AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಲ್ಫಾ’ ಚಿತ್ರ ಪಾಕಿಸ್ತಾನದಲ್ಲಿ ಟ್ಯಾಕ್ಸ್​ ಫ್ರೀ? ಇದರ ಹಿಂದಿನ ಕಥೆ ಏನು?

‘ಆಲ್ಫಾ’ ಸಿನಿಮಾ ಒಂದು ಸ್ಪೈ ಯೂನಿವರ್ಸ್. ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ನಟಿಸಿದ್ದಾರೆ. ಈ ಸಿನಿಮಾ ಪಾಕಿಸ್ತಾನದಲ್ಲಿ ಟ್ಯಾಕ್ಸ್ ಫ್ರೀ ಆಗಿದೆಯೇ? ಚಿತ್ರದ ನೆಗೆಟಿವ್ ವಿಮರ್ಶೆಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್‌ಗಳ ಹಿಂದಿನ ಅಸಲಿ ಕಥೆ ಇಲ್ಲಿದೆ ನೋಡಿ.

‘ಆಲ್ಫಾ’ ಚಿತ್ರ ಪಾಕಿಸ್ತಾನದಲ್ಲಿ ಟ್ಯಾಕ್ಸ್​ ಫ್ರೀ? ಇದರ ಹಿಂದಿನ ಕಥೆ ಏನು?
ಆಲ್ಫಾ
ರಾಜೇಶ್ ದುಗ್ಗುಮನೆ
|

Updated on:Jul 04, 2026 | 2:47 PM

Share

ಮುಖ್ಯಾಂಶಗಳು

  • ‘ಆಲ್ಫಾ’ ಚಿತ್ರ ಪಾಕಿಸ್ತಾನದಲ್ಲಿ ಟ್ಯಾಕ್ಸ್​ ಫ್ರೀ?:
  • ವೈರಲ್ ಪೋಸ್ಟರ್‌ಗಳ ಹಿಂದಿನ ಅಸಲಿ ಸತ್ಯ
  • ‘ಧುರಂಧರ್’ ಸಿನಿಮಾಗೆ ಉಲ್ಟಾ ಕಥೆ: ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಆ ಒಂದು ಟ್ವಿಸ್ಟ್

ಆಲಿಯಾ ಭಟ್, ಶಾರ್ವರಿ ನಟನೆಯ ‘ಆಲ್ಫಾ’ ಸಿನಿಮಾ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ನೆಗೆಟಿವ್ ವಿಮರ್ಶೆ ಸಿಗುತ್ತಿದೆ. ಈ ಸಿನಿಮಾನ ಟೀಕಿಸಲು ಕೆಲವರು ಒಂದು ಹಂತ ಮುಂದಕ್ಕೆ ಹೋಗಿದ್ದಾರೆ. ‘ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ’ ಎಂಬ ಪೋಸ್ಟರ್ ಎಲ್ಲ ಕಡೆಗಳಲ್ಲಿ ವೈರಲ್ ಮಾಡಿದ್ದಾರೆ. ಇದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಆಲ್ಫಾ’ ಸಿನಿಮಾ ಒಂದು ಸ್ಪೈ ಯೂನಿವರ್ಸ್. ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಭಾರತದ ಸೋಲ್ಜರ್​​ನ ಪಾಕಿಸ್ತಾನ ಸ್ಪೈ ಎಂಬ ರೀತಿಯಲ್ಲಿ ತೋರಿಸಲಾಗಿದೆಯಂತೆ. ಇದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಇದು ಅನೇಕರಿಗೆ ಒಂದು ಜೋಕ್ ರೀತಿ ಕಾಣಿಸಿದೆ. ಹೀಗಾಗಿ, ಇದನ್ನು ಟೀಕಿಸಲಾಗುತ್ತಿದೆ.

‘ಧುರಂಧರ್’ ಚಿತ್ರದಲ್ಲಿ ಭಾರತದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅಲ್ಲಿನ ಗೂಢಾಚಾರಿಗಳನ್ನಾಗಿ ಮಾಡಿದ ರೀತಿಯಲ್ಲಿ ತೋರಿಸಲಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ‘ಆಲ್ಫಾ’ ಸಿನಿಮಾ ಇದೆ. ಹೀಗಾಗಿ, ಅನೇಕರು ಈ ಚಿತ್ರ ಪಾಕಿಸ್ತಾನದವರಿಗೆ ಖುಷಿ ಕೊಡುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಒಂದು ಹಂತ ಮುಂದಕ್ಕೆ ಹೋಗಿ, ‘ಪಾಕಿಸ್ತಾನದಲ್ಲಿ ಈ ಚಿತ್ರ ಟ್ಯಾಕ್ಸ್ ಫ್ರೀ ಮಾಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ‘ಧುರಂಧರ್ ಚಿತ್ರಕ್ಕೆ ಆಲ್ಫಾ ಮೂಲಕ ಕೌಂಟರ್ ಕೊಟ್ಟ ಪಾಕ್’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ರಣ್ವೀರ್ ಸಿಂಗ್

ಅಂದಹಾಗೆ, ಭಾರತದ ಯಾವ ಸಿನಿಮಾಗಳೂ ಪಾಕಿಸ್ತಾನದಲ್ಲಿ ರಿಲೀಸ್ ಆಗೋದಿಲ್ಲ. ಸದ್ಯ ವೈರಲ್ ಆಗುತ್ತಿರುವ ಪೋಸ್ಟ್​ ಹಾಗೂ ಟ್ವೀಟ್​​ಗಳು ಕೇವಲ ಚಿತ್ರವನ್ನು ಟೀಕೆ ಮಾಡಲು ಬಳಕೆ ಮಾಡುತ್ತಿರೋದು ಅಷ್ಟೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:45 pm, Sat, 4 July 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್
ಆರು ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ; ಹೋಗೋದು ಯಾರು?
ಆರು ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ; ಹೋಗೋದು ಯಾರು?
ದಸರಾ ರಜೆ: ಬೆಂಗಳೂರಿನಲ್ಲಿ ತಡರಾತ್ರಿ ವರೆಗೂ ಭಾರಿ ಟ್ರಾಫಿಕ್ ಜಾಮ್
ದಸರಾ ರಜೆ: ಬೆಂಗಳೂರಿನಲ್ಲಿ ತಡರಾತ್ರಿ ವರೆಗೂ ಭಾರಿ ಟ್ರಾಫಿಕ್ ಜಾಮ್