Tanushree Dutta: ‘ಕಾರಿನ​ ಬ್ರೇಕ್​ ಫೇಲ್​ ಮಾಡಿಸಿದ್ರು, ವಿಷ ಹಾಕ್ಸಿದ್ರು’; ಕೊಲೆ ಯತ್ನದ ಬಗ್ಗೆ ಬಾಯಿಬಿಟ್ಟ ನಟಿ ತನುಶ್ರೀ ದತ್ತ

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನುಶ್ರೀ ದತ್ತ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದ್ದಾರೆ.

Tanushree Dutta: ‘ಕಾರಿನ​ ಬ್ರೇಕ್​ ಫೇಲ್​ ಮಾಡಿಸಿದ್ರು, ವಿಷ ಹಾಕ್ಸಿದ್ರು’; ಕೊಲೆ ಯತ್ನದ ಬಗ್ಗೆ ಬಾಯಿಬಿಟ್ಟ ನಟಿ ತನುಶ್ರೀ ದತ್ತ
ತನುಶ್ರೀ ದತ್ತ
Follow us
TV9 Web
| Updated By: ಮದನ್​ ಕುಮಾರ್​

Updated on:Sep 23, 2022 | 7:48 AM

ನಟಿ ತನುಶ್ರೀ ದತ್ತ (Tanushree Dutta) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಿನಿಮಾ ಮಾಡಿ ಎಷ್ಟು ಫೇಮಸ್​ ಆದರೋ ಅದೇ ರೀತಿ ಮೀಟೂ ಪ್ರಕರಣದ ಕಾರಣದಿಂದಲೂ ಅಷ್ಟೇ ಸುದ್ದಿಯಾದರು. ಬಾಲಿವುಡ್​ ನಟ ನಾನಾ ಪಾಟೇಕರ್​ ಮೇಲೆ ಅವರು ನಾಲ್ಕು ವರ್ಷಗಳ ಹಿಂದೆ ಅನೇಕ ಆರೋಪಗಳನ್ನು ಮಾಡಿದ್ದರು. ಭಾರತದಲ್ಲಿ ಮೀಟೂ (MeToo) ಅಭಿಯಾನದ ಬಿರುಗಾಳಿ ಹೆಚ್ಚಾಗಲು ತನುಶ್ರೀ ದತ್ತ ಅವರೇ ಮುಖ್ಯ ಕಾರಣ. ಆದರೆ ತಮಗಾದ ಶೋಷಣೆಯ ಬಗ್ಗೆ ಬಾಯಿ ಬಿಟ್ಟ ನಂತರ ಅವರ ಮೇಲೆ ಕೊಲೆ ಪ್ರಯತ್ನಗಳು (Murder Attempt) ನಡೆದಿದ್ದವು. ಆ ವಿಚಾರವನ್ನು ತನುಶ್ರೀ ದತ್ತ ಈಗ ಬಹಿರಂಗಪಡಿಸಿದ್ದಾರೆ.

ತನುಶ್ರೀ ಅವರನ್ನು ಸಾಯಿಸಬೇಕು ಎಂಬ ಉದ್ದೇಶದಿಂದ ಅವರ ಕಾರಿನ ಬ್ರೇಕ್​ ಫೇಲ್​ ಮಾಡಿಸಲಾಗಿತ್ತು. ಕುಡಿಯುವ ನೀರಿನಲ್ಲಿ ವಿಷ ಹಾಕಿಸಲಾಗಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನುಶ್ರೀ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದ್ದಾರೆ. ‘ಒಂದು ವೇಳೆ ನನ್ನ ಪ್ರಾಣಕ್ಕೆ ಏನಾದರೂ ಆದರೆ ನಟ ನಾನಾ ಪಾಟೇಕರ್​, ಅವರ ಲೀಗಲ್​ ಟೀಮ್​ ಹಾಗೂ ಬಾಲಿವುಡ್​ ಮಾಫಿಯಾದವರೇ ಕಾರಣ’ ಎಂದು ಈ ಹಿಂದೆ ತನುಶ್ರೀ ಹೇಳಿಕೆ ನೀಡಿದ್ದರು.

‘ಒಂದೆರಡು ಬಾರಿ ನನ್ನ ಕಾರಿನ ಬ್ರೇಕ್​ ಫೇಲ್​ ಮಾಡಿಸಿದರು. ಅದರಿಂದ ನನಗೆ ಒಮ್ಮೆ ಅಪಘಾತವಾಯಿತು. ನನ್ನ ಮೂಳೆ ಮುರಿಯಿತು. ಚೇತರಿಸಿಕೊಳ್ಳಲು ನನಗೆ ಹಲವು ತಿಂಗಳುಗಳೇ ಬೇಕಾದವು. ನಮ್ಮ ಮನೆಯಲ್ಲಿ ಓರ್ವ ಕೆಲಸದವಳು ಇದ್ದಳು. ಆಕೆಯನ್ನು ಯಾರೋ ನಮ್ಮ ಮನೆಗೆ ಬೇಕಂತಲೇ ಕಳಿಸಿದ್ದರು ಎನಿಸುತ್ತದೆ. ಕುಡಿಯುವ ನೀರಿನಲ್ಲಿ ಆಕೆ ಏನೋ ಬೆರೆಸುತ್ತಿದ್ದಳು ಎಂಬುದು ನನ್ನ ಅನುಮಾನ. ಕ್ರಮೇಣ ನನ್ನ ಆರೋಗ್ಯ ಹದಗೆಟ್ಟಿತು’ ಎಂದಿದ್ದಾರೆ ತನುಶ್ರೀ ದತ್ತ.

ಇದನ್ನೂ ಓದಿ
Image
Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
Image
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
Image
Arjun Sarja: ಶ್ರುತಿ ಹರಿಹರನ್​ ಮೀಟೂ ಪ್ರಕರಣ: ಅರ್ಜುನ್​ ಸರ್ಜಾಗೆ ಜಯ
Image
ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

ಮೀಟೂ ವಿವಾದ ಭುಗಿಲೆದ್ದ ಬಳಿಕ ತನುಶ್ರೀ ಅವರು ಮತ್ತೆ ಬಾಲಿವುಡ್​ಗೆ ಮರಳಬೇಕು ಎಂದು ತೀರ್ಮಾನಿಸಿದ್ದರು. ಅನೇಕ ಪ್ರಾಜೆಕ್ಟ್​ಗಳಿಗೆ ಮಾತುಕತೆ ಕೂಡ ನಡೆದಿತ್ತು. ಆದರೆ ಮಾಫಿಯಾದ ಕಾರಣದಿಂದ ಆ ಎಲ್ಲ ಪ್ರಾಜೆಕ್ಟ್​ಗಳು ಕೈ ತಪ್ಪಿಹೋಗುವಂತಾಯಿತು ಎಂದು ಅವರು ಹೇಳಿದ್ದಾರೆ. ಒಂದು ಕಾಲದಲ್ಲಿ ತನುಶ್ರೀ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು.

ತನುಶ್ರೀ ಮೊದಲ ಬಾರಿ ನಟಿಸಿದ್ದು 2005ರಲ್ಲಿ ತೆರೆಕಂಡ ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದಲ್ಲಿ. ಆ ಚಿತ್ರದಲ್ಲಿ ಅವರು ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. 2010ರ ಬಳಿಕ ಅವರು ಯಾವುದೇ ಚಿತ್ರದಲ್ಲಿ ನಟಿಸಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:20 am, Fri, 23 September 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ