ಭಾರತ ಬಿಟ್ಟು ಓಡಿ ಹೋಗಲು ಪ್ಲ್ಯಾನ್ ಮಾಡಿದ್ದ ಜಾಕ್ವೆಲಿನ್; ಹೊರಬಿತ್ತು ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Oct 23, 2022 | 5:08 PM

ಸುಕೇಶ್ ಚಂದ್ರಶೇಖರ್​ನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಆತ ಜಾಕ್ವೆಲಿನ್ ಜತೆಗಿನ ಲವ್​ ಲೈಫ್ ಬಗ್ಗೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಜಾಕ್ವೆಲಿನ್ ಜತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡಿಸಿದ್ದ.

ಭಾರತ ಬಿಟ್ಟು ಓಡಿ ಹೋಗಲು ಪ್ಲ್ಯಾನ್ ಮಾಡಿದ್ದ ಜಾಕ್ವೆಲಿನ್; ಹೊರಬಿತ್ತು ವಿಚಾರ
ಜಾಕ್ವೆಲಿನ್-ಸುಕೇಶ್
Follow us on

ಸುಕೇಶ್ ಚಂದ್ರಶೇಖರ್ (Sukesh Chandrashekhar) ಮಾಡಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಹೆಸರು ಕೂಡ ಸೇರಿಕೊಂಡಿದೆ. ಸುಕೇಶ್ ನೀಡುತ್ತಿದ್ದ ಗಿಫ್ಟ್​ಗಳನ್ನು ಜಾಕ್ವೆಲಿನ್ ಅವರು ಪಡೆದುಕೊಂಡಿದ್ದಾರೆ. ಸುಕೇಶ್ ಮಾಡುತ್ತಿದ್ದ ಕೆಲಸಗಳೆಲ್ಲವೂ ಜಾಕ್ವೆಲಿನ್​ಗೆ ಗೊತ್ತಿತ್ತು ಎನ್ನಲಾಗಿದೆ. ಹೀಗಿರುವಾಗಲೇ ಜಾಕ್ವೆಲಿನ್ (Jacqueline Fernandez) ಬಗ್ಗೆ ಶಾಕಿಂಗ್ ವಿಚಾರ ಒಂದು ಹೊರಬಿದ್ದಿದೆ. ಸಾಕ್ಷ್ಯ ನಾಶ ಮಾಡಲು ಜಾಕ್ವೆಲಿನ್ ಪ್ರಯತ್ನಿಸಿದ್ದರಂತೆ. ಜತೆಗೆ ವಿದೇಶಕ್ಕೆ ಪರಾರಿ ಆಗಲೂ ಅವರು ಪ್ಲ್ಯಾನ್ ರೂಪಿಸಿದ್ದರು! ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಸುಕೇಶ್ ಚಂದ್ರಶೇಖರ್​ನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಆತ ಜಾಕ್ವೆಲಿನ್ ಜತೆಗಿನ ಲವ್​ ಲೈಫ್ ಬಗ್ಗೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಜಾಕ್ವೆಲಿನ್ ಜತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡಿಸಿದ್ದ. ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ನಟಿಗೆ ಐಷಾರಾಮಿ ಗಿಫ್ಟ್​ಗಳು ಸಿಕ್ಕ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಚಾರ್ಜ್​ಶೀಟ್​ನಲ್ಲಿ ಜಾಕ್ವೆಲಿನ್ ಹೆಸರನ್ನು ಸೇರಿಸಲಾಯಿತು. ಈ ಸಂಬಂಧ ಅವರು ನಿರೀಕ್ಷಣಾ ಜಾಮೀನು ಪಡೆದರು.

ಈಗ ಕೋರ್ಟ್​ ಜಾಕ್ವೆಲಿನ್ ಅವರ ಜಾಮೀನಿನ ಅವಧಿಯನ್ನು ವಿಸ್ತರಿಸಿದೆ. ಈ ಪ್ರಕರಣದ ವಿಚಾರಣೆ ವೇಳೆ ಜಾಕ್ವೆಲಿನ್ ಬಗ್ಗೆ ಇಡಿ ಶಾಕಿಂಗ್ ಮಾಹಿತಿ ರಿವೀಲ್ ಮಾಡಿದೆ. ‘ಜಾಕ್ವೆಲಿನ್ ಭಾರತ ಬಿಟ್ಟು ವಿದೇಶಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ತನಿಖೆ ವೇಳೆ ಜಾಕ್ವೆಲಿನ್​ ಮೊಬೈಲ್​ನಿಂದ ಮಾಹಿತಿಯನ್ನು ಡಿಲೀಟ್ ಮಾಡಿದ್ದಾರೆ. ಈ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ’ ಎಂದು ಇಡಿ ಅಧಿಕಾರಿಗಳು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
ಸುಕೇಶ್ ಕಳ್ಳಾಟ ಜಾಕ್ವೆಲಿನ್​ಗೆ ಗೊತ್ತಿತ್ತು, ಆದರೂ ರಿಲೇಶನ್​ಶಿಪ್​ನಲ್ಲಿದ್ದರು; ಚಾರ್ಜ್​ಶೀಟ್​​ನಲ್ಲಿ ಅಚ್ಚರಿಯ ಉಲ್ಲೇಖ
Jacqueline Fernandez: 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಆರೋಪಿ
‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​
ಜಾಕ್ವೆಲಿನ್ ಫರ್ನಾಂಡಿಸ್​ಗೆ ಶಾಕ್; 7 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ

ಇದನ್ನೂ ಓದಿ: 200 ಕೋಟಿ ರೂ. ವಂಚನೆ ಕೇಸ್​; ‘ರಕ್ಕಮ್ಮ’ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸಿಕ್ತು ಮಧ್ಯಂತರ ಜಾಮೀನು

ಆದರೆ, ಇದನ್ನು ಜಾಕ್ವೆಲಿನ್ ಪರ ವಕೀಲರು ಇದನ್ನು ತಳ್ಳಿ ಹಾಕಿದ್ದಾರೆ. ‘ನನ್ನ ಕಕ್ಷೀದಾರರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಅವರು ತನಿಖೆಗೆ ಸಹಕರಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಚಾರಣೆ ಬಳಿಕ ನಟಿಯ ನಿರೀಕ್ಷಣಾ ಜಾಮೀನಿನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.