಾಯ್​ಫ್ರೆಂಡ್ ​ಜತೆ ಎಂಗೇಜ್​ಮೆಂಟ್ ಮಾಡಿಕೊಂಡ ಆಮಿರ್ ಮಗಳು ಇರಾ ಖಾನ್; ಫ್ರೆಂಚ್​​ಕಿಸ್ ವಿಡಿಯೋ ವೈರಲ್

ಈಗ ಇಬ್ಬರೂ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ಈ ವಿಡಿಯೋವನ್ನು ಇರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್​​ಮಾಡಿಕೊಂಡಿದ್ದಾರೆ.

ಬಾಯ್​ಫ್ರೆಂಡ್ ​ಜತೆ ಎಂಗೇಜ್​ಮೆಂಟ್ ಮಾಡಿಕೊಂಡ ಆಮಿರ್ ಮಗಳು ಇರಾ ಖಾನ್; ಫ್ರೆಂಚ್​​ಕಿಸ್ ವಿಡಿಯೋ ವೈರಲ್
ಇರಾ-ನೂಪುರ್
Edited By:

Updated on: Sep 23, 2022 | 6:12 PM

ಸೆಲೆಬ್ರಿಟಿಗಳ ಮಕ್ಕಳು ಎಂದಾಕ್ಷಣ ಸಿನಿಮಾ ರಂಗಕ್ಕೆ ಕಾಲಿಡೋಕೆ ಕಾಯುತ್ತಿರುತ್ತಾರೆ. ನಿರ್ಮಾಪಕರೂ ಕೂಡ ಇವರಿಗೆ ಅವಕಾಶ ನೀಡೋಕೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ, ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್ (Ira Khan) ಆ ರೀತಿ ಅಲ್ಲ. ಚಿತ್ರರಂಗಕ್ಕೆ ಬರಬೇಕು ಎಂಬ ತುಡಿತ ಅವರಲ್ಲಿ ಹುಟ್ಟಿಲ್ಲ. ಸೆಲೆಬ್ರಿಟಿ ಮಗಳು ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಹಿಂಬಾಲಕರು ಇದ್ದಾರೆ. ಈಗ ಇರಾ ಖಾನ್ ಅವರು ಎಂಗೇಜ್​​ಮೆಂಟ್ ಮಾಡಿಕೊಂಡಿದ್ದಾರೆ. ಅವರ ಬಾಯ್​ಫ್ರೆಂಡ್ ನೂಪುರ್ ಶಿಖಾರೆ (Nupur Shikhare) ಸಾರ್ವಜನಿಕವಾಗಿ ಪೋಸ್ ಮಾಡಿ, ಉಂಗುರ ಹಾಕಿರುವ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಇರಾ ಹಾಗೂ ನೂಪುರ್ ಡೇಟಿಂಗ್ ಮಾಡುತ್ತಿದ್ದರು. ಇದನ್ನು ಇಬ್ಬರೂ ಮುಚ್ಚಿಟ್ಟಿಲ್ಲ. ನೂಪುರ್ ಜತೆ ಇರುವ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇರಾ ಹಂಚಿಕೊಳ್ಳುತ್ತಲೇ ಬಂದಿದ್ದರು. ಈಗ ಇಬ್ಬರೂ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ಈ ವಿಡಿಯೋವನ್ನು ಇರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್​​ಮಾಡಿಕೊಂಡಿದ್ದಾರೆ. ಇರಾ ಹಾಗೂ ನೂಪುರ್ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಇರಾಗೆ ನೂಪುರ್ ಉಂಗುರ ನೀಡಿ ಪ್ರಪೋಸ್ ಮಾಡಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್ ಮಗಳಿ​ಗೆ ನಿರಂತರವಾಗಿ ಕಾಡುತ್ತಿದೆ ಈ ಸಮಸ್ಯೆ; ಹೊರ ಬರಲು ದಾರಿ ಕಾಣದೆ ಒದ್ದಾಡುತ್ತಿದ್ದಾರೆ ಇರಾ
ಸ್ವಿಮ್ಮಿಂಗ್​ಪೂಲ್​ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಆಮಿರ್ ಮಗಳು ಇರಾ ಖಾನ್
ಸೀರೆ ಉಟ್ಟ ಆಮಿರ್ ಖಾನ್ ಮಗಳು ಇರಾ​ಗೆ ಬಾಯ್​ಫ್ರೆಂಡ್​ನಿಂದ ಮುತ್ತಿನ ಮಳೆ
ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

ಇರಾ ಒಂದು ಕಡೆಯಲ್ಲಿ ನಿಂತಿದ್ದರು. ಉಂಗುರ ಸಮೇತ ಬಂದ ನೂಪುರ್ ಅವರು, ‘ನೀನು ನನ್ನನ್ನು ಮದುವೆ ಆಗುತ್ತೀಯಾ’ ಎಂದು ಇರಾಗೆ ಕೇಳಿದ್ದಾರೆ. ಇದಕ್ಕೆ  ಆಮಿರ್ ಮಗಳು ಯೆಸ್ ಎಂದಿದ್ದಾರೆ. ನಂತರ ಇಬ್ಬರೂ ಫ್ರೆಂಚ್ ಕಿಸ್ ಮಾಡಿ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ.

ಈ ವಿಡಿಯೋವನ್ನು ಇರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ‘ನಾನು ಒಪ್ಪಿದೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇರಾ ಹಾಗೂ ನೂಪುರ್​ಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?

ಆಮಿರ್ ಖಾನ್ ಹಾಗೂ ರೀನಾ ದತ್ತ ವಿವಾಹವಾಗಿದ್ದರು. ನಂತರ ಇವರು ವಿಚ್ಛೇದನ ಪಡೆದರು. ಈ ದಂಪತಿಯ ಮಗಳು ಇರಾ. ಇರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಖಿನ್ನತೆಗೆ ಒಳಗಾದ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು. ದೇಹದ ತೂಕ ಹೆಚ್ಚುತ್ತಿರುವುದರಿಂದಲೂ ಅವರು ಆತಂಕಕ್ಕೆ ಒಳಗಾಗಿದ್ದರು.

Published On - 5:41 pm, Fri, 23 September 22