Jawan: ‘ಅಣ್ಣಾ.. ಬೇಕಿದ್ರೆ 100, 200 ರೂಪಾಯಿ ಜಾಸ್ತಿ ತಗೊಳ್ಳಿ’; ಶಾರುಖ್​ ಖಾನ್​ಗೆ ಅಭಿಮಾನಿಯ ವಿಶೇಷ ಮನವಿ

| Updated By: ರಾಜೇಶ್ ದುಗ್ಗುಮನೆ

Updated on: May 08, 2023 | 7:15 AM

Jawan Release Date: ‘ಜವಾನ್​’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಕುರಿತು ಟ್ವಿಟರ್​ನಲ್ಲಿ ನೆಟ್ಟಿಗರೊಬ್ಬರು ಶಾರುಖ್ ಖಾನ್​ಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

Jawan: ‘ಅಣ್ಣಾ.. ಬೇಕಿದ್ರೆ 100, 200 ರೂಪಾಯಿ ಜಾಸ್ತಿ ತಗೊಳ್ಳಿ’; ಶಾರುಖ್​ ಖಾನ್​ಗೆ ಅಭಿಮಾನಿಯ ವಿಶೇಷ ಮನವಿ
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಸಿನಿಮಾದ ಗೆಲುವಿನ ಬಳಿಕ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಸ್ತುತ ಶಾರುಖ್​ ಖಾನ್​ ಅವರು ‘ಡಂಕಿ’ ಮತ್ತು ‘ಜವಾನ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಜವಾನ್​’ ಚಿತ್ರ (Jawan Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್​ ದಿನಾಂಕ ತಿಳಿಸಲು ಇತ್ತೀಚೆಗೆ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್​ 7ರಂದು ‘ಜವಾನ್​’ ತೆರೆಕಾಣಲಿದೆ ಎಂದು ಶಾರುಖ್​ ಖಾನ್​ ತಿಳಿಸಿದ್ದಾರೆ. ರಿಲೀಸ್​ ಡೇಟ್​ ತಿಳಿಸಿದ ಬಳಿಕ ಟ್ವಿಟರ್​ನಲ್ಲಿ ಅವರು ಅಭಿಮಾನಿಗಳ (Shah Rukh Khan Fans) ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಶಾರುಖ್​ ಖಾನ್​ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ವಿಚಿತ್ರವಾದ ಮನವಿಯೊಂದನ್ನು ಮುಂದಿಟ್ಟಿದ್ದಾರೆ.

‘ಜವಾನ್​’ ಚಿತ್ರಕ್ಕೆ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರ ಜೊತೆ ನಯನತಾರಾ, ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳಿ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೂನ್​ 2ರಂದು ‘ಜವಾನ್’ ಬಿಡುಗಡೆ ಆಗುವುದರಲ್ಲಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್​ ದಿನಾಂಕ ಸೆಪ್ಟೆಂಬರ್​ 7ಕ್ಕೆ ಮುಂದೂಡಲ್ಪಟ್ಟಿದೆ. ಇದರಿಂದ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​; ‘ಪಠಾಣ್​’ ಗೆದ್ದ ಮೇಲೆ ಸೊಕ್ಕು ಬಂತಾ?

‘ಜವಾನ್​’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಬೇಸರ ಮಾಡಿಕೊಂಡಿರುವ ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಶಾರುಖ್ ಖಾನ್​ಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ಅಣ್ಣಾ.. ಬೇಕಿದ್ದರೆ 100 ಅಥವಾ 200 ರೂಪಾಯಿ ಜಾಸ್ತಿ ತೆಗೆದುಕೊಳ್ಳಿ. ಜವಾನ್​ ಚಿತ್ರವನ್ನು ನಾಳೆಯೇ ರಿಲೀಸ್​ ಮಾಡಿ’ ಎಂದು ಕೋರಿಕೊಳ್ಳಲಾಗಿದೆ. ಅದಕ್ಕೆ ಶಾರುಖ್​ ಖಾನ್​ ಉತ್ತರ ನೀಡಿದ್ದು, ‘ಅಣ್ಣಾ.. ಇಷ್ಟು ದುಡ್ಡಲ್ಲಿ ಒಟಿಟಿ ಸಬ್​​ಸ್ಕ್ರಿಪ್ಷನ್​ ಕೂಡ ಬರೋದಿಲ್ಲ. ನಿಂಗೆ ಪೂರ್ತಿ ಪಿಕ್ಚರ್​ ಬೇಕಾ?’ ಎಂದು ಮರುಪ್ರಶ್ನೆ ಹಾಕಿದ್ದಾರೆ.

ಶಾರುಖ್​ ಖಾನ್​ ಅವರ ಹೋಂ ಬ್ಯಾನರ್​ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಶಾರುಖ್​ ಪತ್ನಿ ಗೌರಿ ಖಾನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಅಟ್ಲಿ ಕುಮಾ​ರ್​ ಜೊತೆ ಶಾರುಖ್​ ಖಾನ್​ ಅವರು ಮೊದಲ ಬಾರಿ ಕೈ ಜೋಡಿಸಿರುವುದರಿಂದ ಹೈಪ್​ ಹೆಚ್ಚಿದೆ. ದೇಶದ ವಿವಿಧ ನಗರಗಳಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.